ಹಠಾತ್ ಹಾರ್ಟ್ ಅಟ್ಯಾಕ್ ಆದಾಗ ಏನ್ ಮಾಡ್ಬೇಕು?

Public TV
2 Min Read
FotoJet 16
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಪ್ಪು ಅಗಲಿಕೆಯ ನಂತರ ಜನರಲ್ಲಿ ಹಠಾತ್ ಹಾರ್ಟ್ ಅಟ್ಯಾಕ್ ಆದಾಗ ಏನು ಮಾಡಬೇಕು. ಹೃದಯಾಘಾತದ ವೇಳೆ ನಾವು-ನೀವು ಮಾಡಬೇಕಾದ ಪ್ರಥಮ ಚಿಕಿತ್ಸೆ ಏನು ಹೀಗೆ ಹಲವಾರು ಪ್ರಶ್ನೆಗಳು ಕಾಡುತ್ತಿದೆ. ಈ ಪ್ರಶ್ನೆಗಳಿಗೆ ಮಲ್ಲೇಶ್ವರಂನ ಮಣಿಪಾಲ ನಾರ್ತ್ ಆಸ್ಪತ್ರೆ ಎಮರ್ಜೆನ್ಸಿ ವಿಭಾಗದ ಹೆಡ್ ಡಾ.ವಿಕಾಸ್ ಜಿಕೆ ಉತ್ತರ ನೀಡಿದ್ದಾರೆ.

PUNEETH RAJKUMAR 7

ಹೌದು, ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಾವಿನ ನಂತರ ಹೃದಯಘಾತದ ಬಗ್ಗೆ ಎಲ್ಲರಲ್ಲೂ ಆತಂಕ ಮನೆಮಾಡಿದೆ. ಹೃದಯಘಾತವಾದಾಗ ತತ್ ಕ್ಷಣಕ್ಕೆ ಏನು ಮಾಡಬೇಕು. ಆಂಬುಲೆನ್ಸ್ ಸಿಗದೇ ಇದ್ದಾಗ, ಸ್ವಂತ ವಾಹನದಲ್ಲಿ ರೋಗಿಗಳನ್ನು ಕರೆದೊಯ್ಯುವಾಗ, ರೋಗಿಗಳಿಗೆ ಪ್ರಜ್ಞೆ ತಪ್ಪಿದಾಗ ಯಾವ ರೀತಿ ಅವರನ್ನು ಉಳಿಸಲು ಪ್ರಯತ್ನಿಸಿಬೇಕು. ಹೃದಯದ ಯಾವ ಭಾಗದಲ್ಲಿ ಎಷ್ಟು ಹೊತ್ತು ಮಸಾಜ್ ಮಾಡಬೇಕು.. ಇವೆಲ್ಲದರ ಬಗ್ಗೆ ಹೆಡ್ ಡಾ.ವಿಕಾಸ್ ಜಿಕೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಮಾಧಿ ಬಳಿಯ ದೇವಸ್ಥಾನದಲ್ಲಿ ಅಪ್ಪು ಅಭಿಮಾನಿ ಮದುವೆ

heart

ಈ ಕುರಿತಂತೆ ಪಬ್ಲಿಕ್ ಟಿವಿ ಮೆಟ್ರೋ ಬ್ಯೂರೋ ಮುಖ್ಯಸ್ಥರಾದ ಪವಿತ್ರ ಕಡ್ತಲ ಅವರ ಜೊತೆ ಮಾತನಾಡಿದ ಡಾಕ್ಟರ್‌ ವಿಕಾಸ್‌ ಅವರು, ಹಂತ ಹಂತವಾಗಿ ಹೃದಯಾಘಾತವಾದಾಗ ಯಾವ ರೀತಿ ರೋಗಿಗೆ ಚಿಕಿತ್ಸೆ ನೀಡಬೇಕು ಎಂಬುವುದನ್ನು ತಿಳಿಸಿದ್ದಾರೆ. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

heart

ಹಂತ-1
* ಮೊದಲನೇಯದಾಗಿ ಹೃದಯಘಾತವಾಗಿ ವ್ಯಕ್ತಿ ಪ್ರಜ್ಞಾಹೀನನಾಗಿ ಕುಸಿದಾಗ ಮೊದಲು ಆತನನ್ನು ಸೇಫ್ ಸ್ಥಳದಲ್ಲಿ ಮಲಗಿಸಬೇಕು.
* ಆಂಬುಲೆನ್ಸ್ ಬರುವವರೆಗೆ ಸಮಯ ತೆಗೆದುಕೊಳ್ಳೋದ್ರಿಂದ ವ್ಯಕ್ತಿಯನ್ನು ಮೊದಲು ನೇರವಾಗಿ ಮಲಗಿಸಬೇಕು. ಯಾವುದು ದಿಂಬು ಇಡಬಾರದು
* ಅದಾದ ಬಳಿಕ ಎರಡು ಎದೆಯ ನಡುವೆ ಮಧ್ಯಭಾಗದಲ್ಲಿ ಸ್ವಲ್ಪ ಕೆಳಭಾಗದಲ್ಲಿ ಅಂಗೈ ಎರಡನ್ನು ಒಟ್ಟಿಗೆ ಇಟ್ಟು ಗಟ್ಟಿಯಾಗಿ ಒತ್ತಬೇಕು. ಇದನ್ನು ಸ್ವಲ್ಪ ಫಾಸ್ಟ್ ಆಗಿಯೇ ಮಸಾಜ್ ರೀತಿಯಲ್ಲಿ ಮಾಡಬೇಕು. 100 ರಿಂದ 120 ಬಾರಿ ಎದೆಯ ಜಾಗವನ್ನು ಪ್ರೆಸ್ ಮಾಡಬೇಕು. ಇದನ್ನೂ ಓದಿ: ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಸಿದ್ಧತೆ

ಹಂತ-2
* ಓಪನ್ ಏರ್ ವೇನಲ್ಲಿ ಇರಿಸಬೇಕು
* ಗಲ್ಲವನ್ನು ಕೊಂಚ ಮೇಲಕ್ಕೆತ್ತಿ, ಮೂಗು ಮುಚ್ಚಿ ಬಾಯಿಯ ಮೂಲಕ ವ್ಯಕ್ತಿಗೆ ಉಸಿರು ನೀಡಬೇಕು. ಇದನ್ನು ಎರಡರಿಂದ ಮೂರು ಬಾರಿ ಮಾಡಬೇಕು. ಆದರೆ ಕೊರೊನಾ ಸಂದರ್ಭದಲ್ಲಿ ಇದು ಕೊಂಚ ಕಷ್ಟ. ಈ ರೀತಿ ಮಾಡುವುದರಿಂದ ಮೆದುಳಿಗೆ ರಕ್ತಸಂಚಾರ ಸ್ಥಗಿತಗೊಳ್ಳುವುದು ಹಾಗೂ ರೋಗಿ ಹೃದಯಾಘಾತದಿಂದ ಸಾವನ್ನಪ್ಪುವುದನ್ನು ತಪ್ಪಿಸಬಹುದಾಗಿದೆ.
* ಇದಾದ ಬಳಿಕ ವ್ಯಕ್ತಿಗೆ ತತ್ ಕ್ಷಣ ಟ್ರೀಟ್‌ಮೆಂಟ್ ಕೊಟ್ಟರೆ ಜೀವವನ್ನು ಉಳಿಸಬಹುದು.

Share This Article
Leave a Comment

Leave a Reply

Your email address will not be published. Required fields are marked *