ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಜೊತೆಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ದೂರವಾಣಿ ಕರೆ ಮಾಡಿ ಹೇಳಿದ್ದಾರೆ.
ಉಕ್ರೇನ್ (Ukrain) ವಿರುದ್ಧ ರಷ್ಯಾ (Russia) ನಡೆಸುತ್ತಿರುವ ಸಂಘರ್ಷದ ನಡುವೆ ಉಕ್ರೇನಿಯನ್-ಭಾರತೀಯ ಪಾಲುದಾರಿಕೆಯನ್ನು ಬಲಪಡಿಸುವ ಪ್ರಾಮುಖ್ಯತೆ ಬಗ್ಗೆ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಂಗಳವಾರ ದೂರವಾಣಿ ಮೂಲಕ ಮಾತನಾಡಿದರು. ಇದನ್ನೂ ಓದಿ: ಅಮೃತ್ ಪೌಲ್ ಹರಕೆಯ ಕುರಿ – PSI ಹಗರಣದ ನಿಜವಾದ ಕಿಂಗ್‍ಪಿನ್ ಮಾಜಿ ಸಿಎಂ ಮಗ: ದಿನೇಶ್ ಗುಂಡೂರಾವ್
Advertisement
Advertisement
ಈ ವೇಳೆ ಉಕ್ರೇನಿಯನ್ ಪ್ರದೇಶಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುವ ಗುರಿಯನ್ನು ಹೊಂದಿದೆ. ಈ ಆಕ್ರಮಣಕಾರರ ಎಲ್ಲಾ ನಿರ್ಧಾರಗಳು ಶೂನ್ಯ ಮತ್ತು ಅನೂರ್ಜಿತವಾಗಿವೆ ಮತ್ತು ವಾಸ್ತವವನ್ನು ಬದಲಾಯಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್ ರಷ್ಯಾದ ಅಧ್ಯಕ್ಷರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದರು.
Advertisement
Advertisement
ನಮ್ಮ ರಾಷ್ಟ್ರವು ಯಾವಾಗಲೂ ಮಾತುಕತೆಯ ಮೂಲಕ ಶಾಂತಿಯುತ ಇತ್ಯರ್ಥಕ್ಕೆ ಬದ್ಧವಾಗಿದೆ. ಆದರೆ ರಷ್ಯಾ ತನ್ನ ಮಾತಿನಂತೆ ನಿಲ್ಲಲಿಲ್ಲ ಮತ್ತು ಉದ್ದೇಶ ಪೂರ್ವಕವಾಗಿ ಈ ಪ್ರಕ್ರಿಯೆಯನ್ನು ದುರ್ಬಲಗೊಳಿಸಿತು. ಜನರಲ್ ಅಸೆಂಬ್ಲಿಯ ಅಧಿವೇಶನದ ವೇಳೆ ನಾನು ಭಾಷಣ ಮಾಡುವಾಗ ಶಾಂತಿಗಾಗಿ ನಮ್ಮ ಸ್ಪಷ್ಟ ಸೂತ್ರವನ್ನು ವಿವರಿಸಿದೆ. ಅದನ್ನು ಸಾಧಿಸಲು ಮತ್ತು ನಮ್ಮ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ ಎಂದು ಮೋದಿ ಅವರಿಗೆ ತಿಳಿಸಿದರು.
ರಷ್ಯಾದ ಪರಮಾಣು ಬ್ಲ್ಯಾಕ್‍ಮೇಲ್ ಕೇವಲ ಉಕ್ರೇನ್‍ಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬೆದರಿಕೆಯಾಗಿದೆ ಎಂದರು. ಜೊತೆಗೆ ಮೋದಿಯವರಿಗೆ ಉಕ್ರೇನ್‍ಗೆ ಭೇಟಿ ನೀಡುವಂತೆ ಆಹ್ವಾನಿಸಿದರು. ಇದನ್ನೂ ಓದಿ: ಕಳ್ಳರ ಕೃತ್ಯಕ್ಕೆ ಬೇಸತ್ತ ಗ್ರಾಮಸ್ಥರು – ಖದೀಮರನ್ನು ಹುಡುಕಿಕೊಟ್ಟವರಿಗೆ ಬಹುಮಾನ ಜೊತೆಗೆ ಸನ್ಮಾನ