ಚಿಕ್ಕಮಗಳೂರು: ಅವರು ಚಡ್ಡಿ ಸುಟ್ಕೊಂಡೇ ಇರಲಿ, ನಾವು ನಮ್ಮ ಹಳೆ ಚಡ್ಡಿಗಳನ್ನು ಕಳುಹಿಸಿಕೊಡ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನ ಬಸವಹನಹಳ್ಳಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, `ಬಿಜೆಪಿಗೆ ಕೋಮು ನಶೆ ಏರಿದೆ’ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್ `ಸಂವಿಧಾನ ಶಿಲ್ಪಿ’ ಬಿರುದು ಕೈಬಿಟ್ಟ ರೋಹಿತ್ ಚಕ್ರತೀರ್ಥ ಸಮಿತಿ – ಎಲ್ಲೆಡೆ ಆಕ್ರೋಶ
Advertisement
Advertisement
ಮಧ್ಯದಲ್ಲಿ ಎಲ್ಲಿಡಲಿ ಅಂತಾರೆ ಸಿದ್ದರಾಮಯ್ಯ: ಹೆಡ್ಗೆವಾರ್ ಕಂಡರೆ ಇವರಿಗೆ ಯಾಕೆ ಸಂಕಟ. ಹೆಡ್ಗೆವಾರ್ ಭಾರತ್ ಮಾತಾ ಕಿ ಜೈ ಅನ್ನೋ ಶಿಕ್ಷಣವನ್ನ ಕಲಿಸಿದ್ದಾರೆಯೇ ಹೊರತು ಭಾರತಕ್ಕೆ ಬಾಂಬ್ ಹಾಕುವುದನ್ನು ಕಲಿಸಿಲ್ಲ. ಭಾರತಕ್ಕೆ ಬಾಂಬ್ ಹಾಕುವವರು ಸಿದ್ದರಾಮಯ್ಯಗೆ ಬಹಳ ಬೇಕಾದವರು. ಭಾರತ್ ಮಾತಾ ಕೀ ಜೈ ಅಂದರೆ ಇವರಿಗೆ ಉರಿ ಹತ್ತುತ್ತೆ ಎಂದು ಪ್ರಶ್ನಿಸಿದ್ದಾರೆ.
Advertisement
ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಇರಬೇಕೋ, ಬೇಡ್ವೋ ಅನ್ನೋದನ್ನ ಕೇಳೋಕೆ ಸಿದ್ದರಾಮಯ್ಯ ಯಾರು? ಪಠ್ಯಪುಸ್ತಕ ಪರಿಷ್ಕರಣ ಸಮಿತಿ ತೀರ್ಮಾನ ಮಾಡಿದೆ. ಸರ್ಕಾರ ಅದನ್ನ ಒಪ್ಪಿದೆ. ಮಧ್ಯದಲ್ಲಿ ನಂದು ಎಲ್ಲಿಡಲಿ ಅಂತ ಕೇಳೋಕೆ ಇವರ್ಯಾರು? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
Advertisement
ಚಡ್ಡಿ ವಿಚಾರಕ್ಕೆ ಕಿಡಿ ಕಾರಿದ ಸಿಟಿ ರವಿ ಅವರು, ಇದೇ ಚಡ್ಡಿ, ಸಂಘಿ ನರೇಂದ್ರ ಮೋದಿಯವರೇ ಅಂಬೇಡ್ಕರ್ ಹುಟ್ಟೂರನ್ನ ಅಭಿವೃದ್ಧಿ ಮಾಡಿದ್ದು. ಭೀಮ್ ಆಪ್ ತಂದಿದ್ದು. 2 ಬಾರಿ ಅನಕ್ಷರಸ್ಥ ವ್ಯಕ್ತಿಯನ್ನ ಅಂಬೇಡ್ಕರ್ ಎದುರು ನಿಲ್ಲಿಸಿ ಸೋಲಿಸಿದ್ದು ಇದೇ ಕಾಂಗ್ರೆಸ್. ಇಂದು ಅಂಬೇಡ್ಕರ್ ಬಗ್ಗೆ ನಮಗೆ ಹೇಳುತ್ತಾರೆ. ಅಂಬೇಡ್ಕರ್ ಬಗ್ಗೆ ನಮಗಿರೋ ಅಭಿಮಾನಕ್ಕೆ ಇವರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಜವಾಹರ್‌ಲಾಲ್ ನೆಹರೂ ಭಾರತರತ್ನವನ್ನ ತಮಗೆ ತಾವೇ ಕೊಟ್ಕೊಂಡ್ರು. ಆದರೆ ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡುವಂತೆ ಶಿಫಾರಸ್ಸು ಮಾಡಿದ್ದು ಬಿಜೆಪಿ ಸರ್ಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ. ಸಿದ್ದರಾಮಯ್ಯನೂ ಅಲ್ಲ, ಕಾಂಗ್ರೆಸ್ ಪಾರ್ಟಿಯೂ ಅಲ್ಲ. ಕಾಂಗ್ರೆಸ್ ಹೆಜ್ಜೆ-ಹೆಜ್ಜೆಗೂ ಅಂಬೇಡ್ಕರ್ ಅವರನ್ನು ತುಳಿಯುತ್ತಲೇ ಬಂದಿದೆ. ಇಂಥವರು ಅಂಬೇಡ್ಕರ್ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ ಎಂದು ಪಂಚ್ ಕೊಟ್ಟಿದ್ದಾರೆ.
ಚುನಾವಣೆ ಕುರಿತು ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಕರ್ನಾಟಕದಲ್ಲೂ ಹೋಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ರಾಯಚೂರು ಅಬಕಾರಿ ಪೊಲೀಸರ ದಾಳಿ – 2.77 ಲಕ್ಷ ಮೌಲ್ಯದ ಮದ್ಯ ಜಪ್ತಿ
ದುರಹಂಕಾರ ಹಾಗೂ ಓಲೈಕೆ ರಾಜಕಾರಣವನ್ನ ರಾಜ್ಯದ ಜನ ಒಪ್ಪಲ್ಲ, ಕ್ಷಮಿಸಲ್ಲ ಎಂದು ಹೇಳಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಬಿದ್ದಾಗ ಡಿಕೆಶಿ-ಸಿದ್ದು ಬಾಯಿ ಬಂದ್ ಆಗಿತ್ತು. ಬೆಂಕಿ ಹಾಕಿದವರೆಲ್ಲಾ ಇದೆ ಸಿದ್ದು ಅಂಡ್ ಡಿಕೆಶಿ ಬ್ರದರ್ಸ್ ಅದಕ್ಕೆ ಬಾಯಿ ಬಂದ್ ಆಗಿತ್ತು. ಈಗ ಡಿಜೆ ಹಳ್ಳಿ – ಕೆಜೆ ಹಳ್ಳಿಯಲ್ಲಿ ನಡೆದ ಘಟನೆಯಂತೆ ಇಡೀ ರಾಜ್ಯದಲ್ಲಿ ಮಾಡಲು ಹೊರಟಿದ್ದಾರೆ. ಮತಾಂದತೆ ಬೆಳೆಸೋದೆ ಇವರ ಗುರಿ ಇದ್ದಂತೆ ಕಾಣುತ್ತದೆ ಎಂದು ಕಿಡಿ ಕಾರಿದ್ದಾರೆ.