ಭಾರತ ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿಯಾಗುತ್ತಿದ್ದು, ಎಲ್ಲಾ ವಲಯಗಳಲ್ಲೂ ಪ್ರಗತಿ ಸಾಧಿಸುತ್ತಿದೆ. ಅದರಲ್ಲೂ ರೈಲ್ವೆ ವಿಭಾಗದಲ್ಲಿ ಹೈಸ್ಪೀಡ್ ರೈಲುಗಳಿಗೆ ಪ್ರಾಮುಖ್ಯತೆ ನೀಡಿದೆ. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು. ಬಜೆಟ್‌ನಲ್ಲಿ ಸಾರಿಗೆಗೆ ಮಹತ್ವದ ಘೋಷಣೆಗಳನ್ನು ಹೊರಡಿಸುತ್ತಿದ್ದ ವೇಳೆ ಸರಿಸುಮಾರು 40,000 ರೈಲು ಬೋಗಿಗಳನ್ನು (Railways Coaches) ವಂದೇ ಭಾರತ್ (Vande Bharat Express) ಮೇಲ್ದರ್ಜೆಗೇರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದಲ್ಲದೇ ಮೆಟ್ರೋ ರೈಲನ್ನು ಇತರ ನಗರಗಳಿಗೂ ವಿಸ್ತರಿಸಲಿದೆ ಎಂದು ಘೋಷಿಸಿದ್ದರು.
ಈಗಾಗಲೇ ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು ಸಂಚಾರ ಮಾಡುತ್ತಿದೆ. ವಂದೇ ಭಾರತ್‌ಗೆ ಹೆಚ್ಚಿನ ಮಹತ್ವ ಸಿಗುತ್ತಿರುವ ಹಿನ್ನೆಲೆಯಲ್ಲಿ ಇವುಗಳ ವಿಸ್ತರಣೆಗೆ ಕ್ರಮ ಕೈಗೊಂಡಿದೆ. ಇಷ್ಟಕ್ಕೂ ಸಾಮಾನ್ಯ ಬೋಗಿಗಳನ್ನು ವಂದೇ ಭಾರತ್ ದರ್ಜೆಗೇರಿಸಲು ಇರುವ ಮಾನದಂಡಗಳು ಏನು? ಏನೆಲ್ಲಾ ವಿಶೇಷತೆಗಳು ಇರಲಿವೆ ಎಂಬುದನ್ನಿಲ್ಲಿ ಕಾಣಬಹುದು.
Advertisement
Advertisement
ಕರ್ನಾಟಕದ (Karnataka) ಹಾಗೂ ದಕ್ಷಿಣ ಭಾರತದ ಭಾಗದಲ್ಲಿ ಚಲಿಸುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಅವರು 2022ರ ನವೆಂಬರ್ 11 ರಂದು ಚಾಲನೆ ನೀಡಿದ್ದರು. ಮೊದಲ ರೈಲು ಮೈಸೂರಿನಿಂದ ಚೆನ್ನೈಗೆ ಮತ್ತು ಚೆನ್ನೈನಿಂದ ಮೈಸೂರಿಗೆ ಸಂಚಾರ ಅರಂಭಿಸಿತು. ಇದೀಗ ಮೈಸೂರು-ಚೆನ್ನೈ ಮಾತ್ರವಲ್ಲದೇ ಬೆಂಗಳೂರು-ಧಾರವಾಡ, ಯಶವಂತಪುರ-ಕಾಚಿಗುಡ, ಬೆಂಗಳೂರು-ಕೊಯಮತ್ತೂರು ಮತ್ತು ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸುತ್ತಿವೆ. ಅಷ್ಟೇ ಅಲ್ಲದೇ ‘ತಿರುವನಂತಪುರಂ-ಕಾಸರಗೋಡು’ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಮಂಗಳೂರಿಗೂ ವಿಸ್ತರಣೆ ಮಾಡಿದೆ. ಪ್ರಸಕ್ತ ವರ್ಷದಿಂದಲೇ ಸ್ಲೀಪರ್ ಕೋಚ್ ರೈಲು ವ್ಯವಸ್ಥೆಯನ್ನು ಮಾರ್ಚ್ ತಿಂಗಳ ವೇಳೆಗೆ ಆರಂಭಿಸಲು ಇಲಾಖೆ ಸಕಲ ತಯಾರಿ ಮಾಡಿಕೊಂಡಿದೆ.
Advertisement
Advertisement
ಪ್ರಸ್ತುತ ವಂದೇ ಭಾರತ್ ಒಳಗೊಂಡಿರುವ ಸೌಲಭ್ಯಗಳೇನು?
ವಂದೇ ಭಾರತ್ ಎಕ್ಸ್‌ಪ್ರೆಸ್, ಭಾರತದ ಮೊದಲ ಅರೆ ವೇಗದ ರೈಲು. ಇದು ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ. ಪ್ರಯಾಣದ ಸಮಯವನ್ನು ಶೇ.25ರಿಂದ 45 ರಷ್ಟು ಕಡಿಮೆ ಮಾಡುತ್ತದೆ. ರೈಲು 0-100 ಕಿಮೀ ವೇಗವನ್ನು 52 ಸೆಕೆಂಡುಗಳಲ್ಲಿ ತಲುಪುತ್ತದೆ. ಎಲ್ಲಾ ವಂದೇ ಭಾರತ್ ಕೋಚ್‌ಗಳು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿವೆ. ಜಿಪಿಎಸ್ ಆಧಾರಿತ ಆಡಿಯೋ-ದೃಶ್ಯ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್-ಬೋರ್ಡ್ ಹಾಟ್‌ಸ್ಪಾಟ್ ವೈಫೈ ಮತ್ತು ಅತ್ಯಂತ ಆರಾಮದಾಯಕ ಹಾಸನ ಈ ರೈಲಿನ ವಿಶೇಷತೆ. ಕಾರ್ಯನಿರ್ವಾಹಕ ವರ್ಗವು ತಿರುಗುವ ಕುರ್ಚಿಗಳನ್ನು ಸಹ ಹೊಂದಿದ್ದಾರೆ.
ಟಚ್ ಫ್ರೀ ಬಾತ್‌ರೂಮ್ ಫಿಟ್ಟಿಂಗ್:
ನಮ್ಮ ಭಾರತದ ಬಹಳಷ್ಟು ರೈಲುಗಳು ನೈರ್ಮಲೀಕರಣದ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಜೈವಿಕ ನಿರ್ವಾತ ಶೌಚಾಲಯ ಅಳವಡಿಸಿಕೊಳ್ಳಲಾಗಿದೆ. ಮುಖ್ಯವಾಗಿ ಶುಚಿತ್ವವನ್ನು ಗಮನಕ್ಕೆ ತೆಗೆದುಕೊಳ್ಳುವ ಮೂಲಕ ಟಚ್ ಫ್ರೀ ಬಾತ್‌ರೂಮ್ ಶೌಚಾಲಯ ಸೌಲಭ್ಯವನ್ನು ರೈಲು ಹೊಂದಿದೆ. ಅಲ್ಲದೇ, ಪ್ರಸ್ತುತ ಇರುವ ರೈಲುಗಳಲ್ಲಿ ವೈಫೈ ಸೌಲಭ್ಯವಿದೆ. ಇದರೊಂದಿಗೆ ಪ್ರಯಾಣಿಕರು ತಮ್ಮ ಮೊಬೈಲ್ ಅಥವಾ ಟ್ಯಾಬ್‌ನಲ್ಲಿಯೂ ವೈ ಫೈ ಪಡೆಯಬಹುದು. ರೈಲಿನಲ್ಲಿ ಕುಳಿತು ಸಾಕಷ್ಟು ಮನರಂಜನೆಯನ್ನು ಆನಂದಿಸಬಹುದು.
ನವೀಕರಿಸಿದ ವಂದೇ ಭಾರತ್ ಬೋಗಿಗಳು ಹೇಗಿರುತ್ತವೆ?
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿರುವಂತೆ, 40 ಸಾವಿರ ಬೋಗಿಗಳು ವಂದೇ ಭಾರತ್ ಹಾಗೂ ಅಮೃತ್ ಭಾರತ್ ಕೋಚ್‌ಗಳ ಸೌಲಭ್ಯಗಳನ್ನು ಆಧರಿಸಿರುತ್ತವೆ. 40 ಸಾವಿರ ಬೋಗಿಗಳಲ್ಲಿಯೂ ಮೊಬೈಲ್, ಲ್ಯಾಪ್‌ಟಾಪ್ ಗಳಿಗೆ ಪ್ರತ್ಯೇಕ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಲಾಗಿರುತ್ತದೆ. ಪ್ರತ್ಯೇಕ ಜಿಪಿಎಸ್, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಬೋಗಿಗಳು ನಾನ್ ಎಸಿ ಕೋಚ್‌ಗಳಾಗಿದ್ದರೂ ಗುಣಮಟ್ಟದ ಸೌಲಭ್ಯ ಒಳಗೊಂಡಿರುತ್ತದೆ. ಈಗ ವಂದೇ ಭಾರತ್‌ಗೆ ಇರುವಂತೆ ಜೈವಿಕ ನಿರ್ವಾತ ಶೌಚಾಲಯ ಅಳವಡಿಸಿಕೊಳ್ಳಲಾಗಿದೆ. ಈಗ ಒಂದೇ ಭಾರತ್‌ಗೆ ಇರುವಂತೆ ನೈರ್ಮಲೀಕರಣ ಸಮಸ್ಯೆ ಉಂಟುಮಾಡದ ಶೌಚಾಲಯ ವ್ಯವಸ್ಥೆ ಮಾಡಲಾಗಿರುತ್ತದೆ. ಆಸನಗಳ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ.
ದೇಶದಲ್ಲಿ ಎಲ್ಲೆಲ್ಲಿ ವಂದೇ ಭಾರತ್ ಸಂಚಾರ?
- ವಾರಣಾಸಿ – ನವದೆಹಲಿ (22435)
- ನವದೆಹಲಿ – SMVD ಕತ್ರಾ (22439)
- ಮುಂಬೈ ಸೆಂಟ್ರಲ್- ಗಾಂಧಿನಗರ CAP (20901)
- ನವದೆಹಲಿ – ಅಂಬ್ ಅಂದೌರಾ (22447)
- ಚೆನ್ನೈ – ಮೈಸೂರು (20607)
- ಬಿಲಾಸ್ಪುರ್ ಜಂಕ್ಷನ್ – ನಾಗ್ಪುರ ಜಂಕ್ಷನ್ (20825)
- ಹೌರಾ-ನ್ಯೂ ಜಲ್ಪೈಗುರಿ (22301)
- ಸಿಕಂದರಾಬಾದ್ – ವಿಶಾಖಪಟ್ಟಣಂ (20834)
- ಮುಂಬೈ -ಸಾಯಿನಗರ ಶಿರಡಿ (22223)
- ಮುಂಬೈ – ಸೋಲಾಪುರ (22225)
- ಭೋಪಾಲ್-ದೆಹಲಿ (20171)
- ಸಿಕಂದರಾಬಾದ್-ತಿರುಪತಿ (20701)
- ಎಂಜಿಆರ್ ಚೆನ್ನೈ ಸೆಂಟ್ರಲ್ – ಕೊಯಮತ್ತೂರು (20643)
- ದೆಹಲಿ ಕಂಟೋನ್ಮೆಂಟ್ – ಅಜ್ಮೀರ್ (20978)
- ತಿರುವನಂತಪುರಂ ಸೆಂಟ್ರಲ್ -ಕಾಸರಗೋಡು (20634)
- ತಿರುವನಂತಪುರಂ ಸೆಂಟ್ರಲ್ -ಕಾಸರಗೋಡು (20634)
- ಆನಂದ್ ವಿಹಾರ್ ಟರ್ಮಿನಲ್ – ಡೆಹ್ರಾಡೂನ್ (22457)
- ಹೊಸ ಜಲ್ಪೈಗುರಿ – ಗುವಾಹಟಿ (22227)
- ಧಾರವಾಡ – ಬೆಂಗಳೂರು (20662)
- ಪಾಟ್ನಾ – ರಾಂಚಿ (22349)
- ಭೋಪಾಲ್ – ಇಂದೋರ್ (20911)
- ಭೋಪಾಲ್ – ಜಬಲ್ಪುರ್ (20173)
- ಮುಂಬೈ – ಗೋವಾ (22229)
- ಗೋರಖ್‌ಪುರ – ಲಕ್ನೋ (22549)
- ಅಹಮದಾಬಾದ್ – ಜೋಧಪುರ (12462)
- ನವದೆಹಲಿ – ವಾರಣಾಸಿ (22436)
- SMVD ಕತ್ರಾ -ನವದೆಹಲಿ (22440)
- ಗಾಂಧಿನಗರ CAP -ಮುಂಬೈ ಸೆಂಟ್ರಲ್ (20902)
- ಅಂಬ್ ಅಂದೌರಾ – ನವದೆಹಲಿ (22448)
- ಮೈಸೂರು- ಚೆನ್ನೈ (20608)
- ನಾಗ್ಪುರ – ಬಿಲಾಸ್ಪುರ್ ಜಂಕ್ಷನ್ (20826)
- ಹೊಸ ಜಲ್ಪೈಗುರಿ ಜಂಕ್ಷನ್ – ಹೌರಾ (22302)
- ವಿಶಾಖಪಟ್ಟಣಂ -ಸಿಕಂದರಾಬಾದ್ (20833)
- ಸಾಯಿನಗರ ಶಿರಡಿ-ಮುಂಬೈ (22224)
- ಸೊಲ್ಲಾಪುರ- ಮುಂಬೈ (22226)
- ದೆಹಲಿ -ಭೋಪಾಲ್ (20172)
- ತಿರುಪತಿ-ಸಿಕಂದರಾಬಾದ್ (20702)
- ಕೊಯಮತ್ತೂರು – ಎಂಜಿಆರ್ ಚೆನ್ನೈ ಸೆಂಟ್ರಲ್ (20644)
- ಅಜ್ಮೀರ್- ದೆಹಲಿ ಕಂಟೋನ್ಮೆಂಟ್ (20977)
- ಕಾಸರಗೋಡು-ತಿರುವನಂತಪುರಂ ಸೆಂಟ್ರಲ್ (20633)
- ಹೌರಾ -ಪುರಿ ವಂದೇ ಭಾರತ್ (22895)
- ಡೆಹ್ರಾಡೂನ್-ಆನಂದ್ ವಿಹಾರ್ ಟರ್ಮಿನಲ್ (22458)
- ಗುವಾಹಟಿ-ಹೊಸ ಜಲ್ಪೈಗುರಿ (22228)
- ಬೆಂಗಳೂರು – ಧಾರವಾಡ (20661)
- ರಾಂಚಿ – ಪಾಟ್ನಾ (22350)
- ಇಂದೋರ್ – ಭೋಪಾಲ್ (20912)
- ಜಬಲ್ಪುರ್ – ಭೋಪಾಲ್ (20174)
- ಗೋವಾ – ಮುಂಬೈ (22230)
- ಲಕ್ನೋ- ಗೋರಖ್‌ಪುರ (22550)
- ಜೋಧಪುರ – ಅಹಮದಾಬಾದ್ (12461)