ಮುಂಬೈ: 2019ರ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಈ ಬಾರಿ ಉತ್ತಮ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. ಇದೇ ವೇಳೆ ತಂಡದಲ್ಲಿ ಸ್ಥಾನ ಪಡೆದಿರುವ ಕೆಎಲ್ ರಾಹುಲ್ ಹಾಗೂ ದಿನೇಶ್ ಕಾರ್ತಿಕ್ ಆಯ್ಕೆ ಹಿಂದಿನ ಬಗ್ಗೆ ಬಿಸಿಸಿಐ ಆಯ್ಕೆ ಸಮತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿ ಮಾಧ್ಯಮ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಅವರು, ತಂಡದಲ್ಲಿ ನಂ.4 ಆಟಗಾರರ ಆಯ್ಕೆಗೆ ಹೆಚ್ಚಿನ ಚರ್ಚೆ ನಡೆಸಲಾಯಿತು. ಅಲ್ಲದೇ ಶಿಖರ್ ಧವನ್ ಒಬ್ಬರನ್ನೇ ಆರಂಭಿಕರಾಗಿ ಇರುವುದು ಅಂಶವನ್ನು ಕೂಡ ಚರ್ಚೆಯಲ್ಲಿ ಪ್ರಸ್ತಾಪಿಸಲಾಯಿತು. ಈ ಎರಡು ಸ್ಥಾನದಲ್ಲಿ ಆಡಬಲ್ಲ ವಿಶ್ವಾಸರ್ಹ ಆಟಗಾರ ಕೆಎಲ್ ರಾಹುಲ್ ಅವರಿಗೆ ಅವಕಾಶ ನೀಡಲಾಗಿದೆ. ರಾಹುಲ್ ನಮಗೆ ಆರಂಭಿಕರಾಗಿ ಹೆಚ್ಚಿನ ಆಯ್ಕೆಯಲ್ಲಿ ಇರುತ್ತಾರೆ. ಅಲ್ಲದೇ ನಂ.4 ಸ್ಥಾನದಲ್ಲಿ ಆಡುವುದರ ಬಗ್ಗೆ ತಂಡ ಮ್ಯಾನೇಜ್ ಮೆಂಟ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.
Advertisement
Advertisement
2017ರ ಚಾಂಪಿಯನ್ಸ್ ಟ್ರೋಫಿ ಬಳಿಕ ಹೆಚ್ಚಿನ ಆಟಗಾರರನ್ನು ಪರೀಕ್ಷೆ ಒಳಪಡಿಸಲು ಅವಕಾಶಗಳನ್ನು ನೀಡಲಾಗಿತ್ತು. ಇದರಲ್ಲಿ ದಿನೇಶ್ ಕಾರ್ತಿಕ್, ಶ್ರೇಯಸ್, ಮನೀಸ್ ಪಾಂಡೆ, ವಿಜಯ್ ಶಂಕರ್, ಅಂಬಟಿ ರಾಯುಡು ಕೂಡ ಅವಕಾಶ ಪಡೆದಿದ್ದರು. ಆದರೆ ಅಂತಿಮವಾಗಿ ವಿಜಯ್ ಶಂಕರ್‍ಗೆ ಸ್ಥಾನ ನೀಡಲಾಗಿದ್ದು, ಬ್ಯಾಟಿಂಗ್ ಹಾಗೂ ಅನಿವಾರ್ಯ ಸಂದರ್ಭದಲ್ಲಿ ಶಂಕರ್ ಬೌಲಿಂಗ್ ಸಹ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಅಲ್ಲದೇ ಅವರು ಉತ್ತಮ ಫೀಲ್ಡರ್ ಕೂಡ ಆಗಿದ್ದಾರೆ ಎಂದು ತಿಳಿಸಿದರು.
Advertisement
ಇದೇ ವೇಳೆ ಪಂತ್ ನಮಗೇ ಉತ್ತಮ ಆಯ್ಕೆ ಆಗಿದ್ದರು ಸಹ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಗಿದೆ. ಏಕೆಂದರೆ ವಿಶ್ವಕಪ್ ಟೂರ್ನಿಯಲ್ಲಿ ಪ್ರತಿಯೊಂದು ಪಂದ್ಯವೂ ಪ್ರಮುಖವಾಗಿದ್ದು, ಧೋನಿ ಅನುಪಸ್ಥಿತಿಯಲ್ಲಿ ಆಡುವ ಉತ್ತಮ ವಿಕೆಟ್ ಕೀಪರ್ ರನ್ನ ಆಯ್ಕೆ ಮಾಡಲಾಗಿದೆ. ಅನಿವಾರ್ಯವಾಗಿ ಪಂತ್ ಅವರನ್ನು ಕೈ ಬಿಡಲಾಗಿದೆ ಎಂದರು. ಉಳಿದಂತೆ ಎಲ್ಲಾ ಆಟಗಾರರನ್ನು ಅವರ ಸಾಮಥ್ರ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.