ಕರ್ನಾಟಕ ರತ್ನ ಪ್ರಶಸ್ತಿಯನ್ನು (Award) ನೀಡಲು ಹಲವು ಮಾನದಂಡಗಳನ್ನು (Criterion) ಸರಕಾರ ರೂಪಿಸಿದೆ. ಆ ಮಾನದಂಡದ ಆಧಾರದ ಮೇಲೆಯೇ ಈ ಪ್ರಶಸ್ತಿಯ ಆಯ್ಕೆಯ ಪ್ರಕ್ರಿಯೆ ನಡೆಯುತ್ತದೆ. ಆದರೆ, ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗಾಗಿ ಮಾನದಂಡದಲ್ಲಿ ಕೆಲ ತಿದ್ದುಪಡಿ ಮಾಡಿ ಸರಕಾರ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಇದು ಮಹಾನ್ ನಟನಿಗೆ ಸಲ್ಲಿಸಿದ ಗೌರವವೂ ಆಗಿದೆ. ತಿದ್ದುಪಡಿ (Amendment) ವಿಷಯವನ್ನು ಸರಕಾರ ಕೂಡ ಒಪ್ಪಿಕೊಂಡಿದೆ.
Advertisement
ಹಾಗಾದರೆ, ಕರ್ನಾಟಕ ರತ್ನ (Karnataka Ratna) ಪ್ರಶಸ್ತಿಗೆ ಆಯ್ಕೆಯಾಗಲು ಮಾನದಂಡಗಳೇನು ಮತ್ತು ಪುನೀತ್ ಗಾಗಿ ತಿದ್ದುಪಡಿ ಮಾಡಿರುವ ನಿಯಮವೇನು ಎನ್ನುವುದು ಸದ್ಯಕ್ಕಿರುವ ಕುತೂಹಲ. ಈ ಹಿಂದೆ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಎಂ.ಸಿ. ವೇಣುಗೋಪಾಲ್ ಅವರು ನಿಯಮ 330ರಡಿ ಪ್ರಶ್ನೆಯೊಂದನ್ನು ಕೇಳಿ, ರಾಷ್ಟ್ರಕವಿ, ಕರ್ನಾಟಕ ರತ್ನ ಮುಂತಾದ ಬಿರುದುಗಳನ್ನು ನೀಡಲು ಇರುವ ಮಾನದಂಡಗಳು ಏನು? ಎಂದು ಪ್ರಶ್ನೆ ನೀಡಿದ್ದರು. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ
Advertisement
Advertisement
ಎಂ.ಸಿ. ವೇಣುಗೋಪಾಲ್ ಕೇಳಿದ ಪ್ರಶ್ನೆಗೆ 2020ರಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರು ಆಗಿದ್ದ ಗೋವಿಂದ ಎಂ ಕಾರಜೋಳ ಅವರ ಲಿಖಿತ ಉತ್ತರ ನೀಡಿ, ‘ಈ ಪ್ರಶಸ್ತಿಯನ್ನು ಕರ್ನಾಟಕದಲ್ಲಿ ಜನಿಸಿ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಂದರೆ, ಸಾಂಸ್ಕೃತಿಕ, ವೈಜ್ಞಾನಿಕ, ಮಾನವಿಕ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅತ್ಯಂತ ಗಣನೀಯ ಸೇವೆಯನ್ನು ಸಲ್ಲಿಸಿದ ಕನಿಷ್ಠ 60 ವರ್ಷ ತುಂಬಿದ ಮಹಿನೀಯರನ್ನು ಗುರುತಿಸಿ, ಸರಕಾರವು ಪ್ರಶಸ್ತಿಯನ್ನು ನೀಡಲು ತೀಮಾರ್ನಿಸುತ್ತದೆ’ ಎಂದು ಉತ್ತರ ನೀಡಿದ್ದಾರೆ.
Advertisement
ಮಾನ್ಯ ಸಚಿವರು ಕೊಟ್ಟ ಉತ್ತರವನ್ನು ಗಮನಿಸಿದಾಗ ಪುನೀತ್ ಅವರು ಜನಿಸಿದ್ದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ. ಹಾಗಾಗಿ ಬಹುಶಃ ಕರ್ನಾಟಕದಲ್ಲಿ ಜನಿಸಿದ ಎನ್ನುವ ಮಾನದಂಡವನ್ನು ತಿದ್ದುಪಡಿ ಮಾಡಿರಬಹುದು. ಅಲ್ಲದೇ, ಕನಿಷ್ಠ 60 ವರ್ಷ ತುಂಬಿದ ಮಹನೀಯರನ್ನು ಗುರುತಿಸಿ ಅಂತಿದೆ. ವಯಸ್ಸನ್ನು ಕೂಡ ತಿದ್ದುಪಡಿ ಮಾಡಿರಬಹುದು.