ಯಾಸಿನ್ ಮಲಿಕ್ ಕರಾಳ ಇತಿಹಾಸ ಏನು? ಏನೇನು ಅಪರಾಧ ಎಸಗಿದ್ದ?

Public TV
2 Min Read
milik

ನವದೆಹಲಿ: ಕಳೆದೊಂದು ವಾರದಿಂದ ಯಾಸಿನ್ ಮಲಿಕ್ ಹೆಸರು ಭಾರೀ ಚರ್ಚೆಯಲ್ಲಿದೆ. ಪ್ರತ್ಯೇಕ ಕಾಶ್ಮೀರ ಹೋರಾಟಗಾರನಾಗಿದ್ದ ಈತನಿಗೆ ಎನ್‍ಐಎ ವಿಶೇಷ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, ಹತ್ತು ಲಕ್ಷ ರೂ. ದಂಡ ವಿಧಿಸಿದೆ. ಒಂದು ಸಮಯದಲ್ಲಿ ಇಡೀ ಕಾಶ್ಮೀರವನ್ನೇ ನಡುಗಿಸಿದ ಇಂಡಿಯಾದ ಈ ಮೊಸ್ಟ್ ವಾಟೆಂಡ್ ಕ್ರಿಮಿನಲ್ ಅರೆಸ್ಟ್ ಆಗಿದ್ದ. ಈತನ ಇತಿಹಾಸವೇ ಒಂದು ರೋಚಕ ವಿಚಾರ ಅಷ್ಟಕ್ಕೂ ಯಾರು ಈ ಯಾಸಿನ್ ಮಲೀಕ್, ಏನು ಈತನ ಕರಾಳ ಇತಿಹಾಸ? ಜೀವಾವಧಿ ಶಿಕ್ಷೆ ವಿಧಿಸಲು ಕಾರಣಗಳೇನು ಎನ್ನುವ ಪೂರ್ತಿ ವಿವರ ಇಲ್ಲಿದೆ.

ಯಾಸಿನ್ ಮಲಿಕ್ ಮೇಲೆ ಎನ್‍ಐಎ ಪೊಲೀಸರು ಹಲವು ಆರೋಪಗಳನ್ನು ಹೊರಿಸಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದರು. ಒಂದು ಸಮಯದಲ್ಲಿ ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದ ಈ ನಾಯಕ ಎನ್‍ಐಎ ಮುಂದೆ ತನ್ನೇಲ್ಲ ತಪ್ಪುಗಳನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಇದನ್ನೂ ಓದಿ: ದಾವೋಸ್ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ತೆರೆ: ಐತಿಹಾಸಿಕ 52 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ರಾಜ್ಯದ ಜೊತೆ ಒಪ್ಪಂದ 

Yasin Malik 2

ಅಪರಾಧಗಳೇನು?
ಯಾಸಿನ್ ಮಲಿಕ್, ಒಬ್ಬ ಸಾಮಾನ್ಯ ಅಪರಾಧಿಯಲ್ಲ. ಈತ ಭಾರತದ ಭಯೋತ್ಪಾದಕರ ಪಟ್ಟಿಯಲ್ಲಿದ್ದ ಮೋಸ್ಟ್ ವಾಟೆಂಡ್ ಕ್ರಿಮಿನಲ್. ಮಾಜಿ ಉಗ್ರಗಾಮಿಯಾಗಿದ್ದ ಈಗ, ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕನಾಗಿದ್ದಾನೆ. ಇವನು ಭಾರತ ಮತ್ತು ಪಾಕಿಸ್ತಾನದಿಂದ ಕಾಶ್ಮೀರವನ್ನು ಪ್ರತ್ಯೇಕಿಸಬೇಕೆಂದು ಹೋರಾಟ ನಡೆಸಿದ್ದ. ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್‍ನ ಅಧ್ಯಕ್ಷನಾಗಿದ್ದ ಮಲಿಕ್, ಕಾಶ್ಮೀರ ಕಣಿವೆಯಲ್ಲಿ ಸಶಸ್ತ್ರ ಉಗ್ರಗಾಮಿತ್ವವನ್ನು ಮುನ್ನಡೆಸ್ತಿದ್ದ.

Yasin Malik

ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಈತನನ್ನು ಬಂಧಿಸಿದ್ದ ಎನ್‍ಐಎ ಪೊಲೀಸರು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ(ಯುಎಪಿಎ) ಸೆಕ್ಷನ್ 16(ಭಯೋತ್ಪಾದನೆ), 17(ಭಯೋತ್ಪಾದನೆಗೆ ದೇಣಿಗೆ ಸಂಗ್ರಹ), 18(ಭಯೋತ್ಪಾದಕ ಕೃತ್ಯಕ್ಕೆ ಸಂಚು) ಹಾಗೂ 20(ಭಯೋತ್ಪಾದಕ ಸಂಘಟನೆ ಸದಸ್ಯ) ಸೆಕ್ಷನ್ 120-ಬಿ(ಅಪರಾಧ ಸಂಚು) ಮತ್ತು ಭಾರತೀಯ ದಂಡಸಂಹಿತೆಯ 124-ಎ(ದೇಶದ್ರೋಹ) ಪ್ರಕರಣಗಳನ್ನು ದಾಖಲಿಸಿದ್ದರು.

ಇತಿಹಾಸವೇನು?
ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್, ದುಖ್ತರನ್-ಎ-ಮಿಲ್ಲತ್ ಮತ್ತು ಇತರ ಸದಸ್ಯರಿಗೆ ಈತ ಸಹಾಯ ಮಾಡುತ್ತಿದ್ದ. ಭಯೋತ್ಪಾದಕ ಚಟುವಟಿಕೆಗಳಿಗೆ ಅಕ್ರಮ ಮಾರ್ಗಗಳ ಮೂಲಕ ದೇಶ ಮತ್ತು ವಿದೇಶದಿಂದ ಹಣವನ್ನು ಸಂಗ್ರಹಿಸುತ್ತಿದ್ದ. ಕಲ್ಲು ತೂರಾಟ, ಸೇನಾ ಸಿಬ್ಬಂದಿಗಳ ಮೇಲೆ ದಾಳಿ ಮತ್ತು ಸಾರ್ವಜನಿಕ ಆಸ್ತಿ ನಾಶ ಮಾಡುವ ಪ್ರಕಣಗಳ ಹಿಂದಿನ ರೂವಾರಿಯೂ ಆಗಿದ್ದ.

Yasin Malik: 10 facts to know about the JKLF chief

ಹುರಿಯತ್ ನಾಯಕರ ಜೊತೆ ಸೇರಿ ‘ಜಾಯಿಂಟ್ ರೆಸಿಸ್ಟೆನ್ಸ್ ಲೀಡರ್‍ಶಿಪ್’ ಎಂಬ ಗುಂಪನ್ನು ರಚಿಸಿದ್ದ. ಇದರ ಅಡಿಯಲ್ಲಿ ಕಾಶ್ಮೀರದಲ್ಲಿ ಪ್ರತಿಭಟನೆಗಳು, ಮುಷ್ಕರಗಳು, ಸ್ಥಗಿತಗಳು, ರಸ್ತೆ ತಡೆಗಳು ಮತ್ತು ಕಣಿವೆಯಲ್ಲಿ ಶಾಂತಿಗೆ ಭಂಗ ತರುವ ಇತರ ಚಟುವಟಿಕೆಗಳನ್ನು ನಡೆಸಲು ಜನರಿಗೆ ನಿರ್ದೇಶನಗಳನ್ನು ನೀಡುತ್ತಿದ್ದ. 1990ರಲ್ಲಿ ಐಎಎಫ್ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣ ಮತ್ತು 1989 ರಲ್ಲಿ ಆಗಿನ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣಕ್ಕೆ ಸಂಬಂಧಿಸಿದಂತೆ ಸಿಬಿಐನಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ ಮಲಿಕ್ ಸಹ ಆರೋಪಿಯಾಗಿದ್ದಾನೆ. ಇದನ್ನೂ ಓದಿ:  ಗೃಹಿಣಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಿಯಕರ ಅರೆಸ್ಟ್ 

ಹೀಗೆ ಸಾಲು ಸಾಲು ಕುಕೃತ್ಯಗಳನ್ನು ನಡೆಸಿದ್ದ ಈತನನ್ನು 2017ರಲ್ಲಿ ಬಂಧಿಸಿ ತನಿಖೆ ನಡೆಸಲಾಗಿತ್ತು. ಬಳಿಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಈ ಎಲ್ಲ ಆರೋಪಗಳಿಗೂ ಪ್ರತಿರೋಧ ಒಡ್ಡದೇ ಆರೋಪಗಳನ್ನು ಒಪ್ಪಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *