ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

Public TV
1 Min Read
shantingara public tv 1

ಬೆಂಗಳೂರು: ರೌಡಿ ನಲಪಾಡ್‍ನ ಮತ್ತಷ್ಟು ಕರ್ಮಕಾಂಡ ಬಯಲಾಗುತ್ತಿದ್ದು, ಶಾಂತಿನಗರದಲ್ಲಿ ರೌಡಿ ಮಹಮ್ಮದ್ ನಲಪಾಡ್ ಹೇಳಿದ್ದೇ ಶಾಸನ ಎನ್ನುವ ಮಾತು ಈಗ ಕೇಳಿಬಂದಿದೆ.

ಈತನ ಮಾತು ಕೇಳಲಿಲ್ಲ ಬಿಸಿನೆಸ್ ನಡೆಸೋದೇ ಕಷ್ಟ ಹೊಸ ಪಬ್, ರೆಸ್ಟೋರೆಂಟ್ ಓಪನ್ ಆಗಬೇಕಾದರೆ ಈತನ ಅನುಮತಿ ಬೇಕು ಎನ್ನುವ ನಿಯಮವನ್ನು ಹೇರಿದ್ದ. ಒಂದು ವೇಳೆ ಯಾರಾದರೂ ಬಾರ್ ಓಪನ್ ಮಾಡಿದ್ದರೆ, ನನಗೆ ಗೊತ್ತಿಲ್ಲದೇ, ನನ್ನ ಅನುಮತಿ ಇಲ್ಲದೆ ಅದು ಹೇಗೆ ರೆಸ್ಟೋರೆಂಟ್ ಓಪನ್ ಮಾಡ್ತೀರಿ ಎಂದು ಧಮ್ಕಿ ಹೊಡೆಯುತ್ತಿದ್ದ ಎಂದು ಜನರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

nalapad police

ಜನರು ಪ್ರತಿಕ್ರಿಯಿಸಿ ಸಿನಿಮಾದಲ್ಲಿ ನಟರು ಬರುವಾಗ ಹೇಗೆ ಮೂರು ನಾಲ್ಕು ಕಾರುಗಳು ಬರುತ್ತದೋ ಅದೇ ರೀತಿಯಾಗಿ ಬರುತ್ತಿದ್ದ. ಲೈವ್ ಬ್ಯಾಂಡ್ ಮಂದಿಯನ್ನು ಬೆದರಿಸಿ ಹಫ್ತಾ ವಸೂಲಿ ಮಾಡುತ್ತಾನೆ. ಶಾಂತಿನಗರ, ಆಸ್ಟಿನ್ ಟೌನ್, ಬ್ರಿಗೇಡ್ ರೋಡ್, ಅಶೋಕ ನಗರ, ವಿವೇಕ್ ನಗರ, ಆನೆ ಪಾಳ್ಯ ಸುತ್ತಮುತ್ತ ನಲಪಾಡ್ ಗ್ಯಾಂಗ್ ಕಾರುಬಾರು. ಅಪ್ಪ ಹ್ಯಾರೀಸ್ ಹೆಸರಲ್ಲಿ ಮಗ ನಲಪಾಡ್ ಅಂಧಾ ದರ್ಬಾರ್ ನಡೆಸುತ್ತಿದ್ದ ಎಂದು ಹೇಳಿದ್ದಾರೆ.

HARRIS NALAPADಇಲ್ಲಿಯ ಪಾಲಿಕೆ ಸದಸ್ಯರು ಹೆಸರಿಗೆ ಮಾತ್ರ. ಪಾಲಿಕೆ ಸದಸ್ಯರು ಯಾವುದಾದರೂ ಕಟೌಟ್ ಹಾಕಿದ್ದರೂ ಈತನ ಫೋಟೋ ಇರಲೇಬೇಕು. ಎಲ್ಲರಿಗಿಂತಲೂ ಎತ್ತರದಲ್ಲಿ ದೊಡ್ಡದಾಗಿ ಫೋಟೋ ಕಾಣಬೇಕು ಎಂದು ತಾಕೀತು ಮಾಡುತ್ತಿದ್ದ ಎಂದು ಜನರು ಈತನ ಕೃತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೇ ನಗರದಲ್ಲಿನ ಬ್ರಿಗೇಡ್ ರೋಡ್ ಜಂಕ್ಷನ್, ಎಂಜಿ ರೋಡ್, ರೆಸಿಡೆನ್ಸಿ, ಬ್ರಿಗೇಡ್, ಯುಬಿ ಸಿಟಿಗೆ ಇವನೇ ಪ್ರಿನ್ಸ್ ಆಗಿದ್ದ ಎಂಬ ಆರೋಪ ಸಹ ಕೇಳಿಬಂದಿದೆ.

ನಲಪಾಡ್ ಗ್ಯಾಂಗ್‍ನ ಆಟಾಟೋಪದಿಂದ ಅಲೆಗ್ಸಾಂಡರ್ ರಸ್ತೆಯಲ್ಲಿ ಅಪಾರ್ಟ್‍ಮೆಂಟ್ ಜನರ ಗೋಳು ಕೇಳುವವರು ಇಲ್ಲದಂತಾಗಿದೆ. ಪಕ್ಕದ ಫ್ಲ್ಯಾಟ್ ನವರು ಎಷ್ಟು ಸಾರಿ ಈ ಕುರಿತು ದೂರು ನೀಡಿದರೂ ಶಾಸಕ ಹ್ಯಾರಿಸ್ ಒತ್ತಡಕ್ಕೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂದು ಜನ ಹೇಳಿದ್ದಾರೆ.

https://www.youtube.com/watch?v=Tc3R6gdWwHA

https://www.youtube.com/watch?v=IHwUP3mtZXQ

https://www.youtube.com/watch?v=IBc7ChOEbxg

NALAPAD 2

 

NALAPAD 1

NALAPAD 11

Share This Article
Leave a Comment

Leave a Reply

Your email address will not be published. Required fields are marked *