ವರನಟ ಡಾ.ರಾಜ್ಕುಮಾರ್ ಮೊಮ್ಮಗ ವಿನಯ್ ರಾಘವೇಂದ್ರ ರಾಜ್ಕುಮಾರ್ ‘ಅಂದೊಂದಿತ್ತು ಕಾಲ’ ಸಿನಿಮಾ ಮೂಲಕ ಮತ್ತೊಮ್ಮೆ ಸಿನಿಪ್ರಿಯರನ್ನು ರಂಜಿಸಲು ಬರುತ್ತಿದ್ದಾರೆ. ಸಿನಿಮಾದಲ್ಲಿ ವಿನಯ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ರವಿಚಂದ್ರನ್ ಪಾತ್ರದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ, ಅದಕ್ಕೀಗ ತೆರೆ ಬಿದ್ದಿದ್ದೆ.
Advertisement
ಈ ಕುರಿತು ಮಾತನಾಡಿರುವ ರವಿಚಂದ್ರನ್, ‘ಸಿನಿಮಾದಲ್ಲಿ ಪುಟ್ಟ ಪಾತ್ರವಾಗಿದ್ದರೂ, ಇಡೀ ಚಿತ್ರದ ಕಥೆ ಹೇಳೋದೇ ನಾನೇ. ವೀಕೆಂಡ್ ವಿತ್ ರಮೇಶ್ ಮಾದರಿಯಲ್ಲಿ ಮೆಮೊರಿಸ್ ವಿತ್ ರವಿಚಂದ್ರನ್ ಅನ್ನೋ ಕಾರ್ಯಕ್ರಮದ ನಿರೂಪಕ ಪಾತ್ರವನ್ನು ನಾನು ಸಿನಿಮಾದಲ್ಲಿ ನಿರ್ವಹಿಸುತ್ತಿದ್ದೇನೆ. ಇದನ್ನೂ ಓದಿ: ಬಿಯರ್ ದಾನ ಮಾಡಿ ಎಂದ ಅಭಿಮಾನಿ – ಬಿಯರ್ ಜೊತೆ ಆಲೂ ಭುಜಿಯಾ ಮಿಕ್ಸ್ಚರ್ ಸಾಕಾ ಎಂದ ಸೋನು
Advertisement
Advertisement
ನನ್ನ ಕುಟುಂಬದ ಹುಡುಗ ವಿನಯ್. ಅವನ ಚಿತ್ರದಲ್ಲಿ ನಟಿಸೋಕೆ ಕೇಳಿದಾಗ ಇಲ್ಲ ಅನ್ನುವುದಕ್ಕೆ ಆಗಲಿಲ್ಲ. ನಾನು ಆ ಕಾರ್ಯಕ್ರಮದ ಮೂಲಕ ನಾಯಕನ ಕಥೆ ಹೇಳಿಸುತ್ತೇನೆ. ಮೊದಲ ಬಾರಿಗೆ ನಿರೂಪಕನಾಗಿ ನಟಿಸುತ್ತಿದ್ದೇನೆ. ನಾನು ಹಲವು ರಿಯಾಲಿಟಿ ಶೋಗಳ ಜಡ್ಜ್ ಆಗಿದ್ದೇನೆ. ನಿರೂಪಣೆ ಮಾಡಿಲ್ಲ. ಈ ಪಾತ್ರ ಹೊಸದು’ ಎಂದಿದ್ದಾರೆ.
Advertisement
ಈ ವೇಳೆ ಏಕೆ ಪೋಷಕ ಪಾತ್ರದಲ್ಲಿ ಹೆಚ್ಚು ನಟಿಸುತ್ತಿದ್ದೀರಾ ಎಂದು ಕೇಳಿದ್ದಕ್ಕೆ, ಕಡಿಮೆ ಕೆಲಸ ಮತ್ತು ಹೆಚ್ಚು ಸಂಭಾವನೆ’ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ ರವಿಚಂದ್ರನ್. ಇದನ್ನೂ ಓದಿ: ಮೆಲೋಡಿ ಕ್ವೀನ್ನನ್ನು ಭೇಟಿಯಾದ ಶರ್ಮಿಳಾ
‘ಅಂದೊಂದಿತ್ತು ಕಾಲ’ ಸಿನಿಮಾವನ್ನು ಸುರೇಶ್ ನಿರ್ಮಾಣ ಮಾಡುತ್ತಿದ್ದು, ಕೀರ್ತಿ ಅವರ ನಿರ್ದೇಶನವಿದೆ.