– ನಾಯಿ ಮಾಂಸ ದಂಧೆ ಆರೋಪ; ವರದಿಯಲ್ಲಿ ಏನಿದೆ?
ಬೆಂಗಳೂರು: ನಾಯಿ ಮಾಂಸ (Dog Meat) ಮಾರಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ರಿಪೋರ್ಟ್ ಸರ್ಕಾರದ ಕೈ ಸೇರಿದೆ. ಮಾಂಸ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (FSL) ಆಯುಕ್ತ ಕೆ ಶ್ರೀನಿವಾಸ್, ಆಹಾರ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ವರದಿ ಸಲ್ಲಿಸಿದ್ದಾರೆ.
Advertisement
ರಾಜಸ್ಥಾನದಿಂದ (Rajasthan) ಬೆಂಗಳೂರಿಗೆ (Bengaluru) ಮಾರಟಕ್ಕೆಂದು ತಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ಆಹಾರ ಮತ್ತು ಗುಣಮಟ್ಟ ಆಯುಕ್ತಾಲಯ ವರದಿ ನೀಡಿದೆ. ಹೈದ್ರಾಬಾದ್ ಐಸಿಎಆರ್ ರಿಪೋರ್ಟ್ ಗುಣಮಟ್ಟ ಇಲಾಖೆ ಈ ವರದಿ ನೀಡಿದೆ. ಐಸಿಎಆರ್ ರಿಪೋರ್ಟ್‌ಲ್ಲಿ ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ವರದಿಯಾಗಿದೆ. ಸ್ಯಾಂಪಲ್ ಪರಿಶೀಲಿಸಿ ಐಸಿಎಆರ್ ವರದಿ ನೀಡಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಡಿಕೆಶಿ – ಬೆಂಗಳೂರು, ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಮನವಿ
Advertisement
Advertisement
ಈ ಕುರಿತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಮಾತನಾಡಿ, ಕುರಿ ಮಾಂಸ ಎಂದು ವರದಿ ಬಂದಿದೆ. ಪ್ರಾಥಮಿಕ ಹಂತದಲ್ಲಿ 9 ಜನರಿಗೆ ಲೈಸೆನ್ಸ್ ಪಡೆದಿದ್ದರು ಎಂಬ ಹಿನ್ನೆಲೆ ನೋಟಿಸ್ ನೀಡಿ ವಿಚಾರಣೆ ಮಾಡಲಾಯಿತು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಲೈಸೆನ್ಸ್ ಇದೆ. ಹೀಗಾಗಿ ರಾಜಸ್ಥಾನದಿಂದ ಕುರಿ ತಂದು ಮಾರಾಟ ಮಾಡುತ್ತಿದ್ದರು. ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟವನ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ?: ಕುಮಾರಸ್ವಾಮಿ ಕಿಡಿ
Advertisement
ಇನ್ನು ನಾಯಿ ಮಾಂಸ ಎಂದು ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಅವರ ಮೇಲೆ ಕ್ರಮ ಕೈಗೊಳ್ಳುತ್ತದೆ. ನಾವು ಪೊಲೀಸರಿಗೆ ವರದಿ ನೀಡುತ್ತೇವೆ. ವದಂತಿ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು. ಇದನ್ನೂ ಓದಿ: Wayanad Landslide |ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ. ಪರಿಹಾರ : ಸಿಎಂ ಘೋಷಣೆ