ಬೀಜಿಂಗ್: ಮಕ್ಕಳು ಆಟವಾಡುವಾಗ ಏನಾದ್ರೂ ತೊಂದರೆಯಾದ್ರೆ ಪೋಷಕರು ಥಟ್ಟನೆ ಬಂದು ಮಗುವಿನ ರಕ್ಷಣೆ ಮಾಡ್ತಾರೆ. ಮಗು ಅಪಾಯದಲ್ಲಿದ್ರೆ ಎಲ್ಲಾ ದೇವರಿಗೂ ಅಲ್ಲೇ ಹರಕೆ ಮಾಡಿಕೊಳ್ತಾರೆ. ಹೀಗೆ ಮಗುವೊಂದರ ತಲೆ ಬಾಲ್ಕನಿಯ ಕಂಬಿಗಳ ಮಧ್ಯೆ ಸಿಲುಕಿಕೊಂಡು ಅಗ್ನಿಶಾಮಕ ಸಿಬ್ಬಂದಿ ಮಗುವನ್ನ ಕಾಪಾಡಲು ಕಷ್ಟಪಡುತ್ತಿದ್ರೆ ಮಗುವಿನ ತಂದೆ ಏನು ಮಾಡಿದ ಗೊತ್ತಾ?
ಮಗುವಿನ ತಂದೆ ಗಾಬರಿಯಿಂದ ಪರದಾಡ್ತಾ ಅದರ ತಲೆಯನ್ನ ಹೇಗಾದ್ರೂ ಕಂಬಿಗಳ ಮಧ್ಯದಿಂದ ಬಿಡಿಸಿದ್ರೆ ಸಾಕು ಅಂತ ಪ್ರಾರ್ಥಿಸುತ್ತಿದ್ದ ಅಂದ್ಕೊಂಡ್ರಾ? ಇಲ್ಲ. ಆತ ಮಗುವಿನ ಹಿಂದೆ ಕುಳಿತು ವಿಡಿಯೋ ಮಾಡ್ತಿದ್ದ.
Advertisement
Advertisement
ಚೀನಾದ ಫುಜಿಯಾನ ಪ್ರಾಂತ್ಯದಲ್ಲಿ ಕಳೆದ ವಾರ ಈ ಘಟನೆ ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮಗುವಿಗೆ ಯಾವುದೇ ರೀತಿ ಗಾಯವಾಗಬಾರದೆಂದು ಅದನ್ನು ರಕ್ಷಿಸಲು ಶ್ರಮಿಸುತ್ತಿದ್ದರು. ಆದ್ರೆ ಮಗುವಿನ ತಂದೆ ಮಾತ್ರ ಒಂದು ಕೈಯಲ್ಲಿ ಮಗುವನ್ನ ಹಿಡಿದು ಮತ್ತೊಂದು ಕೈಯಲ್ಲಿ ಸೆಲ್‍ಫೋನ್ ಹಿಡಿದುಕೊಂಡು ಮಗುವಿನ ಕಡೆ ತಲೆಯೇ ಕೆಡಿಸಿಕೊಳ್ಳದೇ ವಿಡಿಯೋ ಮಾಡ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ನೆಟಿಜನ್‍ಗಳ ಆಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ತಂದೆಯ ಬೇಜವಾಬ್ದಾರಿತನವನ್ನ ಜನರು ಖಂಡಿಸಿದ್ದರೆ. ಮಗುವಿನ ತಲೆಯನ್ನ ಕಂಬಿಗಳಿಂದ ಹೊರತೆಗೆದ ನಂತರವಷ್ಟೇ ಆ ವ್ಯಕ್ತಿ ವಿಡಿಯೋ ಮಾಡೋದನ್ನ ನಿಲ್ಲಿಸಿದ ಎಂದು ವರದಿಯಾಗಿದೆ.