ನವದೆಹಲಿ: ದೇಶದಲ್ಲಿ ಈಗ ಶಿಕ್ಷಣ ತುಂಬಾ ದುಬಾರಿಯಾಗಿದೆ. ಬೆಳೆಯುತ್ತಿರುವ ತಾಂತ್ರಿಕತೆಗೆ ತಕ್ಕಂತೆ ವೇಗವಾಗಿ ಮುನ್ನುಗ್ಗಬೇಕೆಂಬ ಉತ್ಸಾಹದಿಂದ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣವನ್ನೇ ಕೊಡಿಸಲು ಪೋಷಕರು ಬಯಸುತ್ತಿದ್ದಾರೆ. ಹಾಗಾಗಿಯೇ ಖಾಸಗಿ ಶಾಲೆಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಶಿಕ್ಷಣವೂ ದುಬಾರಿಯಾಗಿದೆ. ಇತ್ತೀಚಿನ ಅಧ್ಯಯನ ವರದಿಗಳೂ ತಮ್ಮ ಸಂಶೋಧನೆಯ ಮೂಲಕ ಅದನ್ನು ಸಾಬೀತು ಮಾಡಿವೆ. ಆರ್ಥಿಕ ತೊಂದರೆಗಳು ಎದುರಾಗುತ್ತಿದ್ದರೂ ಶಾಲಾ-ಕಾಲೇಜುಗಳು ಮಾತ್ರ ಕಡಿಮೆಯಾಗುತ್ತಿಲ್ಲ ಎಂಬುದನ್ನು ತಜ್ಞರೂ ಒಪ್ಪಿಕೊಂಡಿದ್ದಾರೆ.
Advertisement
ಆನ್‌ಲೈನ್ ಸಂಶೋಧನೆಯ ಪ್ರಕಾರ ಭಾರತದಲ್ಲಿ ಒಂದು ಮಗು 3 ವರ್ಷದಿಂದ 17 ವರ್ಷದ ವರೆಗೆ ಶಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯಲು ಕನಿಷ್ಠ 30 ಲಕ್ಷ ರೂ. ವೆಚ್ಚ ಮಾಡಬೇಕಿದೆ ಎಂದು ಹೇಳಿದೆ. ಇದನ್ನೂಓದಿ: ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸ್ಕೆಚ್ ಹಾಕಿದ್ದ ISIS ಭಯೋತ್ಪಾದಕ ರಷ್ಯಾದಲ್ಲಿ ಅರೆಸ್ಟ್
Advertisement
10 ವರ್ಷದ ಹಳೆಯ ಸೂತ್ರದ ಪ್ರಕಾರವೇ ಸಂಶೋಧನೆ ಮಾಡಲಾಗಿದ್ದು, ಅಂಕಿ-ಅಂಶ ನಿಖರ ಎಂದು ಹೇಳಲಾಗುವುದಿಲ್ಲ. ಇದಕ್ಕಿಂತಲೂ ಹೆಚ್ಚಿನ ವೆಚ್ಚವೂ ಆಗಬಹಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Advertisement
2012 ರಿಂದ 2020ರ ನಡುವೆ ಭಾರತದಲ್ಲಿ ಶೈಕ್ಷಣಿಕ ವೆಚ್ಚವು ಶೇ.10 ರಿಂದ 12 ಪ್ರತಿಶತದಷ್ಟು ಹೆಚ್ಚಾಗಿದೆ. ಇದರಲ್ಲಿ ಕೇವಲ ಬೋಧನಾ ಶುಲ್ಕ ಮಾತ್ರವಲ್ಲದೇ ಮಕ್ಕಳಿಗೆ ಖರ್ಚಾಗುವ ಸಾರಿಗೆ ಹಾಗೂ ಪರೀಕ್ಷೆಗಳ ವೆಚ್ಚವೂ ಒಟ್ಟಾರೆ ಖರ್ಚಿನ ಮೇಲೆ ಅವಲಂಬಿತವಾಗಿರುತ್ತದೆ. ವಾರ್ಷಿಕವಾಗಿ ಒಂದು ಬಾರಿ ವ್ಯಯಿಸುವ ವೆಚ್ಚವಾಗಿದೆ ಎಂದು ಹೇಳಲಾಗಿದೆ. ಇದನ್ನೂಓದಿ: ಸಂಗೀತ ಕಾರ್ಯಕ್ರಮದಲ್ಲಿ ಬಿಯರ್ ಬಾಟಲಿ, ಕಲ್ಲು ತೂರಿ ಪೊಲೀಸರ ಮೇಲೆ ಹಲ್ಲೆ
Advertisement
ಯಾವ ಮಾದರಿ ಶಿಕ್ಷಣಕ್ಕೆ ಎಷ್ಟು ಹಣ?
- ಪ್ರಥಮ ದರ್ಜೆಯ ನಗರದ ಹೆಚ್ಚಿನ ಶಾಲೆಗಳಲ್ಲಿ 25 ಸಾವಿರದಿಂದ 75 ಸಾವಿರ ರೂ. ವರೆಗೆ ಪ್ರವೇಶ ಶುಲ್ಕ ಹೊಂದಿರುತ್ತವೆ. ಒಂದು ವೇಳೆ ಏಕ ಕಾಲದಲ್ಲಿ ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸುವುದಾದರೆ 10 ರಿಂದ 20 ಸಾವಿರ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ.
- ಪ್ರಥಮ ಹಾಗೂ ದ್ವಿತೀಯ ದರ್ಜೆ ನಗರದ ಕೆಲವು ಶಾಲೆಗಳಲ್ಲಿ ಶಿಶುವಿಹಾರವನ್ನೂ ಪ್ರೀಸ್ಕೂಲ್ ನಲ್ಲಿ ಸೇರಿಸಲಾಗಿದೆ. ಅದಕ್ಕಾಗಿ ಅವುಗಳಿಗೆ 60 ಸಾವಿರದಿಂದ 1.5 ಲಕ್ಷದ ವರೆಗೆ ಪ್ರವೇಶ ಶುಲ್ಕ ಇರುತ್ತದೆ. ಪೋಷಕರಿಬ್ಬರೂ ಕೆಲಸದಲ್ಲಿ ಇದ್ದರೆ ಅಂಥವರಿಗಾಗಿ ಡೇ ಕೇರ್ ಸೌಲಭ್ಯಗಳೂ ಇವೆ. ಕೆಲವು ಮಹಾನಗರಗಳಲ್ಲಿ ವೃತ್ತಿಪರ ಡೇ-ಕೇರ್ ಸೌಲಭ್ಯ ಕೇಂದ್ರಗಳು ದಿನಕ್ಕೆ 5,000 ರಿಂದ 8,500 ವರೆಗೂ ಶುಲ್ಕ ಪಡೆಯುತ್ತವೆ.
- ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ 1.25 ಲಕ್ಷದಿಂದ 1.75 ಲಕ್ಷ ರೂ.ವರೆಗೆ ಇದೆ. ಪೋಷಕರು ತಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕಾಗಿಯೇ 5.50 ಲಕ್ಷ ಬಜೆಟ್ ವ್ಯಯಿಸಬೇಕಿದೆ.
- ಮಧ್ಯಮ ಶಾಲೆಗಳಲ್ಲಿ ಸರಾಸರಿ ಬೋಧನಾ ಶುಲ್ಕ 1.6 ಲಕ್ಷ ರೂ.ನಿಂದ 1.8 ರೂ. ನಡುವೆ ಇರುತ್ತದೆ. ಇದರಿಂದ ಮಧ್ಯಮ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿಯೇ 9.5 ಲಕ್ಷ ರೂ ವಿನಿಯೋಗಿಸಬೇಕಾಗುತ್ತದೆ.
- 11ನೇ ತರಗತಿಯಿಂದ, ಅನೇಕ ಶಾಲೆಗಳು ಪೋಷಕರು ಪ್ರತ್ಯೇಕ ಮಾಸಿಕ 4,000 ದಿಂದ 7 ಸಾವಿರದವರೆಗೆ ಪುಸ್ತಕಕ್ಕಾಗಿ ಪಾವತಿ ಮಾಡಬೇಕಿರುತ್ತದೆ. ಒಟ್ಟಾರೆ ಪ್ರೌಢಶಾಲಾ ಶಿಕ್ಷಣಕ್ಕಾಗಿ ಅಂದಾಜು 9 ಲಕ್ಷ ರೂ. ಮೀಸಲಿಸಬೇಕು.
- ಇದನ್ನು ಹೊರತುಪಡಿಸಿ ಜೆಇಇ ಮತ್ತು ಇತರ ಪರೀಕ್ಷೆಗಳಂತಹ ಪ್ರವೇಶ ಪರೀಕ್ಷೆಗಳಿಗೆ ಕೇವಲ ಕೋಚಿಂಗ್ ವೆಚ್ಚವೇ 30 ಸಾವಿರದಿಂದ 5 ಲಕ್ಷದವರೆಗೆ ಹಣ ವ್ಯಯಿಸಬೇಕಾಗುತ್ತದೆ ಎಂದು ಸಂಶೋಧನಾ ವರದಿ ಹೇಳಿದೆ.