ನವದೆಹಲಿ: ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರ ಪದಚ್ಯುತಿಗೆ ಒತ್ತಾಯಿಸಿ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿರುವುದು ಅತ್ಯಂತ ವಿಷಾದನೀಯ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ಹೇಳಿದ್ದಾರೆ.
ಮೇಲ್ಮನೆಯ ಸಭಾಪತಿಯಾಗಿ ಪಕ್ಷಪಾತ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ, ಧನಕರ್ (Jagdeep Dhankhar) ಅವರನ್ನು ಪದಚ್ಯುತಿಗೊಳಿಸಲು ರಾಜ್ಯಸಭೆಯಲ್ಲಿ ಗೊತ್ತುವಳಿ ಮಂಡಿಸಲು ಇಂಡಿಯಾ ಬಣದ ಪಕ್ಷಗಳ ಸದಸ್ಯರು ಮಂಗಳವಾರ ನೋಟಿಸ್ ನೀಡಿದ್ದಾರೆ. ಈ ಕುರಿತು ರಿಜಿಜು ಮಾತನಾಡಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ ನೋಟಿಸ್‌ನಲ್ಲಿ ಈ ಹಿಂದೆ ಧನಕರ್ ಅವರು ಆರ್‌ಎಸ್‌ಎಸ್ ಅನ್ನು ಹೇಗೆ ಹೊಗಳಿದ್ದರು ಎಂಬ ಅಂಶವನ್ನು ಕಾಂಗ್ರೆಸ್ ಉಲ್ಲೇಖಿಸಿದೆ. ಅಲ್ಲದೇ ಧನಕರ್ ಆರ್‌ಎಸ್‌ಎಸ್‌ನ ಏಕಲವ್ಯ ಎಂದು ಬಣ್ಣಿಸಿದೆ. ಆರ್‌ಎಸ್‌ಎಸ್ ನಮ್ಮ ದೇಶದ ಹೆಮ್ಮೆಯ ಸಂಘಟನೆಯಾಗಿದೆ. ಆರ್‌ಎಸ್‌ಎಸ್ ಹೊಗಳೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಭಾರತ ದೇಶದ ಯಾವುದೇ ಸಂಘಟನೆಯನ್ನು ಹೊಗಳುವುದು ಕಾನೂನು ಬಾಹಿರ ಆಗುವುದಿಲ್ಲ. ಉಪರಾಷ್ಟ್ರಪತಿಗಳು ಆರ್‌ಎಸ್‌ಎಸ್ ಬಗ್ಗೆ ಒಳ್ಳೆಯ ಮಾತು ಆಡಿರುವುದನ್ನ ಅಪರಾಧ ಅಂತ ಹೇಗೆ ಪರಿಗಣಿಸಿದೆ ಎಂಬುದೇ ಆಶ್ಚರ್ಯವಾಗಿದೆ. ಗಾಂಧಿ ಕುಟುಂಬದೊಂದಿಗೆ ಜಾರ್ಜ್ ಸೊರೊಸ್ ಸಂಪರ್ಕದ ವಿಚಾರವನ್ನು ದಿಕ್ಕುತಪ್ಪಿಸಲು ಕಾಂಗ್ರೆಸ್ ತಂತ್ರ ಮಾಡಿದೆ ಎಂದು ರಿಜಿಜು ಹೇಳಿದ್ದಾರೆ.
Advertisement
ಧನಕರ್ ಅವರು ಅತ್ಯಂತ ವೃತ್ತಿಪರ ಮತ್ತು ನಿಷ್ಪಕ್ಷಪಾತ ಧೋರಣೆ ಉಳ್ಳವರು. ಈ ಅವಿಶ್ವಾಸ ನಿರ್ಣಯ ಅಂಗೀಕಾರವಾಗಬೇಕಾದರೆ ಸರಳ ಬಹುಮತ ಬೇಕು. ಆದರೆ, ವಿಪಕ್ಷಗಳಿಗೆ ಅಷ್ಟು ಸದಸ್ಯರ ಬೆಂಬಲ ಇಲ್ಲ. ಆದರೂ ಸಂಸದೀಯ ಪ್ರಜಾಪ್ರಭುತ್ವಕ್ಕಾಗಿ ಹೋರಾಡಲು ಇದೊಂದು ಅಸ್ತ್ರ ಎಂದು ವಿಪಕ್ಷಗಳ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
Advertisement
ಪದಚ್ಯುತಗೊಳಿಸಲು ರಾಜ್ಯಸಭೆಯಲ್ಲಿ ಗೊತ್ತುವಳಿ ಮಂಡಿಸಲು ಇಂಡಿಯಾ ಬಣದ ಪಕ್ಷಗಳ ಸದಸ್ಯರು ಮಂಗಳವಾರ ನೋಟಿಸ್ ನೀಡಿದ್ದಾರೆ. ಈ ಅವಿಶ್ವಾಸ ನಿರ್ಣಯ ಅಂಗೀಕಾರವಾಗಬೇಕಾದರೆ ಸರಳ ಬಹುಮತ ಬೇಕು. ಆದರೆ, ವಿಪಕ್ಷಗಳಿಗೆ ಅಷ್ಟು ಸದಸ್ಯರ ಬೆಂಬಲ ಇಲ್ಲ. ಆದರೂ ಸಂಸದೀಯ ಪ್ರಜಾಪ್ರಭುತ್ವಕ್ಕಾಗಿ ಹೋರಾಡಲು ಇದೊಂದು ಅಸ್ತ್ರ ಎಂದು ವಿಪಕ್ಷಗಳ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ, ಸಿಪಿಐ, ಸಿಪಿಐ-ಎಂ, ಜೆಂಎಂ, ಎಎಪಿ, ಸಮಾಜವಾದಿ ಪಕ್ಷಗಳ 60 ಸದಸ್ಯರು ಸಹಿ ಹಾಕಿದ್ದ ನೋಟಿಸ್ ಅನ್ನು ವಿಪಕ್ಷಗಳ ಪರವಾಗಿ ಕಾಂಗ್ರೆಸ್ ಸದಸ್ಯರಾದ ಜೈರಾಮ್ ರಮೇಶ್, ನಾಸಿರ್ ಹುಸೇನ್ ಅವರು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ.