ಚಿಕ್ಕಮಗಳೂರು: ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಜನ ಕೊಂಡುಕೊಳ್ಳುತ್ತಾರೆ. ನೀವು ಮೊದಲು ಅವರ ಖಾತೆಗೆ ಹಣ ಹಾಕಿ ಎಂದು ಹೇಳಿಕೆ ನೀಡಿದ್ದ ಶಾಸಕ ಸಿ.ಟಿ ರವಿಗೆ (C.T.Ravi) ಇಂಧನ ಸಚಿವ, ಚಿಕ್ಕಮಗಳೂರು (Chikkamagaluru) ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ (K.J.George) ತಿರುಗೇಟು ನೀಡಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, ನಾವು ಅಕ್ಕಿಯನ್ನು ಉಚಿತವಾಗಿ ಕೇಳುತ್ತಿಲ್ಲ. ದುಡ್ಡು ಕೊಡುತ್ತೇವೆ ಕೊಡಿ ಎಂದು ಕೇಳಿದ್ದೇವೆ. ಜನರಿಗೆ ಬೇಕಾಗಿರುವುದು ಅಕ್ಕಿ, ದುಡ್ಡಲ್ಲ. ಭಾರತೀಯ ಆಹಾರ ನಿಗಮದವರೇ ಸ್ಟಾಕ್ ಇದೆ, ಕೊಡುತ್ತೇವೆ ಎಂದು ಲೆಟರ್ ಕೊಟ್ಟಿದ್ದಾರೆ. ಈಗ ಅಕ್ಕಿ ವಾಪಸ್ ಹೋಗಿದೆ. ಕೊಳೆಯಲು ಬಿಟ್ಟಿದ್ದೀರಾ ರವಿಯವರೇ ಎಂದು ಕಿಡಿಕಾರಿದರು. ಇದನ್ನೂ ಓದಿ: ತಾರಕಕ್ಕೇರಿದ ಅಕ್ಕಿ ರಾಜಕೀಯ, ಬಿಜೆಪಿ ನಾಯಕರಿಗೆ ಸಾಕ್ಷಿ ಸಮೇತ ಸಿದ್ದು ತಿರುಗೇಟು
Advertisement
Advertisement
ಪಾಪ ಸಿ.ಟಿ ರವಿ ಒಬ್ಬ ಪಾರ್ಟಿ ಮ್ಯಾನ್. ಅವರು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಅವರಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತದೆ. ಅಕ್ಕಿ ಇರುವುದೇ ಬಡವರಿಗೆ ಕೊಡುವುದಕ್ಕೆ. ದುಡ್ಡು ಕೊಡಿ ಎಂದರೆ ಹೇಗೆ? ಜನರಿಗೆ ಬೇಕಾಗಿರುವುದು ಅಕ್ಕಿ, ದುಡ್ಡಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಿಯೋನಿಕ್ಸ್ ಸಂಸ್ಥೆಯನ್ನು ಪ್ರಸ್ತುತತೆಗೆ ಅನುಗುಣವಾಗಿ ಸಜ್ಜುಗೊಳಿಸಲು ಪ್ರಿಯಾಂಕ್ ಖರ್ಗೆ ನಿರ್ದೇಶನ
Advertisement
ಮತಾಂತರ ನಿಷೇಧ ಕಾಯ್ದೆ (Anti Conversion Law) ಹಿಂಪಡೆದ ಕಾರಣ ಬಿಜೆಪಿಯವರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ ಕೆಲಸವೇ ವಿರೋಧ ಮಾಡುವುದು. ಕಾಂಗ್ರೆಸ್‌ನ (Congress) ಅಭಿವೃದ್ಧಿ ಹೆಜ್ಜೆಗೆ ವಿರೋಧವೇ ಅವರ ಕೆಲಸ. ಅವರು ಪ್ರತಿಪಕ್ಷ ಅಲ್ಲ. ವಿರೋಧ ಪಕ್ಷ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಫ್ರೀ ಬಸ್ ಸೇವೆ, ನಮ್ಮ ಸಂಸ್ಥೆಗಳ ಮೇಲೆ ಯಾವುದೇ ಹೊರೆಯಾಗಲ್ಲ: ರಾಮಲಿಂಗಾ ರೆಡ್ಡಿ
Advertisement
ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು. ಬಲವಂತ ಹಾಗೂ ಆಶ್ವಾಸನೆ ಕೊಟ್ಟು ಮತಾಂತರ ಮಾಡುವುದು ತಪ್ಪು. ಅದು ಹಳೇಯ ಕಾಯ್ದೆ. ಅದನ್ನು ನಾವು ಒಪ್ಪುತ್ತೇವೆ. ಆದರೆ ಅವರು ಕೆಲವು ತಪ್ಪು ಮಾಡಿದ್ದಾರೆ. ಆರೋಪ ಮಾಡಿದವರು ಅದನ್ನು ಸಾಬೀತು ಮಾಡಬೇಕು. ಸಾಕ್ಷಿ ಕೊಟ್ಟು ಹೇಳಬೇಕು. ನನ್ನ ಮೇಲೆ ಆರೋಪ ಮಾಡಿದರೆ ನಾನೇ ಪ್ರೂವ್ ಮಾಡಬೇಕಾ? ಇದು ಯಾವ ಕಾನೂನಿನಲ್ಲಿ ಇದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಶಿವಕುಮಾರ್ ಅಣ್ಣ.. ಭರವಸೆ ಕೊಟ್ಟಿರೋದು ನೀವು, ಮೋದಿ ಅಲ್ಲ: ಅಶೋಕ್ ಕಿಡಿ
ಬಿಜೆಪಿಯವರು ಈ ರೀತಿ ತುಂಬಾ ತಪ್ಪು ಮಾಡಿದ್ದಾರೆ. ಅದನ್ನು ನಾವು ಸರಿ ಮಾಡುತ್ತೇವೆ. ಇಷ್ಟು ದಿನ ಅವರ ಆಡಳಿತ ಇದ್ದಾಗ ಹೊಸದಾಗಿ ಏನು ಕಂಡುಹಿಡಿದಿದ್ದಾರೆ? ನಮಗೆ ಜವಾಬ್ದಾರಿ ಇದೆ. ಎಲ್ಲರಿಗೂ ಸರಿ ಆಗುವ ಕಾಯ್ದೆ ಜಾರಿ ಮಾಡುತ್ತೇವೆ ಎಂದರು. ಇದನ್ನೂ ಓದಿ: ಎಳಸು ಅಂದ್ರೆ ಬೇಸರವಿಲ್ಲ, ಚೈಲ್ಡ್ ಆಗಿಯೇ ಪ್ರಶ್ನೆ ಕೇಳ್ತೀನಿ – ಪ್ರತಾಪ್ ಸಿಂಹ