ಭಾರತ ಸದಾ ಶಾಂತಿ ಪ್ರಿಯ ದೇಶವಾಗಿದ್ದು, ಅನಾವಶ್ಯಕವಾಗಿ ಬೇರೆ ದೇಶಗಳ ಜೊತೆ ಕಾಲು ಕೆರದು ಜಗಳ ತೆಗೆದ ಉದಾಹರಣೆ ಇಲ್ಲ. ಆದರೆ ನೆರೆಯ ಪಾಕಿಸ್ತಾನ ಹಾಗೂ ಚೀನಾ ಒಂದಲ್ಲ ಒಂದು ಕಾರಣಕ್ಕೆ ಭಾರತದ ವಿರುದ್ಧ ಕುತಂತ್ರ ಹೆಣೆಯುತ್ತಲೇ ಇವೆ. ಸದಾ ಗಡಿ ತಂಟೆಯನ್ನು ತೆಗೆದು ಅವಕಾಶ ಸಿಕ್ಕಾಗಲೆಲ್ಲಾ ಸಂಚು ರೂಪಿಸಿ ದಾಳಿ ನಡೆಸುತ್ತಿವೆ. ಇಷ್ಟೇ ಅಲ್ಲದೇ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿವೆ.
ಈಗಾಗಲೇ ಚೀನಾದಿಂದ ಎರಡು ಬಾರಿ ಸೋತು ಹಾಗೂ ಪಾಕ್ ಉಗ್ರರ ದಾಳಿಯಿಂದ ಬೇಸತ್ತ ಭಾರತ ತನ್ನ ಸೇನೆ ಹಾಗೂ ಸಶಸ್ತ್ರಗಳನ್ನು ಬಲಪಡಿಸಿಕೊಂಡಿದೆ. ಸೇನೆಯ ಬತ್ತಳಿಕೆಯಲ್ಲಿ ಅಣ್ವಸ್ತ್ರಗಳನ್ನು ಸಹ ಸೇರಿಸಿ ವೈರಿಯ ಎದೆಯಲ್ಲಿ ನಡುಕ ಹುಟ್ಟಿಸಿ ಭಾರತ ಸೈ ಎನಿಸಿಕೊಂಡಿದೆ. ಭಾರತದ ಪರಮಾಣು ಬಾಂಬ್‍ಗಳು (Indian Nuclear weapon) ಹಾಗೂ ಅಣುಬಾಂಬ್ ಪರೀಕ್ಷೆಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.
Advertisement
ಸ್ಮೈಲಿಂಗ್ ಬುದ್ಧ ಪ್ರಾಜೆಕ್ಟ್
Advertisement
1974 ರಲ್ಲೇ ರಾಜಸ್ಥಾನದ ಪೋಖ್ರಾನ್‌ನ ಭೂಗರ್ಭದಡಿ ಪರಮಾಣು ಬಾಂಬ್ ಪರೀಕ್ಷೆ ನಡೆಸುವ ಮೂಲಕ ಭಾರತ ಪರಮಾಣು ಸ್ವಾವಲಂಬನೆ ಕಂಡುಕೊಂಡಿತ್ತು. ಮೇ 18, 1974ರ ಶನಿವಾರ `ಸ್ಮೈಲಿಂಗ್ ಬುದ್ಧ’ ಹೆಸರಿನಲ್ಲಿ ಪರಮಾಣು ಪರೀಕ್ಷೆ ನಡೆಸಿ ಇದೀಗ ಅರ್ಧ ಶತಮಾನ ಕಳೆದಿದೆ.
Advertisement
ಭಾರತದ ಪರಮಾಣು ಬಾಂಬ್ ಪರೀಕ್ಷೆ ಎಷ್ಟು ಗೌಪ್ಯಾವಾಗಿತ್ತು ಗೊತ್ತಾ?
Advertisement
ಮೇ 18, 1974ರ ಬೆಳಗ್ಗೆ ಸುಮಾರು 08:05ರ ವೇಳೆಗೆ ಅಮೆರಿಕದ ಭೂ ಕಂಪನ ಮಾಪಕ ಭೂಮಿ ಕಂಪಿಸಿದ್ದನ್ನು ದಾಖಲಿಸಿತ್ತು. ಇದು ಭೂ ಕಂಪನ ಅಲ್ಲ ಎಂದು ಸಂಶೋಧಕರಿಗೂ ತಿಳಿದಿತ್ತು. ಈ ಕಂಪನದ ರಹಸ್ಯವನ್ನು ಭಾರತ ಬಹಿರಂಗ ಗೊಳಿಸಿದಾಗ ಜಗತ್ತು ಬೆರಗಾಗಿತ್ತು. ಈ ಪ್ರಯೋಗದ ವಿಚಾರವನ್ನು ನಮ್ಮದೇ ದೇಶದ ರಕ್ಷಣಾ ಸಚಿವರು, ವಿದೇಶಾಂಗ ವ್ಯವಹಾರಗಳ ಸಚಿವರಿಗೆ ಮಾಹಿತಿ ನೀಡಿದ್ದು ಕೇವಲ ಎರಡು ದಿನಗಳ ಮೊದಲು!
ಸುಮಾರು 75 ವಿಜ್ಞಾನಿಗಳನ್ನು ಹೊರತುಪಡಿಸಿದರೆ ಈ ಪ್ರಾಜೆಕ್ಟ್ ಮಾಹಿತಿ ಗೊತ್ತಿದ್ದಿದ್ದು ಪ್ರಧಾನಿ ಇಂದಿರಾಗಾಂಧಿ (Indira Gandhi), ಅವರ ಪ್ರಧಾನ ಕಾರ್ಯದರ್ಶಿ ಪರಮೇಶ್ವರ್ ಹಸ್ಕರ್ ಮತ್ತು ಸೋವಿಯತ್ ಒಕ್ಕೂಟದಲ್ಲಿ ಭಾರತದ ರಾಯಭಾರಿಯಾಗಿದ್ದ ದುರ್ಗಾ ಪ್ರಸಾದ್ ಧರ್ ಅಧಿವರಿಗೆ ಮಾತ್ರ. ಅಷ್ಟು ಅಚ್ಚುಕಟ್ಟಾಗಿ ಈ ಪ್ರಜೆಕ್ಟ್‍ನ ಗೌಪ್ಯತೆ ಕಾಪಾಡಲಾಗಿತ್ತು. ಈ ಸಾಧನೆಯಿಂದ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳೆನಿಸಿದ್ದ ಅಮೆರಿಕ, ರಷ್ಯಾ, ಚೀನಾ ಸೇರಿದಂತೆ ಶತ್ರು ರಾಷ್ಟ್ರ ಪಾಕ್‍ಗೆ ಶಾಕ್ ಆಗಿತ್ತು. ಅಣ್ವಸ್ತ್ರ ಪರೀಕ್ಷೆ 1974ರ ಅಣ್ವಸ್ತ್ರ ಪರೀಕ್ಷೆ ಬಳಿಕ ಅದೇ ಪೋಖ್ರಾನ್‌ಲ್ಲಿ ಭಾರತ 5 ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿದೆ. 1974ರ ಪರಮಾಣು ಪರೀಕ್ಷೆ ಶಾಂತಿಯುತವಾದ ಪರಮಾಣು ಪರೀಕ್ಷೆ ಎಂದೇ ಕರೆಸಿಕೊಂಡಿತ್ತು. ಶಾಂತಿಯುತವಾಗಿಯೇ ತನ್ನಲ್ಲಿನ ಪರಮಾಣು ತಂತ್ರಜ್ಞಾನದ ಸಹಾಯದಿಂದ ಅಣ್ವಸ್ತ್ರ ಅಭಿವೃದ್ಧಿ ಪಡಿಸುವ ಸಾಮಥ್ರ್ಯ ತನಗಿದೆ ಎನ್ನುವ ಶಕ್ತಿಯನ್ನು ಜಗತ್ತಿಗೆ ತೋರಿಸಿತು.
ಭಾರತಕ್ಕೆ ಅಣುಬಾಂಬ್ ಅಗತ್ಯವೇನಿತ್ತು?
1971ರ ಇಂಡೋ- ಪಾಕ್ ಯುದ್ಧದ ಬಳಿಕ ಪಾಕಿಸ್ತಾನ ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದೇ ಬರುತ್ತದೆ ಎನ್ನುವ ವಿಚಾರ ಭಾರತಕ್ಕೆ ಕಾಡುತ್ತಿತ್ತು. ಇದರೊಂದಿಗೆ ಈಗಾಗಲೇ 2 ಬಾರಿ ಚೀನಾ ವಿರುದ್ಧದ ಯುದ್ಧದಲ್ಲಿ ಭಾರತ ಸೋತಿತ್ತು. ಪಾಕಿಸ್ತಾನ, ಚೀನಾ ಸೇರಿ ಮಣಿಸುವ ಸಾಧ್ಯತೆ ಭಾರತದ ಆತಂಕಕ್ಕೆ ಕಾರಣವಾಗಿತ್ತು. ಮಿತ್ರ ರಾಷ್ಟ್ರ ರಷ್ಯಾ ಅಮೆರಿಕದೊಂದಿಗೆ ಶೀತಲ ಸಮರದಲ್ಲಿ ನಿರತವಾಗಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಯಾರನ್ನೂ ನಂಬುವ ಹಾಗಿರಲಿಲ್ಲ. ಇವೆಲ್ಲದರಿಂದಾಗಿ 70ರ ದಶಕದಲ್ಲಿ ನ್ಯೂಕ್ಲಿಯರ್ ಬಾಂಬ್ ಪರೀಕ್ಷೆಗೆ ಭಾರತ ಮನಸ್ಸು ಮಾಡಿತು.
ಭಾರತದ ಪರಮಾಣು ಶಕ್ತಿಗೆ ಬೂಸ್ಟರ್ ಡೋಸ್!
1983ರಲ್ಲಿ, ಇಂದಿರಾ ಗಾಂಧಿಯವರ ಸರ್ಕಾರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (DRDO) ಹೆಚ್ಚಿನ ಹಣಕಾಸಿನ ನೆರವು ಒದಗಿಸಿದರು. ಭಾರತದ ಕ್ಷಿಪಣಿ ಅಭಿವೃದ್ಧಿ ಯೋಜನೆಗಳ ಮುಖ್ಯಸ್ಥರಾಗಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ನೇಮಿಸಲಾಯಿತು. ಇದೇ ವರ್ಷದಲ್ಲಿ, ಭಾರತ ಪ್ಲುಟೋನಿಯಂನ್ನು ಆಯುಧಗಳಲ್ಲಿ ಬಳಸುವಷ್ಟು ಶಕ್ತವಾಯಿತು. 1980ರ ದಶಕದಲ್ಲಿ, ಭಾರತ ತನ್ನ ಪ್ಲುಟೋನಿಯಂ ಸಂಗ್ರಹ ಸಹ ಹೆಚ್ಚಾಯಿತು.
1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ, ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ನಾಯಕತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‍ಡಿಎ) ಸರ್ಕಾರ ರಚಿಸಿತ್ತು. ಅಧಿಕಾರಕ್ಕೆ ಬರುವ ಮುನ್ನ, ಎನ್‍ಡಿಎ ಭಾರತದ ಮಿಲಿಟರಿ ಸಾಮಥ್ರ್ಯಕ್ಕೆ ಅಣ್ವಸ್ತ್ರ ಸಾಮಥ್ರ್ಯವನ್ನೂ ಸೇರಿಸುವುದನ್ನು ತನ್ನ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶವಾಗಿಸಿತ್ತು.
1998ರಲ್ಲಿ, ಚೀನಾದ ಬೆಂಬಲದೊಡನೆ ಅಭಿವೃದ್ಧಿ ಪಡಿಸಿದ್ದ ಘೋರಿ ಕ್ಷಿಪಣಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಪರೀಕ್ಷಿಸಿತು. ಅದೇ ಪಾಕಿಸ್ತಾನದ ಸಾಮಥ್ರ್ಯಕ್ಕೆ ಭಾರತ ತನ್ನ ಆಪರೇಶನ್ ಶಕ್ತಿಯ ಮೂಲಕ ತಕ್ಕ ಪ್ರತ್ಯುತ್ತರ ನೀಡಿತು. 1974ರಲ್ಲಿ, ಭಾರತ ತನ್ನ ಪರಮಾಣು ಪರೀಕ್ಷೆಯನ್ನು ಶಾಂತಿಯುತ ಉದ್ದೇಶಗಳಿಗಾಗಿ ಎಂದಿತ್ತಾದರೂ, 1998ರ ಪರಮಾಣು ಪರೀಕ್ಷೆಗಳು ಭಾರತವನ್ನು ಅಣ್ವಸ್ತ್ರ ಸಜ್ಜಿತ ರಾಷ್ಟ್ರವಾಗಿ ರೂಪಿಸಿತ್ತು. ಪೋಖ್ರಾನ್ 2 ಎಂದು ಹೆಸರಾದ ಈ ಪರೀಕ್ಷೆಗಳ ಬಳಿಕ, ಭಾರತ ಸರ್ಕಾರ ತನ್ನ ಬಳಿ ಈಗ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಜಗತ್ತಿಗೆ ಘೋಷಿಸಿತು.
1998ರ ಭಾರತದ ಅಣ್ವಸ್ತ್ರ ಪರೀಕ್ಷೆಗಳ ಪರಿಣಾಮವಾಗಿ, ಅಮೆರಿಕ ಸೇರಿದಂತೆ ಹಲವು ದೇಶಗಳು ಭಾರತದ ಮೇಲೆ ನಿರ್ಬಂಧಗಳನ್ನು ಹೇರಿದವು. ಆದರೆ, ಈ ಬಾರಿಯ ಪ್ರತಿರೋಧಗಳು 1974ರಲ್ಲಿನ ಭಾರತದ ಮೊದಲ ಪರಮಾಣು ಪರೀಕ್ಷೆಗಳ ಸಂದರ್ಭದಲ್ಲಿದ್ದಷ್ಟು ತೀಕ್ಷ್ಣವಾಗಿರಲಿಲ್ಲ. ಕ್ಷಿಪ್ರವಾಗಿ ಬೆಳೆಯುತ್ತಿದ್ದ ಭಾರತದ ಆರ್ಥಿಕತೆ ಮತ್ತು ಭಾರತದ ಬೃಹತ್ ಮಾರುಕಟ್ಟೆಯನ್ನು ಬಳಸುವ ವಿದೇಶಗಳ ಹಂಬಲದ ಕಾರಣದಿಂದ ಭಾರತಕ್ಕೆ ಈ ಎಲ್ಲ ಟೀಕೆ, ಪ್ರತಿರೋಧಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು. ಈ ಅಣ್ವಸ್ತ್ರ ಪರೀಕ್ಷೆಗಳು ಭಾರತಕ್ಕೆ ತನ್ನನ್ನು ತಾನು ಅತ್ಯಂತ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ಸ್ಥಾಪಿಸಲೂ ಪೂರಕವಾಯಿತು.
ಅಣ್ವಸ್ತ್ರ ದಾಳಿಯಲ್ಲಿ ಮೊದಲಿಗರಾಗಲು ಬಯಸದ ಭಾರತ
ಅಣ್ವಸ್ತ್ರವನ್ನು ಮೊದಲು ಪ್ರಯೋಗಿಸುವುದಿಲ್ಲ ಎಂಬದು ಭಾರತದ ನೀತಿಯಾಗಿದೆ. 1998ರಲ್ಲಿ ನಡೆಸಿದ ಎರಡನೇ ಅಣ್ವಸ್ತ್ರ ಪರೀಕ್ಷೆಯ ಬಳಿಕ ವಾಜಪೇಯಿ ಅವರ ಸರ್ಕಾರ “ನಾವು ಎಂದೂ ಅಣ್ವಸ್ತ್ರ ದಾಳಿಯಲ್ಲಿ ಮೊದಲಿಗರಾಗಲು ಬಯಸುವುದಿಲ್ಲ; ಆದರೆ ದೇಶದ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಅದನ್ನು ಬಳಸಲು ಹಿಂಜರಿಯುವುದಿಲ್ಲ” ಎಂಬ ಹೇಳಿಕೆ ಬಿಡುಗಡೆ ಮಾಡಿತ್ತು. ಈ ಮೂಲಕ ಭಾರತ ಶಾಂತಿಯ ಸಂದೇಶವನ್ನು ರವಾನಿಸಿತ್ತು.
ಇತ್ತೀಚೆಗೆ ಭಾರತ ಅನುಭವಿಸಿದ ಭಯೋತ್ಪಾದಕರ ದಾಳಿ ಸೇರಿದಂತೆ ಉಗ್ರರ ಉಪಟಳ ನಿಯಂತ್ರಣಕ್ಕೆ ಎಚ್ಚರಿಕೆಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಅಣ್ವಸ್ತ್ರವನ್ನು ಮೊದಲು ಪ್ರಯೋಗಿಸುವುದಿಲ್ಲ ಎಂಬ ನೀತಿಯನ್ನು ಬದಲಿಸುವ ಬಗ್ಗೆ ಮಾತಾಡಿದ್ದರು.
ಯಾವ್ಯಾವ ದೇಶದ ಬಳಿ ಎಷ್ಟೆಷ್ಟು ಅಣುಬಾಂಬ್‍ಗಳಿವೆ?
ಈ ವರ್ಷದ ಜನವರಿಯಲ್ಲಿ ಭಾರತದ ಪರಮಾಣು ಸಿಡಿತಲೆಗಳು 172 ರಷ್ಟಿದ್ದು, ಪಾಕಿಸ್ತಾನದ 170ರಷ್ಟಿದೆ ಎಂದು ವರದಿಯಾಗಿದೆ. ಭಾರತದ ಪರಮಾಣು ಶಸ್ತ್ರಾಗಾರದಲ್ಲಿ 2023 ರಲ್ಲಿ ಸಣ್ಣ ಪ್ರಮಾಣದ ಏರಿಕೆ ಕಂಡಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಹೊಸ ರೀತಿಯ ಪರಮಾಣು ಬಾಂಬ್‍ಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸಿವೆ. ಇನ್ನೂ ಚೀನಾದ ಪರಮಾಣು ಸಿಡಿತಲೆಗಳ ಸಂಖ್ಯೆಯು ಜನವರಿ 2023 ರಲ್ಲಿ 410 ರಿಂದ 2024 ರ ಜನವರಿಯಲ್ಲಿ 500ಕ್ಕೆ ಏರಿದೆ ಎಂದು SIPRI ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜನವರಿ 2024ರಲ್ಲಿ 12,121 ಪರಮಾಣು ಸಿಡಿತಲೆಗಳನ್ನು ಒಟ್ಟು ಜಾಗತಿಕ ದಾಸ್ತಾನುಗಳಲ್ಲಿ ಇರಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಅಂದಾಜು 2,100 ಅನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೇಲೆ ಕಾರ್ಯಾಚರಣೆಯ ಎಚ್ಚರಿಕೆಯ ಸ್ಥಿತಿಯಲ್ಲಿ ಇರಿಸಲಾಗಿದೆ. ಇಲ್ಲಿ ಬಹುತೇಕ ಎಲ್ಲವೂ ರಷ್ಯಾ ಹಾಗೂ ಅಮೆರಿಕ ಸೇರಿವೆ ಎಂದು ವರದಿ ಹೇಳಿದೆ. ಚೀನಾ ತನ್ನ ಕೆಲವು ಸಿಡಿತಲೆಗಳನ್ನು ಹೆಚ್ಚಿನ ಕಾರ್ಯಾಚರಣೆಗೆ ಸಿದ್ಧಪಡಿಸಿ ಇಟ್ಟಿದೆ ಎನ್ನಲಾಗಿದೆ.
ಯುಎಸ್ ಮತ್ತು ರಷ್ಯಾ ಬಗ್ಗೆ ಏನು?
ರಷ್ಯಾ ಮತ್ತು ಯುಎಸ್ ಒಟ್ಟಾಗಿ ಎಲ್ಲಾ ಪರಮಾಣು ಶಸ್ತ್ರಾಸ್ತ್ರಗಳ ಸುಮಾರು 90% ಹೊಂದಿದೆ ಎಂದು SIPRI ವರದಿ ಹೇಳಿದೆ. ಆತಂಕಕಾರಿ ಬೆಳವಣಿಗೆ ಎಂದರೆ, ಫೆಬ್ರವರಿ 2022 ರಲ್ಲಿ ಉಕ್ರೇನ್‍ನ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ಎರಡೂ ದೇಶಗಳಲ್ಲಿ ಪರಮಾಣು ಶಕ್ತಿಗಳ ಬಗ್ಗೆ ಪಾರದರ್ಶಕತೆ ಕುಸಿದಿದೆ ಎಂದು ವರದಿ ಸೇರಿಸಲಾಗಿದೆ.