ಕಲಬುರಗಿ: ಧರ್ಮ ಒಡೆಯುವವರಿಗೆ ಜನ ಈಗಾಗಲೇ ತಕ್ಕ ಪಾಠ ಕಲಿಸಿದ್ದಾರೆ. ಧರ್ಮವನ್ನು ಒಡೆಯುವ ಕೆಲಸ ಮಾಡದೇ, ಧರ್ಮದ ಪದ್ಧತಿ ಪ್ರಕಾರ ನಡೆದುಕೊಂಡು ತೋರಿಸಿ, ಅಂದೇ ನೀವು ಗೆದ್ದುಬರುತ್ತೀರಿ ಎಂದು ಕಡಗಂಚಿ ಮಠದ ವೀರಭದ್ರ ಶಿವಾವಾರ್ಯ ಸ್ವಾಮೀಜಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೀಗ ಕಲಬುರಗಿಯಲ್ಲಿ ಕಾಂಗ್ರೆಸ್ಸಿನಿಂದ ವೀರಶೈವ ಲಿಂಗಾಯತರ ಸಮಾವೇಶ ಆಯೋಜನೆ ಮಾಡಿದ್ದಾರೆ. ಈ ಹಿಂದೆ ಧರ್ಮ ಒಡೆಯಲು ಮಾಜಿ ಸಚಿವ ಡಾ ಶರಣಪ್ರಕಾಶ್, ಹಾಗೂ ಮಾಜಿ ಶಾಸಕ ಬಿಆರ್ ಪಾಟೀಲ್ ಮುಂದಾಗಿ ಸೊತ್ತು ಸುಣ್ಣವಾಗಿದ್ದಾರೆ. ಈ ಹಿಂದೆ ಸಮಾವೇಶದಲ್ಲಿ ಪಂಚಪೀಠಗಳ ಜಗದ್ಗುರುಗಳನ್ನ ಹೀಯಾಳಿಸಿದ್ದಾರೆ. ಆದ್ರೆ ಈಗ ವೀರಶೈವರು ಹಾಗೂ ಲಿಂಗಾಯತರು ಒಂದೇ ಎನ್ನುವುದಕ್ಕೆ ಏನು ಕಾರಣ ಉತ್ತರಿಸಿ ಎಂದು ಕೈ ನಾಯಕರನ್ನು ಪ್ರಶ್ನಿಸಿದರು.
Advertisement
Advertisement
ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಳ್ಳಬೇಡಿ. ಮೊದಲೆಲ್ಲ ಧರ್ಮದ ಪ್ರಕಾರ ನಡೆದುಕೊಂಡಿದಕ್ಕೆ ಈ ನಾಯಕರು ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದರು. ಆದ್ರೆ ಈಗ ಧರ್ಮವನ್ನು ಬಿಟ್ಟಿದ್ದಾರೆ ಅದಕ್ಕೆ ಈ ರೀತಿ ಸೋಲು ಅನುಭವಿಸುತ್ತಿದ್ದಾರೆ. ಧರ್ಮದ ಪದ್ಧತಿ ಪ್ರಕಾರ ನಡೆದುಕೊಂಡು ತೋರಿಸಿ, ಅಂದೇ ನೀವು ಗೆದ್ದುಬರುತ್ತೀರಿ ಎಂದು ಕೈ ನಾಯಕರಿಗೆ ಸಲಹೆ ನೀಡಿದರು.
Advertisement
Advertisement
ಇದು ಈ ನಾಯಕರು ಮಾಡುವ ತಪ್ಪು ಕೆಲಸವಲ್ಲ. ಚುನಾವಣೆ ಮಾಡುವ ತಪ್ಪು ಕೆಲಸ. ಕಲಬುರಗಿಯಲ್ಲಿ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆ ಸಮಯದಲ್ಲಿ ರಾಜಕೀಯ ಗಿಮಿಕ್ ಮಾಡಲು ವೀರಶೈವ-ಲಿಂಗಾಯತ ಸಮಾವೇಶ ನಡೆಸುತ್ತಿದೆ. ಧರ್ಮವನ್ನು ಬಳಸಿಕೊಂಡು ರಾಜಕೀಯ ಮಾಡಲು ಹೋಗಿ ನೀವೇ ಗದ್ದಲ ಸೃಷ್ಟಿಸಿ ಬಿದ್ದಿದ್ದಿರೇ ಹೊರತಾಗಿ ಧರ್ಮ ಬಿದ್ದಿಲ್ಲ ಎಂದು ಕೈ ನಾಯಕರ ವಿರುದ್ಧ ಮಠಾಧೀಶರು ಹರಿಹಾಯ್ದರು.