ಕೊಹ್ಲಿ ಬೆನ್ನಿಗೆ ನಿಂತ ಸುಬ್ರಮಣಿಯನ್ ಸ್ವಾಮಿ

Public TV
1 Min Read
Subramanian Swamy kohli

ನವದೆಹಲಿ: ಅಭಿಮಾನಿಯೊಬ್ಬರಿಗೆ ದೇಶಬಿಟ್ಟು ಹೋಗುವಂತೆ ಹೇಳಿ ವಿವಾದಕ್ಕೆ ಕಾರಣವಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೆಂಬಲಕ್ಕೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆಗಮಿಸಿದ್ದು, ಕೊಹ್ಲಿ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಕೊಹ್ಲಿ ಹೇಳಿಕೆಯಲ್ಲಿ ತಪ್ಪೇನಿದೆ? ಭಾರತೀಯ ಕ್ರಿಕೆಟಿಗರಿಗಿಂತ ವಿದೇಶಿ ಆಟಗಾರರ ಆಟವನ್ನು ಮೆಚ್ಚಿಕೊಂಡಿರುವ ವ್ಯಕ್ತಿಗೆ ಕೊಹ್ಲಿ ಹೇಳಿದ್ದು, ಇಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ಆದರೆ ಮಾಧ್ಯಮಗಳು ಕೊಹ್ಲಿ ಅವರ ಬಗ್ಗೆ ಹೇಳುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕೊಹ್ಲಿ ಅಭಿಮಾನಿಗಳಿಗಾಗಿ ತಮ್ಮ ಆ್ಯಪ್ ಬಿಡುಗಡೆ ಮಾಡಿದ್ದರು. ಈ ಆ್ಯಪ್‍ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಕೊಹ್ಲಿ ಗರಂ ಆಗಿ ಉತ್ತರಿಸಿದ್ದರು. ಆ್ಯಪ್‍ನಲ್ಲಿ ಕೊಹ್ಲಿಗೆ ಪ್ರಶ್ನೆ ಮಾಡಿದ್ದ ಅಭಿಮಾನಿ, ನಾನು ಭಾರತದ ಬ್ಯಾಟ್ಸ್ ಮನ್‍ಗಳ ಆಟಕ್ಕಿಂತಲೂ ಇಂಗ್ಲೆಂಡ್, ಆಸ್ಟ್ರೇಲಿಯಾ ಆಟಗಾರರ ಬ್ಯಾಟಿಂಗ್ ಹೆಚ್ಚು ಇಷ್ಟಪಡುತ್ತೇನೆ. ಟೀಂ ಇಂಡಿಯಾ ಬ್ಯಾಟ್ಸ್ ಮನ್‍ಗಳಿಗೆ ಅಂತಹ ವಿಶೇಷ ಸಾಮರ್ಥ್ಯ ಏನು ಇಲ್ಲ ಎಂದು ಹೇಳಿದ್ದರು.

ಅಭಿಮಾನಿಯ ಈ ಮಾತುಗಳಿಗೆ ಗರಂ ಆಗಿ ಉತ್ತರ ನೀಡಿದ ಕೊಹ್ಲಿ, ನೀವು ಭಾರತದಲ್ಲಿ ಇರಲು ಯೋಗ್ಯರಲ್ಲ ಎಂದು ನನಗೆ ಅನ್ನಿಸುತ್ತಿದೆ. ಅದ್ದರಿಂದ ನೀವು ಬೇರೆಡೆ ತೆರಳಿ. ನಮ್ಮ ದೇಶವನ್ನು ಪ್ರೀತಿ ಮಾಡದ ನೀವು ಮತ್ತೆ ಏಕೆ ದೇಶದಲ್ಲಿ ವಾಸಿಸುತ್ತಿದ್ದೀರಿ? ನೀವು ನನ್ನನ್ನು ಇಷ್ಟ ಪಟ್ಟಿಲ್ಲ ಎಂದು ಬೇಸರವಿಲ್ಲ. ಆದರೆ ನಿಮ್ಮ ಆದ್ಯತೆಗಳನ್ನು ಸರಿಯಾಗಿ ತಿಳಿದುಕೊಳ್ಳಿ ಎಂದು ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://twitter.com/imtheguy007/status/1059887977403314176?

Share This Article
Leave a Comment

Leave a Reply

Your email address will not be published. Required fields are marked *