ಬಹು ನಿರೀಕ್ಷಿತ ಕಾಂತಾರ (Kantara) ಚಿತ್ರ ನಾಳೆ ಬಿಡುಗಡೆಯಾಗಲಿದೆ. ಬಿಡುಗಡೆಯಾಗುವ ಸಂದರ್ಭದಲ್ಲಿ ಕಾಂತಾರದ ನಂತರ ವಾಟ್ ನೆಕ್ಸ್ಟ್ ಎಂಬ ಪ್ರಶ್ನೆಗೆ ರಿಷಭ್ ಶೆಟ್ಟಿ (Rishab Shetty) ಮುಂದೆ ʼರೆಸ್ಟ್ʼ ಎಂದು ಉತ್ತರಿಸಿದ್ದಾರೆ.
ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಪ್ರಶ್ನೆಗೆ ಉತ್ತರ ಮುಂದೆ ವಿಶ್ರಾಂತಿ ಪಡೆಯುವುದು. ಚಿತ್ರಕ್ಕೆ ಬಹಳ ಶ್ರಮ ಹಾಕಿದ್ದೇವೆ. ನಮ್ಮ ತಂಡಕ್ಕೆ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಬಿಡುಗಡೆಯ ದಿನಾಂಕ ಪ್ರಕಟ ಮಾಡಿದ್ದರಿಂದ ಆ ದಿನದ ಒಳಗಡೆ ಮುಗಿಸಲೇಬೇಕಾದ ಒತ್ತಡವಿತ್ತು. ಹೀಗಾಗಿ ಮುಂದೆ ವಿಶ್ರಾಂತಿ ಪಡೆಯುವುದು ನನ್ನ ಮೊದಲ ಆದ್ಯತೆ ಎಂದರು. ಇದನ್ನೂ ಓದಿ: ನೋವಿನ ಸಂದರ್ಭದಲ್ಲಿ ಸಂಭ್ರಮ ಬೇಡವೆಂದು ಹಿಂದೆ ಸರಿದ ರಿಷಬ್ ಶೆಟ್ಟಿ
ಹಲವು ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರ ಸಿಗುತ್ತದೆ ಎಂದ ಅವರು, ಕಾಂತಾರ ಮೊದಲ ಚಿತ್ರವನ್ನು ಪ್ಯಾನ್ ಇಂಡಿಯಾಗೆ ತೆಗೆದುಕೊಂಡು ಹೋಗಿದ್ದು ಕನ್ನಡಿಗರು. ಈಗ ಚಾಪ್ಟರ್ 1 ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ನಮಗೆ ಬಹಳ ಸಂತೋಷ ನೀಡಿದೆ ಎಂದು ಹೇಳಿದರು.
ಪ್ಯಾನ್ ಇಂಡಿಯಾ ಸೇರಿದಂತೆ ವಿಶ್ವ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಹೊಂಬಾಳೆ ಸಂಸ್ಥೆ ಬಹಳ ಕೆಲಸ ಮಾಡಿದೆ. ಇದಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದರು.
ಎಲ್ಲರೂ ಎಲ್ಲಾ ಭಾಷೆಗಳಿಗೆ ಗೌರವ ಕೊಡುತ್ತಾರೆ. ನಮಗೆ ನಮ್ಮ ಭಾಷೆಯ ಹೆಮ್ಮೆಯಿದೆ. ಹಾಗೆಂದ ಮಾತ್ರಕ್ಕೆ ಬೇರೆ ಭಾಷೆಯನ್ನು ನಾವು ದೂರುವುದಿಲ್ಲ. ಕನ್ನಡಕ್ಕೆ ನಾವು ಹೇಗೆ ಗೌರವ ನೀಡುತ್ತಿವೆಯೋ ಅದೇ ರೀತಿ ಬೇರೆ ಭಾಷೆಗಳಿಗೆ ಗೌರವ ನೀಡುತ್ತೇವೆ ಎಂದು ತಿಳಿಸಿದರು.