ನವದೆಹಲಿ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್‌ಪಿಸಿಐ) ವಾಟ್ಸಪ್‌ಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್(ಯುಪಿಐ) ಮೂಲಕ ಡಿಜಿಟಲ್ ಪಾವತಿಯ ಸೇವೆಗಳನ್ನು 10 ಕೋಟಿ ಬಳಕೆದಾರರಿಗೆ ಒದಗಿಸಲು ಅನುಮತಿ ನೀಡಿದೆ.
ಈ ಹಿಂದೆ 4 ಕೋಟಿ ಬಳಕೆದಾರರಿಗೆ ವಾಟ್ಸಪ್‌ನಲ್ಲಿ ಯುಪಿಐ ಸೇವೆಯನ್ನು ಬಳಸಲು ಎನ್‌ಸಿಪಿಐ ಅವಕಾಶ ನೀಡಿತ್ತು. ಇದೀಗ ಎನ್‌ಸಿಪಿಐ 10 ಕೋಟಿ ಬಳಕೆದಾರರಿಗೆ ಸೇವೆ ಒದಗಿಸಲು ಅನುವು ಮಾಡಿಕೊಟ್ಟಿದೆ. ಇದನ್ನೂ ಓದಿ: ರಷ್ಯಾದಿಂದ ಹೊರನಡೆದ ಇನ್ಫೋಸಿಸ್
Advertisement
Advertisement
ಎನ್‌ಸಿಪಿಐ ಕಳೆದ ವರ್ಷ ನವೆಂಬರ್‌ನಲ್ಲಿ ವಾಟ್ಸಪ್‌ಗೆ 2 ಕೋಟಿ ಬಳಕೆದಾರರಿಗೆ ನೀಡಿದ್ದ ಸೇವೆಯ ಅನುಮತಿಯನ್ನು ದ್ವಿಗುಣಗೊಳಿಸಿತ್ತು. ಇದೀಗ 10 ಕೋಟಿ ಬಳಕೆದಾರರಿಗೆ ಯುಪಿಐ ಸೇವೆ ನೀಡಲು ಅನುಮತಿ ನೀಡಿದೆ. ಇದನ್ನೂ ಓದಿ: ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಲ್ಲ: ಪರಾಗ್ ಅಗರ್ವಾಲ್
Advertisement
ವಾಟ್ಸಪ್ ಭಾರತದಲ್ಲಿ ತನ್ನ ಎಲ್ಲಾ ಬಳಕೆದಾರರಿಗೂ ಯಾವುದೇ ಮಿತಿಯಿಲ್ಲದೇ ತನ್ನ ಯುಪಿಐ ಸೇವೆಯನ್ನು ಒದಗಿಸಲು ಅನುಮತಿ ಕೋರಿತ್ತು. ಆದರೆ ಎನ್‌ಸಿಪಿಐ ಒಂದೇ ಬಾರಿಗೆ ಈ ಸೇವೆಯನ್ನು ಬಳಕೆದಾರರಿಗೆ ನೀಡಲು ಅನುಮತಿ ಕೊಡದೇ ಹಂತ ಹಂತವಾಗಿ ಅವಕಾಶ ನೀಡುತ್ತಿದೆ. ಪ್ರಸ್ತುತ ಭಾರತದಲ್ಲಿ 48 ಕೋಟಿ ಜನ ವಾಟ್ಸಪ್ ಬಳಕೆ ಮಾಡುತ್ತಿದ್ದಾರೆ.