ಬೆಂಗಳೂರು: ಸಹಿ ಯಾಕೆ ಮಾಡಬಾರದು? ಮಾಡಿದರೆ ತಪ್ಪೇನು? ಅದು ನಮ್ಮ ಸಮಾಜದ ನಿರ್ಣಯ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೇಳಿದ್ದಾರೆ.
ಕಾಂತರಾಜು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Kantharaju Caste Census and Socio-Economic Survey) ವರದಿಯನ್ನು ಸರ್ಕಾರ ಸ್ವೀಕಾರ ಮಾಡದಂತೆ ಸಹಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಡಿಕೆಶಿ ಪ್ರತಿಕ್ರಿಯಿಸಿ ಸಹಿ ಹಾಕಿದ್ದನ್ನು ಒಪ್ಪಿಕೊಂಡರು.
Advertisement
ನಮ್ಮ ಸಮಾಜದ ನಿರ್ಣಯ ಬೇರೆ ರಾಜಕೀಯ ಬೇರೆ. ನಾನು ಮತ್ತು ಸಚಿವರು ಸಭೆಯಲ್ಲಿ ಭಾಗವಹಿಸಿದ್ದೇವೆ. ಸಮಾಜದ ಮುಖಂಡರು ವೈಜ್ಞಾನಿಕವಾಗಿ ಆಗಬೇಕು ಎಂದು ಹೇಳಿದ್ದಾರೆ ಎಂದರು.
Advertisement
Advertisement
ಕಾಂತರಾಜು ವರದಿ ತಿರಸ್ಕರಿಸುವಂತೆ ಒಕ್ಕಲಿಗರ ಸಂಘದ (Vokkaliga Community) ಆಗ್ರಹ ಪತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಹಿ ಹಾಕಿದ್ದಾರೆ. ಡಿಸಿಎಂ ಮಾತ್ರವಲ್ಲದೇ ಕಾಂಗ್ರೆಸ್ (Congress) ಪಕ್ಷದ ಬಹುತೇಕ ಒಕ್ಕಲಿಗ ನಾಯಕರು, ಇತರೇ ಪಕ್ಷಗಳ ಪ್ರಮುಖರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಜಾತಿ ಗಣತಿ ವರದಿ ಒಪ್ಪಬಾರದು: ಒಕ್ಕಲಿಗರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಏನು?
Advertisement
ನವೆಂಬರ್ 24ಕ್ಕೆ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗ ವರದಿ ಸಲ್ಲಿಸಲು ನಿರ್ಧರಿಸಿರುವ ಈ ಹೊತ್ತಲೇ ನಿರೀಕ್ಷೆಯಂತೆ ಸರ್ಕಾರದ ಒಳಗೆ-ಹೊರಗಿನಿಂದ ಜಾತಿಗಣತಿ ವರದಿ ಕಿಚ್ಚು ಹಬ್ಬತೊಡಗಿದೆ.
ಒಕ್ಕಲಿಗ ಸಂಘದ ಪತ್ರಕ್ಕೆ ಸಹಿ ಹಾಕಿದ ಕಾಂಗ್ರೆಸ್ ನಾಯಕರು ಯಾರು?
* ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
* ಚಲುವರಾಯಸ್ವಾಮಿ, ಸಚಿವ
* ರಾಮಲಿಂಗಾರೆಡ್ಡಿ, ಸಚಿವ
* ಎಂ.ಸಿ. ಸುಧಾಕರ್, ಸಚಿವ
* ಟಿ.ಬಿ. ಜಯಚಂದ್ರ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ
* ಶಿವಲಿಂಗೇಗೌಡ, ಶಾಸಕ
* ಎಂ. ಕೃಷ್ಣಪ್ಪ, ಶಾಸಕ
* ಶರತ್ ಬಚ್ಚೇಗೌಡ, ಶಾಸಕ