ಭಾರತೀಯ ಸಿನಿಮಾ ರಂಗದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಲಾರ್ ಸಿನಿಮಾದ ಕಥೆಯ (Story) ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಪ್ರಶಾಂತ್ ನೀಲ್ (Prashant Neel) ಈ ಹಿಂದೆ ಕನ್ನಡದಲ್ಲಿ ಮಾಡಿದ್ದ ಉಗ್ರಂ ಸಿನಿಮಾವನ್ನೇ ಕೊಂಚ ಬದಲಿಸಿಕೊಂಡು ಚಿತ್ರ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಪ್ರಶಾಂತ್ ನೀಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಕಥೆಯ ಬಗ್ಗೆ ಪ್ರಶಾಂತ್ ಮಾತನಾಡಿದ್ದಾರೆ.
Advertisement
ಇದು ರಿಮೇಕ್ ಸಿನಿಮಾವಲ್ಲ ಎಂದು ಸ್ಪಷ್ಟ ಪಡಿಸಿದರುವ ಅವರು, ಸ್ನೇಹಿತರಿಬ್ಬರು ದೊಡ್ಡ ಶತ್ರುಗಳಾಗಿ ಬದಲಾಗುವ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ ಎಂದಿದ್ದಾರೆ. ಈ ಇಬ್ಬರ ಜರ್ನಿಯನ್ನು ಎರಡು ಭಾಗವಾಗಿ ತೋರಿಸಲಾಗುವುದು ಎಂದು ಇದೇ ಮೊದಲ ಬಾರಿಗೆ ಕಥೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ.
Advertisement
Advertisement
ಪ್ರಿರಿಲೀಸ್ ಇವೆಂಟ್ ಮಾಡಲ್ಲ
Advertisement
ಸದ್ಯ ಚಿತ್ರೋದ್ಯಮದಲ್ಲಿ ಇವೆಂಟ್ ಟ್ರೆಂಡ್ ಹೆಚ್ಚಾಗಿದೆ. ಪೋಸ್ಟ್ ರಿಲೀಸ್ ಇವೆಂಟ್, ಪ್ರಿರಿಲೀಸ್ (Event) ಇವೆಂಟ್ ಹೀಗೆ ಜನರನ್ನು ಸೇರಿಸುವುದಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತದೆ. ಇಂಥದ್ದೊಂದು ಯಾವುದೇ ಇವೆಂಟ್ ಸಲಾರ್ ಚಿತ್ರಕ್ಕಾಗಿ ಮಾಡುತ್ತಿಲ್ಲ ಎನ್ನುವ ವಿಷಯ ಗಾಂಧಿನಗರದಲ್ಲಿ ಓಡಾಡುತ್ತಿದೆ. ಯಾವುದೇ ಇವೆಂಟ್ ಮಾಡದೇ, ಟ್ರೈಲರ್ ಬಿಡುಗಡೆ ನಂತರ ನೇರವಾಗಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆಯಂತೆ ಹೊಂಬಾಳೆ ಸಂಸ್ಥೆ.
ಸಲಾರ್ ಪ್ರಭಾಸ್ (Prabhas) ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಇದು ಕೆಜಿಎಫ್ (KGF) ನಿರ್ದೇಶಕನ ಸಿನಿಮಾ ಎನ್ನುವ ನಿರೀಕ್ಷೆ. ಕೆಜಿಎಫ್ ಅನ್ನೋ ದೃಶ್ಯಕಾವ್ಯ ಕೊಟ್ಟು ಸಿನಿಮಾ ಮೇಕಿಂಗ್ ಸ್ಟೈಲ್‌ಗೆ ಹೊಸ ಭಾಷ್ಯ ಬರೆದ ನಿರ್ದೇಶಕನ ಇನ್ನೊಂದು ಸಿನಿಮಾ ಕೊನೆಗೂ ಬರ್ತಿದೆ. ಕೆಜಿಎಫ್ ಹೇಗೆ ವಿಶ್ವದಗಲ ಬಾಹು ಹಸ್ತ ಚಾಚಿತ್ತೋ ಅದಕ್ಕಿಂತ ಹೆಚ್ಚಾಗಿ ಸಲಾರ್ ಅಜಾನುಬಾಹುವಾಗಿ ಹೊರಹೊಮ್ಮಲಿದೆ. ಹೊಂಬಾಳೆ ಸಂಸ್ಥೆ ಈಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಂಡ ಪರಿಣಾಮ ಅಮೆರಿಕಾದಲ್ಲೂ ಮುಂಗಡ ಟಿಕೆಟ್ ಬುಕಿಂಗ್ ನಡೆಯುತ್ತಿದೆ.
ಸಲಾರ್ (Salaar) ಮೇಲಿನ ನಿರೀಕ್ಷೆ ಎಷ್ಟಿದೆ ಅಂದ್ರೆ ಈಗಾಗಲೇ ಅಮೆರಿಕಾದಲ್ಲಿ ಈಗಾಗಲೇ ಲಕ್ಷ ಡಾಲರ್ ಕಲೆಕ್ಷನ್ ಟಿಕೆಟ್‌ನಿಂದ ಬಂದಿದೆ. ಅದ್ಹೇಗೆ ಅನ್ನೋದು ನಿಮ್ಮ ಅನುಮಾನವೇ? ಅನೇಕ ದೇಶಗಳಲ್ಲಿ ಸಲಾರ್ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಅಮೆರಿಕಾ ಸಮೇತ. ಅದರಲ್ಲೂ ನಾರ್ಥ್ ಅಮೆರಿಕಾದಲ್ಲಿ ಹೆಚ್ಚಿನ ಭಾರತೀಯರಿದ್ದಾರೆ. ಆ ಭಾಗದಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರವನ್ನ ನೋಡುವ ಕುತೂಹಲ. ಇದೇ ಕಾರಣಕ್ಕೆ ಸಲಾರ್ ತಿಂಗಳಿಗೂ ಅಡ್ವಾನ್ಸ್ ಬುಕಿಂಗ್ ಸ್ಟಾರ್ಟ್ ಆಗಿದ್ದು ಮೊದಲ ದಿನವೇ ಲಕ್ಷ ಡಾಲರ್ ಮೊತ್ತದ ಟಿಕೆಟ್ ಸೇಲ್ ಆಗಿದೆ.
ಅಂದಹಾಗೆ ಸರಿಯಾಗಿ ಸಲಾರ್ ತೆರಗಪ್ಪಳಿಸೋದನ್ನ ನೋಡಲು ಇನ್ನೊಂದು ತಿಂಗಳಷ್ಟೇ ಬಾಕಿ ಇದೆ. ಡಿಸೆಂಬರ್ 1 ಟ್ರೈಲರ್ ರಿಲೀಸ್. ಬಳಿಕ ಪ್ರಭಾಸ್ ಅಖಾಡಕ್ಕಿಳಿಯುತ್ತಾರೆ. ಪ್ರಶಾಂತ್ ನೀಲ್ ಹಗಲು ರಾತ್ರಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತಗಾಗಿದ್ದಾರೆ. ಹೊಂಬಾಳೆ ಈ ಚಿತ್ರವನ್ನ ವಿಶ್ವವ್ಯಾಪಿ ಏಕಕಾಲದಲ್ಲಿ 5 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಬೆನ್ನುಮೂಳೆ ಸಮಸ್ಯೆಯಿಂದಾಗಿ ಪ್ರಭಾಸ್ ಟ್ರೀಟ್‌ಮೆಂಟ್ ಪಡೆದು ವಿಶ್ರಾಂತಿಯಲ್ಲಿದ್ದಾರೆ. ಟ್ರೈಲರ್ ರಿಲೀಸ್ ಆದ ಬಳಿಕವೇ ಪ್ರಚಾರದ ಅಖಾಡಕ್ಕೆ ಎಂಟ್ರಿ ಕೊಡ್ತಾರೆ ಪ್ರಭಾಸ್. ಸೋ.. ಇದಿಷ್ಟು ಸಲಾರ್ ಅಖಾಡದ ಬಿಸಿ ಬಿಸಿ ಸುದ್ದಿ.