ಬೆಂಗಳೂರು: ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆ ಬಳಿಕ ಒಂದು ರೀತಿಯಲ್ಲಿ ಸಮ್ಮಿಶ್ರ ಸರ್ಕಾರದ ಕೌಂಟ್ ಡೌನ್ ಆರಂಭಗೊಂಡಿದೆ ಎಂದು ವಿಪಕ್ಷಗಳು ಹೇಳಿದ್ದವು. ಶನಿವಾರ ರಾಜ್ಯ ರಾಜಕೀಯಯಲ್ಲಿ ದಿಢೀರ್ ಎಂದು 12 ಶಾಸಕರು ರಾಜೀನಾಮೆ ನೀಡಿ 10 ಜನ ಮುಂಬೈಗೆ ತೆರಳಿ ಸೋಫಿಟೆಲ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಶನಿವಾರದಿಂದ ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಅಚ್ಚರಿಯ ಘಟನೆಗಳು ನಡೆಯುತ್ತಿವೆ. ಸೋಮವಾರ ಪಕ್ಷೇತರ ಶಾಸಕರಾದ ಹೆಚ್.ನಾಗೇಶ್ ಮತ್ತು ಆರ್.ಶಂಕರ್ ಮೈತ್ರಿಗೆ ಬೆಂಬಲ ನೀಡಿ ಅಜ್ಞಾತ ಸ್ಥಳದಲ್ಲಿ ಉಳಿದುಕೊಂಡಿದ್ದಾರೆ.
Advertisement
ಇಂದು ಕಚೇರಿಗೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್ ಸಲ್ಲಿಕೆಯಾದ ಎಲ್ಲ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್, ಕೇವಲ ಐದು ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿವೆ ಎಂದು ಅತೃಪ್ತರಿಗೆ ಶಾಕ್ ನೀಡಿದರು. ಎಂಟು ಜನ ಶಾಸಕರು ಮತ್ತೊಮ್ಮೆ ರಾಜೀನಾಮೆ ಪತ್ರವನ್ನು ಸಲ್ಲಿಸಲು ಮುಂಬೈನಿಂದ ಬೆಂಗಳೂರಿಗೆ ಯಾವುದೇ ಕ್ಷಣದಲ್ಲಿ ಆಗಮಿಸುವ ಸಾಧ್ಯತೆಗಳಿಗೆ. ಹೀಗಾಗಿ ರಾಜ್ಯ ರಾಜಕೀಯಕದಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರು ಸಂಭವಿಸಬಹುದು.
Advertisement
Advertisement
* ರಾಜ್ಯದಲ್ಲಿ ಮುಂದೆ ಏನಾಗಬಹುದು?
1. ರಾಜೀನಾಮೆ ನೀಡಿರುವ ಶಾಸಕರನ್ನು ಕರೆದು ಸ್ಪೀಕರ್ ಖುದ್ದಾಗಿ ವಿವರಣೆ ಕೇಳಬಹುದು. ವಿವರಣೆ ಆಧಾರದ ಮೇಲೆ ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕಸಬಹುದು. ಅತೃಪ್ತ ರಾಜೀನಾಮೆ ಅಂಗೀಕಾರವಾದ್ರೆ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಈ ವೇಳೆ ವಿಪಕ್ಷ ವಿಶ್ವಾಸಮತ ಯಾಚನೆಗೆ ಅವಕಾಶ ಕೇಳಬಹುದು. ರಾಜ್ಯಪಾಲರು ದೋಸ್ತಿ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಸೂಚಿಸಬಹುದು.
Advertisement
2. ಒಂದು ವೇಳೆ ಸ್ಪೀಕರ್ ಅತೃಪ್ತರ ರಾಜೀನಾಮೆಯನ್ನ ತಿರಸ್ಕಾರ ಮಾಡಿದ್ರೆ, ರಾಜ್ಯದಲ್ಲಿ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಬಹುದು. ಅತೃಪ್ತ 14 ಶಾಸಕರು ಸ್ಪೀಕರ್ ಕ್ರಮ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಬಹುದು. ಆಗ ನ್ಯಾಯಾಲಯದ ತೀರ್ಪಿನಂತೆ ಸ್ಪೀಕರ್ ನಡೆದುಕೊಳ್ಳಬೇಕಾಗುತ್ತದೆ.
3. ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅತೃಪ್ತರನ್ನು ಅನರ್ಹಗೊಳಿಸಬೇಕೆಂದು ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅತೃಪ್ತ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಸ್ತ್ರವನ್ನು ಸ್ಪೀಕರ್ ಪ್ರಯೋಗಿಸಿದರೆ, 14 ಶಾಸಕರು ಸ್ಪೀಕರ್ ಕ್ರಮ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಬಹುದು. ಆಗ ನ್ಯಾಯಾಲಯದ ತೀರ್ಪಿನಂತೆ ಸ್ಪೀಕರ್ ನಡೆದುಕೊಳ್ಳಬೇಕಾಗುತ್ತದೆ.
4. ಇತ್ತ ಸ್ಪೀಕರ್ ರಾಜೀನಾಮೆ ಸ್ವೀಕಾರ ವಿಳಂಬದ ವಿರುದ್ಧ ಬಿಜೆಪಿ ಹೋರಾಟ ನಡೆಸಿ, ರಾಜಭವನದ ಕದ ತಟ್ಟಿ ಸ್ಪೀಕರ್ ವಿರುದ್ಧವೂ ದೂರು ಕೊಡಬಹುದು. ರಾಜ್ಯಪಾಲರು ವಿಶ್ವಾಸಮತ ಯಾಚಿಸುವಂತೆ ಸರ್ಕಾರಕ್ಕೆ ಸೂಚಿಸಬಹುದು. ಬಳಿಕ ಬಿಜೆಪಿ ದೂರನ್ನು ಆಧರಿಸಿ ವಿಶ್ವಾಸ ಮತಯಾಚನೆ ರಾಜ್ಯಪಾಲರು ಸೂಚಿಸಬಹುದು.
5. ತೀರಾ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದಾಗ ಕೇಂದ್ರ ಮಧ್ಯಪ್ರವೇಶ ಮಾಡಬಹುದು. ಕೇಂದ್ರ ಗೃಹ ಇಲಾಖೆ ರಾಜ್ಯಪಾಲರಿಂದ ಸಂಪೂರ್ಣ ವರದಿ ತರಿಸಿಕೊಳ್ಳಬಹುದು. ರಾಜ್ಯಪಾಲರ ವರದಿಯನ್ನ ಬಳಸಿಕೊಂಡು ರಾಷ್ಟ್ರಪತಿ ಅಳ್ವಿಕೆ ಶಿಫಾರಸ್ಸು ಮಾಡಬಹುದು. ತುರ್ತು ಕೇಂದ್ರ ಸಚಿವ ಸಂಪುಟ ಸಭೆ ಕರೆದು ರಾಷ್ಟ್ರಪತಿ ಅಳ್ವಿಕೆಗೆ ತೀರ್ಮಾನಿಸಿ, ಅಂತಿಮವಾಗಿ ಅಲ್ಪಕಾಲ ರಾಷ್ಟ್ರಪತಿ ಅಳ್ವಿಕೆ ಹೇರುವ ಸಾಧ್ಯತೆಯಿದೆ.
6. ಒಂದು ವೇಳೆ ರಾಷ್ಟ್ರಪತಿ ಅಳ್ವಿಕೆ ಶಿಫಾರಸ್ಸು ಮಾಡಿದ್ರೆ, ರಾಜ್ಯ ಬಿಜೆಪಿಗೆ ವರವಾಗಬಹುದು. ಇದೇ ಅವಕಾಶವನ್ನು ಬಳಸಿಕೊಂಡು ಬಿಜೆಪಿಗೆ ರಾಜಭವನಕ್ಕೆ ತೆರಳಿ, ರಾಜ್ಯಪಾಲರ ಮುಂದೆ ಶಾಸಕರ ಪರೇಡ್ ನಡೆಸಿ ಬಹುಮತ ತೋರಿಸುವುದು. ಬಳಿಕ ಸರ್ಕಾರ ರಚನೆಗೆ ರಾಜ್ಯಪಾಲರಿಂದ ಅವಕಾಶ ಕೇಳುವುದು. ಬಿಜೆಪಿ ಮನವಿಯನ್ನ ರಾಜ್ಯಪಾಲರು ಪುರಸ್ಕರಿಸಿದ್ರೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಬಹುದು.