ಲಕ್ನೋ: ರಾಜ್ಯದಲ್ಲಿ ಈ ಹಿಂದೆ ನಡೆದಿದ್ದ ಹಿಜಬ್ (Hijab) ದಂಗಲ್ ವಿಚಾರ ಉತ್ತರಪ್ರದೇಶದ ಆಲಿಘಡ ಮುಸ್ಲಿಮ್ ವಿವಿಯಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಕರ್ನಾಟಕದಲ್ಲಿ (Karnataka) ಈ ಹಿಂದೆ ಬಿಜೆಪಿ (BJP) ಸರ್ಕಾರ, ಶಾಲೆಗಳಲ್ಲಿ ಹಿಜಬ್ ನಿಷೇಧಿಸಿತ್ತು. ಈ ಬಗ್ಗೆ ಏನು ಹೇಳುತ್ತೀರಿ? ನೀವು ಪ್ರಧಾನಿಯಾದರೆ ಏನು ಮಾಡುತ್ತೀರಿ ಎಂದು ವಿದ್ಯಾರ್ಥಿಯೊಬ್ಬರು ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿಯನ್ನು (Rahul Gandhi) ಪ್ರಶ್ನಿಸಿದ್ದಾರೆ.
Advertisement
ಮಹಿಳೆಯರು ಏನನ್ನು ಧರಿಸಬೇಕು ಎಂಬುದು ಸಂಪೂರ್ಣವಾಗಿ ಅವರ ವೈಯಕ್ತಿಕ ವಿಚಾರ. ಮಹಿಳೆಯರ ವಸ್ತ್ರಧಾರಣೆಯ ಆಯ್ಕೆಯನ್ನು ಗೌರವಿಸಬೇಕು. ಒಬ್ಬರು ಏನನ್ನು ಧರಿಸಬೇಕು ಎಂದು ನಿರ್ದೇಶನ ನೀಡಬಾರದು. ಇದು ನನ್ನ ನಿಲುವು ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನೂ ಓದಿ: ಗೆದ್ದ ಬೆನ್ನಲ್ಲೇ ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ
Advertisement
View this post on Instagram
ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆಯಿಂದ ಹಿಜಬ್ ನಿಷೇಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕರ್ನಾಟಕ ಸರ್ಕಾರದ ಹಿಜಬ್ ನಿಷೇಧವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
Advertisement
ಹಿಜಬ್ ವಿವಾದ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಹಿಜಬ್ ಮುಸ್ಲಿಂ ಧರ್ಮದ ಅಗತ್ಯ ಆಚರಣೆ ಅಲ್ಲ ಎಂದು ಐತಿಹಾಸಿಕ ತೀರ್ಪು ಪ್ರಕಟಿಸಿತ್ತು.
Advertisement
ಈ ಆದೇಶ ಮತ್ತು ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ್ಯಾ. ಹೇಮಂತ್ ಗುಪ್ತಾ ಅವರು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದರೆ ನ್ಯಾ. ಸುಧಾಂಶು ಧೂಲಿಯಾ ಅವರು ಕರ್ನಾಟಕ ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದ್ದರು. ಇಬ್ಬರು ನ್ಯಾಯಮೂರ್ತಿಗಳಿಂದ ಭಿನ್ನವಾದ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಈ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆಯಾಗಿದೆ.
ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಹೈಕೋರ್ಟ್ ಆದೇಶವನ್ನು ರದ್ದು ಮಾಡದ ಕಾರಣ ಈ ಹಿಂದೆ ನೀಡಿದ ಆದೇಶ ಈಗಲೂ ಜಾರಿಯಲ್ಲಿರುತ್ತದೆ. ಇದರ ಅನ್ವಯ ವಿದ್ಯಾರ್ಥಿಗಳು ಶಾಲೆಗೆ ಹಿಜಬ್ ಧರಿಸಿಕೊಂಡು ಬಂದರೂ ತರಗತಿಯಲ್ಲಿ ಹಿಜಬ್ ತೆಗೆದು ಪಾಠವನ್ನು ಕೇಳಬೇಕಾಗುತ್ತದೆ.