‘ಯುವ’ ಸಿನಿಮಾದ ಸ್ಟೋರಿ ಏನು?: ಗುಟ್ಟು ಬಿಚ್ಚಿಟ್ಟ ನಿರ್ದೇಶಕ

Public TV
1 Min Read
Yuva 1

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಯುವ ಸಿನಿಮಾದ ಕಥೆ (Story) ಏನು ಎನ್ನುವುದಕ್ಕೆ ಸಂಕ್ಷಿಪ್ತವಾಗಿ ಉತ್ತರಿಸಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್. ತಂದೆ ಮಗನ ಸೆಂಟಿಮೆಂಟ್ ಜೊತೆಗೆ ಮಧ್ಯಮ ವರ್ಗದ ಕುಟುಂಬದ ಕಥೆಯು ಸಿನಿಮಾದಲ್ಲಿದೆಯಂತೆ. ಅದನ್ನು ಎಲ್ಲ ಜನರಿಗೂ ಮನ ಮುಟ್ಟುವಂತೆ ಹೇಳಿರುವುದಾಗಿ ಅವರು ಹೇಳಿದರು.

Yuva 2

ಈ ನಡುವೆ ಯುವರಾಜ್ ಕುಮಾರ್ (Yuvraj Kumar) ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿರುವ ಯುವ (Yuva) ಚಿತ್ರದ ಮತ್ತೊಂದು ಹಾಡು ನಿನ್ನೆ ಬಿಡುಗಡೆ ಆಗಿದೆ. ‘ಅಪ್ಪುಗೆ’ (Appuge) ಹೆಸರಿನಲ್ಲಿ ಮೂಡಿ ಬಂದಿರುವ ಈ ಹಾಡಿನ ಲಿರಿಕಲ್ ವಿಡಿಯೋವನ್ನು ಪುನೀತ್ ರಾಜ್ ಕುಮಾರ್ ಪುತ್ರಿ ವಂದಿತಾ ಬಿಡುಗಡೆ ಮಾಡಿದ್ದಾರೆ.

Yuva 4

ಅಪ್ಪುಗೆ ಮೇಲೆ ಚಿತ್ರಿತವಾದ ವಿಶೇಷ ಹಾಡು ಇದಾಗಿದ್ದು, ಸಂತೋಶ್ ಆನಂದ್ ರಾಮ್ (Santhosh Anand Ram) ನಿರ್ದೇಶನದಲ್ಲಿ, ಹೊಂಬಾಳೆ ಫಿಲಂಸ್ ನಲ್ಲಿ ಬ್ಯಾನರ್ ಅಡಿ ವಿಜಯ್ ಕಿರಗಂದೂರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.  ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಹಾಡು ಬಿಡುಗಡೆ ಆಗಿದೆ.

Yuva 3

ಲಿರಿಕಲ್ ವಿಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಯುವರಾಜ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಅಪ್ಪು ಮಗಳು ವಂದಿತಾ (Vandita) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ತಂದೆ ಮಗನ ಬಾಂಧ್ಯವದ ಹಾಡು ಇದಾಗಿದ್ದು, ಯುವ ಸಿನಿಮಾದ ಬಹುಮುಖ್ಯ ಘಟ್ಟದಲ್ಲಿ ಹಾಡು ಇರಲಿದೆ. ಈ ಹಾಡನ್ನು ಬಿಡುಗಡೆ ಮಾಡಿದ ವಂದಿತಾಗೆ ಚಿತ್ರತಂಡದಿಂದ ಅಪ್ಪು ಫೋಟೋ ಉಡುಗೊರೆಯಾಗಿ ನೀಡಲಾಯಿತು. ಅಪ್ಪನ ಫೋಟೋ ನೋಡಿ ವಂದಿತಾ ಭಾವುಕರಾದರು.

 

ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿತ್ತು, ವಿಜಯ್ ಪ್ರಕಾಶ್ ಗೀತೆಗೆ ಧ್ವನಿಯಾಗಿದ್ದಾರೆ. ಈ ಹಾಡಿನ ಸಾಹಿತ್ಯ ಸಂತೋಷ್ ಆನಂದ್ ರಾವ್ ಅವರ ಬರವಣಿಗೆಯಲ್ಲಿ ಮೂಡಿ ಬಂದಿದೆ.

Share This Article