ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಎಷ್ಟೇ ದುಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ವೀಡಿಯೋ ಶೇರ್ ಮಾಡಿ ಬಿಜೆಪಿ ಸಲಹೆ ಕೊಟ್ಟಿದೆ.
Advertisement
ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬದ ಹಿನ್ನೆಲೆ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಲು ಮುಂದಾಗಿದ್ದರು. ಈ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಹ ಉಪಸ್ಥಿತರಿದ್ದರು. ಡಿಕೆಶಿ ಅವರು ಕೇಕ್ ಕಟ್ ಮಾಡಿದ ಮೇಲೆ ಪ್ರಿಯಾಂಕಾ ಗಾಂಧಿ ಬೇರೆಯವರ ಕೈಯಿಂದ ಕೇಕ್ ತಿನ್ನಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ವೀಡಿಯೋ ಸರಣಿ ಟ್ವೀಟ್ ಮಾಡುವ ಮೂಲಕ ಡಿಕೆ ಶಿವಕುಮಾರ್ ಅವರ ಕಾಲೆಳೆದಿದೆ. ಇದನ್ನೂ ಓದಿ: ಬಾಗಲಕೋಟೆ ಕೇಸ್‍ಗೆ ಟ್ವಿಸ್ಟ್ – ಮೊದಲು ಸಂಗೀತಾ ಹಲ್ಲೆ ಮಾಡಿದ್ದ ವೀಡಿಯೋ ವೈರಲ್
Advertisement
ಸರಣಿ ಟ್ವೀಟ್‍ನಲ್ಲಿ ಏನಿದೆ?
ಡಿ.ಕೆ.ಶಿವಕುಮಾರ್ ಅವರೇ, ಅವರ ಕೈಗೆ ಬಂದ ತುತ್ತು, ನಿಮ್ಮ ಬಾಯಿಗೆ ಬರುವುದಿಲ್ಲ. ಈ ಸತ್ಯವನ್ನು ಈಗಲಾದರೂ ಅರಿತುಕೊಳ್ಳಿ. ಕಾಣದ ಕೈಗಳು ನಿಮ್ಮ ಅಧಿಕಾರವನ್ನು ನಿಮ್ಮ ಮುಂದೆಯೇ ಹೀಗೆಯೇ ಕಿತ್ತುಕೊಳ್ಳುತ್ತಾರೆ. ನಿಮ್ಮ ಧನ ಬಲ ಮಾತ್ರ ಬಳಸಿಕೊಳ್ಳುತ್ತಾರೆ. ಅಧಿಕಾರದ ಸಮಯದಲ್ಲಿ ದೂರ ಇಡುತ್ತಾರೆ. ಅಸಹಾಯಕಡಿಕೆಶಿ ಇಷ್ಟೊಂದು ದುರ್ಬಲವೇ?
Advertisement
ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ನಕಲಿ ಗಾಂಧಿಗಳು ನಿಮ್ಮನ್ನು ಇಡುವಲ್ಲಿಯೇ ಇಡುತ್ತಾರೆ.
ಹೈಕಮಾಂಡ್ ಮಟ್ಟದಲ್ಲಿ ಟ್ರಬಲ್ ಶೂಟರ್ ಎನಿಸಿಕೊಂಡಿರುವ @DKShivakumar ಅವರ ಹುಟ್ಟುಹಬ್ಬದ ಕೇಕ್ ತಿನ್ನಿಸುವಷ್ಟೂ ಪ್ರಿಯಾಂಕ ಗಾಂಧಿಗೆ ಸೌಜನ್ಯವಿಲ್ಲ.
ಮತ್ತೊಬ್ಬರ ಕೈಯಲ್ಲಿ ಕೇಕ್ ತಿನ್ನಿಸುವ ಪ್ರಮೇಯವೇನಿತ್ತು?#ಅಸಹಾಯಕಡಿಕೆಶಿ pic.twitter.com/upVqqArdz1
— BJP Karnataka (@BJP4Karnataka) May 17, 2022
Advertisement
ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ನಕಲಿ ಗಾಂಧಿಗಳು ನಿಮ್ಮನ್ನು ಇಡುವಲ್ಲಿಯೇ ಇಡುತ್ತಾರೆ. ಹೈಕಮಾಂಡ್ ಮಟ್ಟದಲ್ಲಿ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದ ಕೇಕ್ ತಿನ್ನಿಸುವಷ್ಟೂ ಪ್ರಿಯಾಂಕಾ ಗಾಂಧಿಗೆ ಸೌಜನ್ಯವಿಲ್ಲ.
ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಈ ಹೊತ್ತಿನಲ್ಲಿ, ನಕಲಿ ಗಾಂಧಿ ವಂಶದವರು ಕೆಪಿಸಿಸಿ ಅಧ್ಯಕ್ಷ @DKShivakumar ಅವರನ್ನು ಮೂರನೇ ದರ್ಜೆಯವರಂತೆ ನಡೆಸಿಕೊಳ್ಳುತ್ತಿದ್ದಾರೆ.
ಕನಕಪುರದ ಬಂಡೆ ಹೀಗೆ ಬಗ್ಗಿದ್ದು, ಕುಗಿದ್ದು ಅಸಹಾಯಕತನದ ಪರಮಾವಧಿಯಲ್ಲದೆ ಮತ್ತೇನು?#ಅಸಹಾಯಕಡಿಕೆಶಿ pic.twitter.com/IsGO1nTX4A
— BJP Karnataka (@BJP4Karnataka) May 17, 2022
ಮತ್ತೊಬ್ಬರ ಕೈಯಲ್ಲಿ ಕೇಕ್ ತಿನ್ನಿಸುವ ಪ್ರಮೇಯವೇನಿತ್ತು? ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಈ ಹೊತ್ತಿನಲ್ಲಿ, ನಕಲಿ ಗಾಂಧಿ ವಂಶದವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮೂರನೇ ದರ್ಜೆಯವರಂತೆ ನಡೆಸಿಕೊಳ್ಳುತ್ತಿದ್ದಾರೆ. ಕನಕಪುರದ ಬಂಡೆ ಹೀಗೆ ಬಗ್ಗಿದ್ದು, ಕುಗಿದ್ದು ಅಸಹಾಯಕತನದ ಪರಮಾವಧಿಯಲ್ಲದೆ ಮತ್ತೇನು?. ಇದನ್ನೂ ಓದಿ: ಕಾಶ್ಮೀರದಲ್ಲಿ ನಡೆದ ಹಿಂಸಾಚಾರಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ
ಕೇಕ್ ತಿನ್ನಿಸಲು ನಿರಾಕರಣೆ, ರಮ್ಯಾ ಟ್ವೀಟ್ ದಾಳಿ, ಎಂಬಿ ಪಾಟೀಲ್ ಸಿಡಿದೆದ್ದಿದ್ದು, ಸಿದ್ದರಾಮಯ್ಯ & ಬಣದ ಇತ್ತೀಚೆಗಿನ ನಡೆ, ಕೆಪಿಸಿಸಿ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ ಇದೆಲ್ಲವೂ @DKShivakumar ಅವರನ್ನು ಹರಕೆಯ ಕುರಿ ಮಾಡುವ ತಂತ್ರ.
ಈ ಎಲ್ಲ ಘಟನೆಗಳು ಏನೋ ಮುನ್ಸೂಚನೆ ನೀಡುತ್ತಿರುವುದು ನಿಜವಲ್ಲವೇ?.#ಅಸಹಾಯಕಡಿಕೆಶಿ
— BJP Karnataka (@BJP4Karnataka) May 17, 2022
ಕೇಕ್ ತಿನ್ನಿಸಲು ನಿರಾಕರಣೆ, ರಮ್ಯಾ ಟ್ವೀಟ್ ದಾಳಿ, ಎಂ.ಬಿ.ಪಾಟೀಲ್ ಸಿಡಿದೆದ್ದಿದ್ದು, ಸಿದ್ದರಾಮಯ್ಯ ಮತ್ತು ಬಣದ ಇತ್ತೀಚೆಗಿನ ನಡೆ, ಕೆಪಿಸಿಸಿ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ ಇದೆಲ್ಲವೂ ಡಿ.ಕೆ.ಶಿವಕುಮಾರ್ ಅವರನ್ನು ಹರಕೆಯ ಕುರಿ ಮಾಡುವ ತಂತ್ರ. ಈ ಎಲ್ಲ ಘಟನೆಗಳು ಏನೋ ಮುನ್ಸೂಚನೆ ನೀಡುತ್ತಿರುವುದು ನಿಜವಲ್ಲವೇ ಎಂದು ಸಂಶಯವನ್ನು ವ್ಯಕ್ತಪಡಿಸಿದೆ.