Connect with us

Gujarat Election

ಗುಜರಾತ್ ಫಲಿತಾಂಶ- ಕರ್ನಾಟಕ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ತಂತ್ರಗಾರಿಕೆ ಏನು?

Published

on

ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಆದ್ರೆ ಹಿಂದಿನ ಚುನಾವಣೆಗಳಿಗೆ ಹೋಲಿಸಿದ್ರೆ ಕಾಂಗ್ರೆಸ್ ಕೂಡ ಉತ್ತಮ ಸಾಧನೆ ಮಾಡಿದೆ ಎಂದೇ ವಿಶ್ಲೇಷಣೆ ಮಾಡಲಾಗ್ತಿದೆ. ಈ ನಡುವೆ ಕರ್ನಾಟಕದ ಚುನಾವಣೆಯೂ ಸಮೀಪಿಸುತ್ತಿದೆ. ಹೀಗಾಗಿ ರಾಜ್ಯದ ಮೇಲೆ ಗುಜರಾತ್ ಚುನಾವಣಾ ಫಲಿತಾಂಶದ ಪರಿಣಾಮವೇನು? ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್‍ನ ಮುಂದಿನ ತಂತ್ರಗಾರಿಕೆ ಏನಾಗಿರಲಿದೆ ಅನ್ನೋ ಅಂಶಗಳು ಇಲ್ಲಿದೆ.

ಬಿಜೆಪಿ ತಂತ್ರಗಾರಿಕೆ ಏನು?: ಎರಡು ರಾಜ್ಯಗಳ ಗೆಲುವಿನಿಂದ ಬಿಜೆಪಿಗೆ ಹುಮ್ಮಸ್ಸು ಬಂದಿರೋದು ನಿಶ್ಚಿತ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಅಭಿಯಾನಕ್ಕೆ ಇನ್ನಷ್ಟು ವೇಗ ಸಿಗಲಿದೆ. ಮೋದಿ ಬ್ರಾಂಡಲ್ಲೇ ಕರ್ನಾಟಕದಲ್ಲಿ ಚುನಾವಣೆ ನಡೆಸೋ ಸಾಧ್ಯತೆಯಿದೆ. ಹಿಂದುತ್ವ ಅಜೆಂಡಾಕ್ಕೆ ಬಿಜೆಪಿ ಜಾಸ್ತಿ ಒತ್ತು ನೀಡುವ ನಿರೀಕ್ಷೆ ಇದೆ.

ಅಭ್ಯರ್ಥಿ ಆಯ್ಕೆ, ಪ್ರಚಾರದಿಂದ ಹಿಡಿದು ಮೋದಿ-ಶಾ ಪ್ರಾಬಲ್ಯ ಹೆಚ್ಚಾಗಲಿದ್ದು, ರಾಜ್ಯ ಬಿಜೆಪಿಯರ ಮಹತ್ವ ಮತ್ತಷ್ಟು ಕ್ಷೀಣವಾಗೋ ಸಾಧ್ಯತೆಯಿದೆ. ಅಲ್ಲದೆ ಮೋದಿ-ಅಮಿತ್ ಶಾ ರ‍್ಯಾಲಿಗಳು ಕೂಡ ಹೆಚ್ಚಾಗೋ ಸಾಧ್ಯತೆ ಇದೆ. ನಗರ ಪ್ರದೇಶಗಳನ್ನ ಬಿಜೆಪಿ ಟಾರ್ಗೆಟ್ ಮಾಡಲಿದ್ದು, ಮೇಲ್ವರ್ಗದ ಮತದಾರರನ್ನು ಹಿಡಿದಿಟ್ಟುಕೊಳ್ಳಲು ತಂತ್ರಗಾರಿಕೆ ರೂಪಿಸಲಿದೆ. ಹಾಗೂ ಸಣ್ಣಪುಟ್ಟ ಸಮುದಾಯಗಳ ಕಡೆಗೆ ಗಮನ ಹರಿಸಲಿದೆ ಅನ್ನೋದು ಸದ್ಯದ ಚರ್ಚೆ.

ಕಾಂಗ್ರೆಸ್ ತಂತ್ರಗಾರಿಕೆ ಏನು?: ಅತಿದೊಡ್ಡ ರಾಜ್ಯ ಕರ್ನಾಟಕದತ್ತ ಕಾಂಗ್ರೆಸ್ ಗಮನ ಹರಿಸಲಿದ್ದು, ಹೇಗಾದರೂ ಅಧಿಕಾರ ಉಳಿಸಿಕೊಳ್ಳಲು ತಂತ್ರಗಾರಿಕೆ ರೂಪಿಸಲಿದೆ. ಸಾಧ್ಯವಾದಷ್ಟು ರಾಹುಲ್ ಗಾಂಧಿಗೆ ಹೆಚ್ಚು ಮಣೆ ಹಾಕೋದು ನಿರೀಕ್ಷಿತವಾಗಿದೆ. ಅಹಿಂದ ವರ್ಗ ಉಳಿಸಿಕೊಳ್ಳಲು ತಂತ್ರಗಾರಿಕೆ ಜೊತೆಗೆ ಮೇಲ್ವರ್ಗದ ಮೇಲೂ ಕಣ್ಣಿಡಲಿದೆ. ಅಭ್ಯರ್ಥಿಗಳ ಆಯ್ಕೆ ವಿಧಾನದಲ್ಲಿ ಬದಲಾವಣೆ ಹಾಗೂ ಬಿಜೆಪಿ ವಿರೋಧಿಗಳನ್ನು ಒಗ್ಗೂಡಿಸಲು ತಂತ್ರಗಾರಿಕೆ ರೂಪಿಸೋ ಸಾಧ್ಯತೆ ಇದೆ.

ಬಿಜೆಪಿ ಮಾದರಿಯಲ್ಲಿ ವಿಕಾಸ, ಅಭಿವೃದ್ಧಿ ಮಂತ್ರ ಪಠಿಸಲಿದ್ದು, ಜನಪರ ಭಾಗ್ಯ ಯೋಜನೆ ಫಲಾನುಭವಿಗಳತ್ತ ಗಮನ ಹರಿಸುವ ಸಾಧ್ಯತೆಯಿದೆ.

Click to comment

Leave a Reply

Your email address will not be published. Required fields are marked *