ಬೆಂಗಳೂರು: ಪ್ರಭಾವಿ ಶಾಸಕರ ಜಮೀನು ಈ ಭಾಗದಲ್ಲಿಯೇ ಇದೆ. ರಮ್ಯಾ ಹೇಳಿದ್ದು ನಿಜ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದಾರೆ.
How many MLA’s and MP’s of Karnataka have real estate business’ would you know? Someone said 26 out of 28 mla’s are into real estate ???????? That’s a staggering number!
— Ramya/Divya Spandana (@divyaspandana) September 6, 2022
Advertisement
ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, 17 ಕೋಟಿ ವಿಲ್ಲಾ ಮಾಡಿದವರಿಗೆ ಬುದ್ಧಿ ಇಲ್ಲ ಬಿಡಿ ಎಂದು ಕೆಂಡಾಮಂಡಲರಾಗಿದ್ದಾರೆ. ಎಲ್ಲವೂ ನಿಧಾನಕ್ಕೆ ಗೊತ್ತಾಗುತ್ತೆ ಎಂದು ಒತ್ತುವರಿ ಬಗ್ಗೆ ಶಾಸಕ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ಒತ್ತುವರಿದಾರರಿಗೆ ಇನ್ನೂ ಟೈಂ ಇಲ್ಲ. ಎಲ್ಲವೂ ತೆರವು ಮಾಡೋದೇ. ಒತ್ತುವರಿದಾರರಿಗೆ ಬಿಸಿ ಮುಟ್ಟಿಸೋಕೆ ಹೋಗಿಯೇ ನಂಗೆ ಸಮಸ್ಯೆಯಾಗಿದೆ. ಹಾಗಂತ ನಾನು ಸುಮ್ಮನೆ ಇರಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೈಸೂರು ಮೇಯರ್, ಉಪ ಮೇಯರ್ ಎಲೆಕ್ಷನ್: ಬಿಜೆಪಿ ಬಾಯಿಗೆ ಬಿತ್ತು ಡಬಲ್ ಲಡ್ಡು!
Advertisement
And btw these 26 MLA’s into real estate are ‘elected’- It was ‘the people’s choice’. No point cribbing. So please vote (firstly) & vote wisely. Most people don’t even vote especially urban & then when this happens there’s fury. We are all to be blamed for the state we are in.
— Ramya/Divya Spandana (@divyaspandana) September 6, 2022
ರಮ್ಯಾ ಹೇಳಿದ್ದೇನು..?: ಕಳೆದ ಎರಡು ವಾರಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಅನೇಕ ಪ್ರದೇಶಗಳು ಕೆರೆಗಳಂತಾಗಿವೆ. ಮನೆಗೆ ನೀರು ನುಗ್ಗಿ ಜನ ಜೀವನಕ್ಕೆ ಅಪಾರ ತೊಂದರೆ ಉಂಟಾಗಿದೆ. ವಾಹನ ಸವಾರರಿಗಂತೂ ನಿತ್ಯ ನರಕ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ರಮ್ಯಾ, ಬೆಂಗಳೂರು ಹೀಗೆ ಆಗುವುದಕ್ಕೆ ಕಾರಣ ಜನಪ್ರತಿನಿಧಿಗಳು. 28 ಎಂಎಲ್.ಎ ಗಳಿಗೆ 26 ಎಂಎಲ್‍ಎಗಳು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಈ ಪ್ರಮಾಣದಲ್ಲಿ ಅವರೇ ಇದ್ದರೆ, ಬೆಂಗಳೂರನ್ನು ಕಾಪಾಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
Why is it that only people who have the money (mostly real estate) are given tickets to contest? (Think hard) The expenditure allowed by the EC is 40 lakhs for an MLA but why do elections run into crores?! (Think hard) The answer is all here-
— Ramya/Divya Spandana (@divyaspandana) September 6, 2022
ಹಣ ಇದ್ದವರಿಗೆ ಅದರಲ್ಲೂ ರಿಯಲ್ ಎಸ್ಟೇಟ್ ಮಾಡುತ್ತಿರುವ ಹೆಚ್ಚಿನ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದು ಏಕೆ ಎಂದು ಪ್ರಶ್ನೆ ಮಾಡಿರುವ ರಮ್ಯಾ, ಚುನಾವಣಾ ಆಯೋಗವು ಒಬ್ಬ ಎಂ.ಎಲ್.ಎ ಗೆ ಚುನಾವಣೆ ಖರ್ಚು ಮಾಡಲು 40 ಲಕ್ಷ ರೂಪಾಯಿ ಮಿತಿ ನಿಗದಿ ಮಾಡಿದೆ. ಆದರೆ ಕೋಟಿ ಲೆಕ್ಕಗಳಲ್ಲಿ ಖರ್ಚಾಗುತ್ತಿದೆ ಏಕೆ? ಎಂದಿದ್ದಾರೆ. ಹಾಗಾಗಿ ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಅವರು ಮನವಿ ಮಾಡಿದ್ದಾರೆ.