ಲಕ್ನೋ: ನಾನೇಕೆ ಪ್ರಧಾನಿ ನರೇಂದ್ರ ಮೋದಿ ಮಾತನ್ನು ಕೇಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.
ಮೋದಿ ಅವರು ಸಂದರ್ಶನವೊಂದರಲ್ಲಿ ಮಾತನಾಡುವಾಗ ‘ರಾಹುಲ್ ಯಾರ ಮಾತನ್ನು ಕೇಳುವುದಿಲ್ಲ’ ಎಂದಿದ್ದರು. ಈ ಹೇಳಿಕೆ ಕುರಿತು ಉತ್ತರಾಖಂಡದ ಮಂಗಳೂರಿನಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಮೋದಿ ಜೀ ನಾನು ಏನನ್ನು ಕೇಳುವುದಿಲ್ಲ ಎಂದಿದ್ದಾರೆ. ಅವರು ಏಕೆ ಈ ರೀತಿ ಹೇಳಿದ್ದಾರೆ ಎಂಬುದು ನಿಮಗೆ ಅರ್ಥವಾಗಿದೆಯೇ? ಎಂದು ಜನರನ್ನು ಪ್ರಶ್ನಿಸಿದರು. ಇದನ್ನೂ ಓದಿ: ಜನರನ್ನು ತಣ್ಣಗಾಗಿಸುವ ಬದಲು ಉದ್ಯೋಗವಕಾಶ ಹೆಚ್ಚಿಸಿ: ಯೋಗಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
Advertisement
Advertisement
ನಾವು ಜಾರಿ ನಿರ್ದೇಶನಾಲಯ(ಇಡಿ) ಮತ್ತು ಕೇಂದ್ರೀಯ ತನಿಖಾ ದಳದಂತಹ ಕೇಂದ್ರೀಯ ಸಂಸ್ಥೆಗಳ ಒತ್ತಡಕ್ಕೆ ಮಣಿಯುವುದಿಲ್ಲ. ಅಂದರೆ ಇಡಿ, ಸಿಬಿಐ ಒತ್ತಡವು ನನ್ನ ಮೇಲೆ ಕೆಲಸ ಮಾಡುವುದಿಲ್ಲ. ರಾಹುಲ್ ಎಂದೂ ಹಿಂದೆ ಸರಿಯುವುದಿಲ್ಲ. ನಾನು ಅವರ ಮಾತನ್ನು ಏಕೆ ಕೇಳಬೇಕು? ಎಂದು ವಾಗ್ವಾದ ಮಾಡಿದರು.
Advertisement
Advertisement
ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಧಾನಿ ರಾಹುಲ್ ಅವರನ್ನು ಗುರಿಯಾಗಿಸಿಕೊಂಡು, ಏನನ್ನು ಕೇಳದ ಮತ್ತು ಸದನದಲ್ಲಿ ಕುಳಿತುಕೊಳ್ಳದ ವ್ಯಕ್ತಿ ಎಂದು ಹೇಳಿಕೆಯನ್ನು ಕೊಟ್ಟಿದ್ದರು. ಈ ಹೇಳಿಕೆಗೆ ರಾಹುಲ್ ಅವರು ತಿರುಗೇಟು ಕೊಟ್ಟಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ಗುರುವಾರ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಷ್ಟ್ರಪತಿಗಳ ಭಾಷಣಕ್ಕೆ ಪ್ರಧಾನಿ ಸಂಸತ್ತಿನಲ್ಲಿ ಉತ್ತರ ಕೊಡುತ್ತಿದ್ದಾಗ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಲ್ಲಿ ಇರಲಿಲ್ಲ. ಅಷ್ಟೇ ಅಲ್ಲ, ಅವರು ಸಂಸತ್ತಿನಲ್ಲಿ ಅಷ್ಟಾಗಿ ಕಾಣುವುದಿಲ್ಲ. ಅವರು ಏನಾದರೂ ಹೇಳಿ ಸಂಸತ್ತಿನಿಂದ ಕಣ್ಮರೆಯಾಗುತ್ತಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಸಿಎಂ ಯೋಗಿ ವೇಷ ತೊಟ್ಟು ಮತಗಟ್ಟೆಗೆ ಬಂದ ವ್ಯಕ್ತಿ – ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದ ಜನ