ಪಲ್ಲೆಕೆಲೆ: ಏಷ್ಯಾ ಕಪ್ (Asia Cup) ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಭಾರತ-ನೇಪಾಳ (India-Nepal) ಮಧ್ಯೆ ಪಂದ್ಯ ನಡೆಯಲಿದೆ. ಆದರೆ ಪಂದ್ಯಕ್ಕೂ ಮಳೆ (Rain) ಅಡ್ಡಿಯಾಗುವ ಸಂಭವ ಇದೆ.
ಶನಿವಾರ ಪಾಕಿಸ್ತಾನ (Pakistan) ವಿರುದ್ಧದ ಪಂದ್ಯವನ್ನು ಮಳೆ ಬಲಿ ಪಡೆದಿತ್ತು. ಇದೀಗ ಈ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದರೆ ಭಾರತ ತಂಡ ಸೂಪರ್ 4 ಹಂತವನ್ನು ಪ್ರವೇಶಿಸಲಿದೆ. ಇದನ್ನೂ ಓದಿ: ಕೆಎಲ್ ರಾಹುಲ್ ಫಿಟ್ – ಟೀಂ ಇಂಡಿಯಾದಿಂದ ಯಾರು ಔಟ್?
Advertisement
Advertisement
ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನೇಪಾಳ ತಂಡವಿದೆ. ನೇಪಾಳವನ್ನು ಸೋಲಿಸಿದ್ದಕ್ಕೆ 2 ಅಂಕ, ಭಾರತದ ವಿರುದ್ಧ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಪಾಕ್ 1 ಅಂಕ ಸಂಪಾದಿಸಿ ಸೂಪರ್ 4 ಪ್ರವೇಶಿಸಿದೆ. ಭಾರತ ಈಗಾಗಲೇ 1 ಅಂಕ ಸಂಪಾದಿಸಿದ್ದು ನೇಪಾಳ ವಿರುದ್ಧ ಗೆದ್ದರೆ ಸುಲಭವಾಗಿ ಸೂಪರ್ 4 ಪ್ರವೇಶಲಿದೆ. ಒಂದು ವೇಳೆ ಪಂದ್ಯ ರದ್ದಾದರೂ 1 ಅಂಕ ಸಿಗುವ ಕಾರಣ ಸೂಪರ್ 4 ಪ್ರವೇಶ ನಿಶ್ಚಿತ. ಯಾಕೆಂದರೆ ನೇಪಾಳ 1 ಅಂಕ ಪಡೆದರೆ ಭಾರತ ರದ್ದಾದ ಎರಡೂ ಪಂದ್ಯಗಳಿಂದ 2 ಅಂಕ ಪಡೆಯುವ ಮೂಲಕ ಸೂಪರ್ 4 ಪ್ರವೇಶ ಮಾಡಲಿದೆ.
Advertisement
ಪಿಚ್ ಹೇಗಿದೆ?
ಆರಂಭದಲ್ಲಿ ಪಲ್ಲೆಕೆಲೆ ಪಿಚ್ ವೇಗಿಗಳಿಗೆ ಸಹಕಾರ ನೀಡುತ್ತದೆ. ನಂತರ ನಿಧಾನಗೊಂಡು ಬ್ಯಾಟರ್ಗಳಿಗೆ ಸಹಾಯ ನೀಡುತ್ತದೆ. ಈ ಕಾರಣಕ್ಕೆ ಟಾಸ್ ಗೆದ್ದ ತಂಡ ಆರಂಭದಲ್ಲಿ ಬ್ಯಾಟಿಂಗ್ ಆರಿಸಿ ದೊಡ್ಡ ಮೊತ್ತವನ್ನು ಪೇರಿಸಿ ಎದುರಾಳಿ ತಂಡಕ್ಕೆ ಒತ್ತಡ ಹೇರುತ್ತದೆ.
Advertisement
Web Stories