ಹಾಂಕಾಂಗ್: ಖ್ಯಾತ ಮಾಡೆಲ್‌ವೊಬ್ಬಳನ್ನ (Model) ಬರ್ಬರವಾಗಿ ಹತ್ಯೆಗೈದು, ಆಕೆಯ ದೇಹವನ್ನು ತುಂಡು-ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿದ್ದಾನೆ. ಆಕೆಯ ತಲೆಯನ್ನು ಸೂಪ್ ಮಾಡೋದಕ್ಕಾಗಿ ಮಡಿಕೆಯಲ್ಲಿ ಇಟ್ಟಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಹಾಂಕಾಂಗ್‌ನಲ್ಲಿ (Hong Kong) ನಡೆದಿದೆ.
ಈ ಹತ್ಯೆ ಕೆಲ ದಿನಗಳ ಹಿಂದೆಯಷ್ಟೇ ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣವನ್ನ ನೆನಪಿಸಿದೆ. ಇದನ್ನೂ ಓದಿ: ʼಲೇಡಿ ಅಲ್ ಖೈದಾʼ ಕರೆತರಲು ಪಾಕ್ ಸರ್ಕಾರಕ್ಕೆ ಒತ್ತಾಯ – 13 ವರ್ಷಗಳಿಂದ ಅಮೆರಿಕ ಜೈಲಲಿದ್ದಾಳೆ ಪಾಕ್ ಸುಂದರಿ
ಅಬ್ಬಿ ಚೋಯ್ (28) (Abby Choi) ಹತ್ಯೆಗೀಡಾದ ಹಾಂಕಾಂಗ್‌ನ ಪ್ರಸಿದ್ಧ ಮಾಡೆಲ್. ಈಕೆ ಫೆಬ್ರವರಿ 2ರಂದು ಕಾಣೆಯಾಗಿದ್ದಳು. ಈ ಬಗ್ಗೆ ಪೊಲೀಸರಿಗೆ (Police) ದೂರು ನೀಡಿದ ನಂತರ ಆಕೆಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಖಚಿತ ಮಾಹಿತಿ ಮೇರೆಗೆ ತಾಯ್ ಪೋ ಜಿಲ್ಲೆಯ ಮನೆಯೊಂದರಲ್ಲಿ ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರಿಗೆ ಇಡೀ ಮನೆ ಹುಡುಕಾಡಿದರೂ ಆಕೆಯ ಸುಳಿವೇ ಇರಲಿಲ್ಲ. ಕೊನೆಗೆ ಫ್ರಿಡ್ಜ್ ತೆರೆದು ನೋಡಿದಾಗ ಎರಡು ಮನುಷ್ಯರ ಕಾಲುಗಳು, ಮನುಷ್ಯನ ದೇಹದ ಮಾಂಸದ ತುಂಡುಗಳು ರಕ್ತಸಿಕ್ತವಾಗಿದ್ದುದ್ದನ್ನು ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: ಚೀನಾದ ಟಿಕ್‌ಟಾಕ್ ಅನ್ನು 30 ದಿನದೊಳಗೆ ಡಿವೈಸ್‌ಗಳಿಂದ ಡಿಲೀಟ್ ಮಾಡಿ – ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ
ಅಲ್ಲಿದ್ದ ಮನುಷ್ಯನ ದೇಹದ ಮಾಂಸದ ತುಂಡುಗಳು, ಮಾಂಸ ಕತ್ತರಿಸುವ ಯಂತ್ರ, ವಿದ್ಯುತ್ ಗರಗಸ, ಮಹಿಳೆಯ ಬಟ್ಟೆಗಳನ್ನ ವಶಪಡಿಸಿಕೊಂಡಿದ್ದರು. ಮೃತದೇಹದ ಭಾಗಗಳನ್ನ ಪರೀಕ್ಷೆಗೆ ಕಳುಹಿಸಿ, ಅದು ಅಬ್ಬಿ ಚೋಯ್ ದೇಹದ್ದೇ ಎಂದು ಖಚಿತಪಡಿಸಿಕೊಂಡರು. ದೇಹದ ಉಳಿದ ಭಾಗಗಳಿಗಾಗಿ ಶೋಧ ನಡೆಸಿದ್ದರು. ಈ ನಡುವೆ ಮನೆಯಲ್ಲಿದ್ದ ಪಾತ್ರೆಗಳನ್ನೆಲ್ಲಾ ಹುಡುಕಾಡುತ್ತಿದ್ದಾಗ ಸೂಪ್ ತಯಾರಿಸಲು ತಲೆಯನ್ನು ಮಡಿಕೆಯೊಂದರಲ್ಲಿ ಇರಿಸಿರುವುದು ಕಂಡುಬಂದಿತ್ತು.
ಪೊಲೀಸರು ಮಡಿಕೆ ಮುಚ್ಚಳ ತೆರೆದಾಗ ಅದರಲ್ಲಿ ಸೂಪ್ ತರಹದ ದ್ರವ ತುಂಬಿತ್ತು. ಅದರಲ್ಲಿ ಕ್ಯಾರೆಟ್, ಎಲೆಕೋಸು ಮುಂತಾದ ಕತ್ತರಿಸಿದ ತರಕಾರಿಗಳು ಮೇಲ್ಭಾಗದಲ್ಲಿ ತೇಲುತ್ತಿದ್ದವು. ಅದರ ಮೇಲೂ ಒಂದಷ್ಟು ಗ್ರೀಸ್ ಶೇಖರಣೆಯಾಗಿತ್ತು. ಆ ದ್ರವವನ್ನು ಹೊರತೆಗೆದು ಬೇರ್ಪಡಿಸಿ, ತಲೆ ಭಾಗವನ್ನು ನೋಡಿದಾಗ ಮಾಂಸ ಮತ್ತು ಚರ್ಮ ಇರಲಿಲ್ಲ. ಬಳಿಕ ಪ್ರಯೋಗಾಲಯಕ್ಕೆ ಕಳುಹಿಸಿ ಈ ತಲೆ ಅಬ್ಬಿ ಚೋಯ್ ದೇಹದ್ದೇ ಎಂದು ಪೊಲೀಸರು ಖಚಿತಪಡಿಸಿಕೊಂಡರು.
ಪೊಲೀಸ್ ಅಧಿಕಾರಿ ಅಲನ್ ಚುಂಗ್ ಪ್ರಕಾರ, ಈ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನ ಬಂಧಿಸಲಾಗಿದೆ. ಅಬ್ಬಿ ಚೋಯ್ ಅವರ ಮಾಜಿ ಪತಿ ಅಲೆಕ್ಸ್ ಕ್ವಾಂಗ್, ಮಾವ ಕ್ವಾಂಗ್ ಕೌ, ಅತ್ತೆ ಜೆನ್ನಿ ಲೀ ಮತ್ತು ಸೋದರ ಮಾವ ಆಂಥೋನಿ ಕ್ವಾಂಗ್‌ನನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲು ಆಕೆ ಕಾರಿನಲ್ಲಿ ಚಲಿಸುತ್ತಿದ್ದಾಗ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಆಕೆ ಗಾಯಗೊಂಡು ಮೂರ್ಛೆ ಹೋದ ನಂತರ ವಿದ್ಯುತ್ ಗರಗಸದಿಂದ ಕತ್ತರಿಸಿ ಕೊಲೆ ಮಾಡಲಾಗಿದೆ. ರುಂಡವನ್ನು ಬೇರ್ಪಡಿಸಿ ತಲೆಯನ್ನು ಸೂಪ್ ಮಾಡಲು ಇಟ್ಟುಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.