ಮುಂಬೈ: ಬಂಡಾಯದ ಬಾವುಟ ಹಾರಿಸಿ ಶಿವಸೇನೆಯ 21 ಶಾಸಕರ ಸಮೇತ ಗುಜರಾತ್‌ನ ಸೂರತ್‌ನಲ್ಲಿರುವ ಹೋಟೆಲ್‌ನಲ್ಲಿದ್ದ ಸಚಿವ ಏಕನಾಥ್ ಸಿಂಧೆ ಮತ್ತೆ ಪಕ್ಷಕ್ಕೆ ವಾಪಸಾಗಲಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆಂದು ಪಕ್ಷದ ಮೂಲಗಳು ಹೇಳಿವೆ.
ಏಕನಾಥ್ ಶಿಂಧೆ ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ನಾನು ಅವರೊಂದಿಗೆ ಮಾತನಾಡಿದೆ. ಅವರು ವಾಪಸಾಗುತ್ತಾರೆ. ಎನ್‌ಸಿಪಿ ಕೂಡ ನಮ್ಮೊಂದಿಗಿದೆ ಎಂದು ಠಾಕ್ರೆ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ. ಇದನ್ನೂ ಓದಿ: MVA ಸರ್ಕಾರವನ್ನು ಅಲುಗಾಡಿಸುತ್ತಿರುವ ಏಕನಾಥ್ ಶಿಂಧೆ ಯಾರು?
Advertisement
Advertisement
ಶಿವಸೇನೆಯು ಬಿಜೆಪಿಯೊಂದಿಗಿನ ಮೈತ್ರಿಯನ್ನು ಪುನಃಸ್ಥಾಪಿಸಿ ರಾಜ್ಯದಲ್ಲಿ ಆಡಳಿತ ನಡೆಸಬೇಕು ಎಂಬುದು ಶಿಂಧೆಯವರ ಬೇಡಿಕೆಯಾಗಿದೆ.
Advertisement
ಕೆಲವರು ಬಿಜೆಪಿ ಜೊತೆ ಹೋಗೋಣ ಎಂದು ಹೇಳುತ್ತಿದ್ದಾರೆ. ಆದರೆ ನಾವು ಅದನ್ನು ಹೇಗೆ ಮಾಡುವುದು? ನಾವು ಅವರೊಂದಿಗೆ ಇದ್ದಾಗ ಸಾಕಷ್ಟು ನೋವು ಅನುಭವಿಸಿದ್ದೇವೆ. ನಾವೇಕೆ ಅವರೊಂದಿಗೆ ಹೋಗಬೇಕು ಎಂದು ಶಿವಸೇನಾ ಮುಖ್ಯಸ್ಥರು ಪಕ್ಷದ ನಾಯಕರಿಗೆ ಪ್ರಶ್ನಾರ್ಥಕವಾಗಿ ಕೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ MVA ಸರ್ಕಾರ ಪತನ? – ಶೀಘ್ರವೇ ಬಿಜೆಪಿ ಅಧಿಕಾರಕ್ಕೆ
Advertisement
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಬೆನ್ನಲ್ಲೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪಕ್ಷದ ಶಾಸಕರೊಂದಿಗೆ ತುರ್ತು ಸಭೆ ನಡೆಸಿದರು. ಈ ವೇಳೆ ಏಕನಾಥ್ ಸಿಂಧೆ ಪಕ್ಷಕ್ಕೆ ವಾಪಸಾಗಲಿದ್ದಾರೆ ಎಂದು ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.
ನಿನ್ನೆಯಷ್ಟೇ ಎಂಎಲ್‌ಸಿ ಫಲಿತಾಂಶ ಬಂದಿದ್ದು, ಅಘಡಿ ಮೈತ್ರಿಕೂಟದಷ್ಟೇ ವಿಪಕ್ಷ ಬಿಜೆಪಿಯೂ ಐದು ಸ್ಥಾನ ಗಳಿಸಿತ್ತು. ಕಾಂಗ್ರೆಸ್‌ನ ಮೂವರು ಶಾಸಕರು ಅಡ್ಡಮತದಾನ ಮಾಡಿದ ಪರಿಣಾಮ ಬಿಜೆಪಿಯ ಐದನೇ ಅಭ್ಯರ್ಥಿ ಗೆದ್ದಿದ್ದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯ ಬಳಿಕ MVA ಸರ್ಕಾರಕ್ಕೆ ಮತ್ತೆ ಶಾಕ್ – ಬಿಜೆಪಿಯ ಐವರು ಆಯ್ಕೆ
ಠಾಕ್ರೆಗಳ ನಂತರ ಶಿವಸೇನೆಯ ಅತ್ಯಂತ ಪ್ರಭಾವಿ ನಾಯಕ ಸಿಂಧೆ. ಶಿವಸೇನೆಯು 55 ಶಾಸಕರನ್ನು ಹೊಂದಿದ್ದು, ಅದರಲ್ಲಿ ಕನಿಷ್ಠ 21 ಮಂದಿ ಶಿಂಧೆಯವರೊಂದಿಗೆ ಇದ್ದಾರೆ. ಶಿಂಧೆ ಅವರನ್ನು ಬೆಂಬಲಿಸುವ ಹೆಚ್ಚಿನ ಶಾಸಕರಿದ್ದಾರೆ ಎಂದು ಅವರ ನಿಕಟ ಮೂಲಗಳು ಹೇಳಿಕೊಂಡಿವೆ. ಶಿವಸೇನೆ ಇಬ್ಭಾಗವಾದರೆ ಮಹಾರಾಷ್ಟ್ರ ಸರ್ಕಾರ ಪತನವಾಗಲಿದೆ.