ಲಕ್ನೋ: ರಾಮನೂರು ಅಯೋಧ್ಯೆಯಿರುವ ಲೋಕಸಭಾ ಕ್ಷೇತ್ರ ಫೈಜಾಬಾದ್‍ನಲ್ಲಿ (Faizabad) ಬಿಜೆಪಿ ಅಭ್ಯರ್ಥಿ ಸೋತಿರುವುದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಅಭಿವೃದ್ಧಿಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ರಾಮಮಂದಿರ (Ram Mandir) ನಿರ್ಮಿಸಿರೋದು ಒಳ್ಳೆಯದು. ಆದರೆ ತಮ್ಮ ಭೂಮಿ ಕಿತ್ತುಕೊಂಡರೆ ನಾವು ಹೇಗೆ ಬದುಕೋದು? ಸರಿಯಾದ ಪರಿಹಾರವನ್ನು ನೀಡ್ತಿಲ್ಲ. ಸತತ 2 ಬಾರಿ ಗೆದ್ದಿದ್ದ ಲಲ್ಲುಸಿಂಗ್ ಅಯೋಧ್ಯೆಗೆ (Ayodhya) ಮಾಡಿದ್ದೇನೂ ಇಲ್ಲ ಎಂಬ ಆಕ್ರೋಶ ಸ್ಥಳೀಯರಲ್ಲಿತ್ತು. ಇದರ ಜೊತೆಗೆ ಹಲವು ವಿಚಾರಗಳು ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಹೇಳಲಾಗ್ತಿದೆ.
Advertisement
Advertisement
ಇತ್ತ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಮತದಾರರ ಬಗ್ಗೆ ರಾಮಾಯಣ ಧಾರವಾಹಿಯ ಲಕ್ಷ್ಮಣ ಪಾತ್ರಧಾರಿ ಸುನೀಲ್ ಲಾಹ್ರಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸೀತೆಯನ್ನೇ ಅನುಮಾನಿಸಿದ ನಾಡು ಅದು. ಇದೀಗ ರಾಮಮಂದಿರ ನಿರ್ಮಿಸಿದವರಿಗೆ ಮೋಸ ಮಾಡದೇ ಹೇಗೆ ಇರುತ್ತೆ. ಅಯೋಧ್ಯೆ ಯಾವಾಗ್ಲೂ ನಿಜವಾದ ರಾಜನಿಗೆ ದ್ರೋಹ ಮಾಡ್ತಾನೆ ಇದೆ ಎಂದು ಕಿಡಿಕಾರಿದ್ದಾರೆ.
Advertisement
ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯ ಲಲ್ಲು ಸಿಂಗ್ (Lallu Singh) ಯಾದವ್ ಅವರು ಸಮಾಜವಾದಿ ಪಾರ್ಟಿಯ ಅವಧೇಶ್ ಪ್ರಸಾದ್ ಅವರಿಂದ 54,567 ಮತಗಳ ಅಂತರದಿಂದ ಸೋಲುಕಂಡಿದ್ದಾರೆ. ಪ್ರಸಾದ್ ಅವರಿಗೆ 5,54,289 ಮತಗಳು ಬಿದ್ದಿದ್ದರೆ, ಲಲ್ಲು ಸಿಂಗ್ ಅವರಿಗೆ 4,99,722 ಮತಗಳು ಬಿದ್ದಿವೆ. 7536 ಮತಗಳು ನೋಟಾಗೆ ಚಲಾವಣೆಯಾಗಿವೆ.