-ಗಲಭೆಕೋರರಿಗೆ ಸರ್ಕಾರದಿಂದಲೇ ರಕ್ಷಣೆ; ಕೇಂದ್ರ ಸಚಿವ ವಾಗ್ದಾಳಿ
ದಾವಣಗೆರೆ: ಏನೇ ಆಗಲಿ ಚನ್ನಪಟ್ಟಣದಲ್ಲಿ ಎನ್‌ಡಿಎ (NDA) ಅಭ್ಯರ್ಥಿ ನಾನೇ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumarswamy) ಹೇಳಿದ್ದಾರೆ.
ಜಿಲ್ಲೆಯಲ್ಲಿ ಜೆಡಿಎಸ್ (JDS) ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿರುವ ಅವರು, ತ್ರಿಶೂಲ್ ಕಲಾಭವನದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದರು.ಇದನ್ನೂ ಓದಿ: ವಿವಾದದ ಬಳಿಕ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ ಸಿಎ ನಿವೇಶನ ವಾಪಸ್ ನೀಡಿದ ಖರ್ಗೆ ಕುಟುಂಬ
ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ವೆಸ್ಟೆಂಡ್ ಹೊಟೇಲ್‌ನಲ್ಲಿ ಇದ್ದಿದ್ದು ನಿಜ. ಇದೇ ಬಾಲಕೃಷ್ಣ ಬಗ್ಗೆ ಸಿದ್ದರಾಮಯ್ಯ (CM Siddaramaiah) ಹಾಗೂ ಮಹಾದೇವಪ್ಪ ಆರು ನೂರು ಕೋಟಿ ಹಣ ರೂ. ಕಾಮಗಾರಿ ಮಾಡದೇ ಬಿಲ್ ಮಾಡಿಕೊಂಡಿದ್ದಾರೆ ಎಂದು ವಿಧಾನ ಸಭೆಯಲ್ಲಿ ಆರೋಪ ಮಾಡಿದ್ದರು. ಅಂತವರನ್ನೆ ಸಿಎಂ ಜೊತೆಗಿಟ್ಟು ಕೊಂಡಿದ್ದಾರೆ. ಇವರು ನಾನು ಸಿಎಂ ಆಗಿದ್ದಾಗಲೂ ನನ್ನ ಜೊತೆಗೆ ಇದ್ದಾರೆ. ಆಗ ಚೂರಿ ಹಾಕಿ ಬಿಟ್ಟು ಹೋಗಿದ್ದರು. ತೆವಲು ತೀರಿಸಿಕೊಳ್ಳಲು ಹೇಳಿಕೆ ಕೊಟ್ಟರೆ ನಾನು ಉತ್ತರ ಕೊಡಬೇಕಾ? ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ. ಏನೇ ಆಗಲಿ ಎನ್‌ಡಿಎ ಅಭ್ಯರ್ಥಿ ನಾನೇ ಎಂದು ಕಿಡಿಕಾರಿದ್ದಾರೆ.
ತಮ್ಮ ವಿರುದ್ಧದ ಪ್ರಕರಣ ಕುರಿತು ಮಾತಾನಾಡಿ, ನ್ಯಾಯಾಲಯದಲ್ಲಿ ಫೈಟ್ ಮಾಡೋಣ ಅದರ ಬಗ್ಗೆ ಈಗ ಚರ್ಚೆ ಬೇಡ. ದೂರು ಕೊಟ್ಟಿದ್ದಾರೆ ಅದರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ. ನನ್ನ ಕೇಸ್ 2012 ರಿಂದ ಎಸ್‌ಐಟಿಯಲ್ಲಿ ನಡೆಯುತ್ತಿದೆ. ಹತ್ತು ವರ್ಷ ಆದರೂ ಅದನ್ನು ಯಾಕೆ ಇನ್ನೂ ಜೀವಂತವಾಗಿ ಇಟ್ಟುಕೊಂಡಿದ್ದೀರಿ. ನಾನು ಸಂವಿಧಾನ ಬದ್ಧ ರಾಜ್ಯಪಾಲರ ವಿಷಯಕ್ಕೆ ಸಂಭಂಧಿಸಿದಂತೆ ಮಾತಾಡಿದ್ದೆ. ನನ್ನ ಮೇಲೆ ಕೇಸ್ ಹಾಕಿದ್ದಾರೆ. ಇದಕ್ಕೆಲ್ಲ ಕೋರ್ಟ್ನಲ್ಲಿ ಉತ್ತರ ಕೊಡುವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿ ಪ್ರಕರಣದ ಕೇಸ್ ಹಿಂಪಡೆಯುವ ಸರ್ಕಾರದ ನಿರ್ಧಾರ ವಿಚಾರವಾಗಿ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ಹಿಂದಿನ ಹಲವು ಪ್ರಕರಣದ ಕೇಸ್‌ಗಳನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಯುತ್ತಿದೆ. ಕೇಸ್‌ಗಳನ್ನು ವಾಪಸ್ ಪಡೆಯಬೇಕಾದರೆ ಅದರ ಆಳ ಏನಿದೆ ಎಂದು ನೋಡಬೇಕು. ಇದರಿಂದ ಗಲಭೆಕೋರರು ಬಚಾವ್ ಆಗಬಹುದು. ಗಲಭೆಕೋರರಿಗೆ ಸರ್ಕಾರದ ಕಡೆಯಿಂದಲೇ ರಕ್ಷಣೆ ನೀಡಲಾಗುತ್ತಿದೆ. ದ್ವೇಷದ ರಾಜಕಾರಣ ಒಂದು ಕಡೆ ಹಾಗೂ ಸಮಾಜ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಲು ಕಾಂಗ್ರೆಸ್‌ಗೆ ಇಷ್ಟ ಇಲ್ಲ ಎಂದು ಆರೋಪಿಸಿದರು.
ಸರ್ಕಾರ ಜಾಹೀರಾತು ವಿಚಾರವಾಗಿ ಮಾತನಾಡಿ, ಸರ್ಕಾರ ಜಾಹೀರಾತಿಗಾಗಿ 17 ಕೋಟಿ ರೂ. ಹಣ ವ್ಯಯ ಮಾಡಿದೆ. ಅದರಲ್ಲಿ ಒಂದು ಪಂಚಾಯತಿಯಲ್ಲಿ ಮಾಡೆಲ್ ಮಾಡಬಹುದಿತ್ತು. ಜಾಹೀರಾತು ಹೆಸರಲ್ಲಿ ರಾಜ್ಯದ ತೆರಿಗೆ ಹಣ ಲೂಟಿ ಹೊಡೆಯಲಾಗುತ್ತಿದೆ ಎಂದರು.ಇದನ್ನೂ ಓದಿ: ಚನ್ನಪಟ್ಟಣ ಚುನಾವಣೆಗೆ ನನ್ನ ಕುಟುಂಬದವರಲ್ಲ, ನಾನೇ ಅಭ್ಯರ್ಥಿ – ಡಿಕೆಶಿ