ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ (DK Shivakumar) ಸಿಎಂ ಆಗಲು ಅವಕಾಶ ಮಾಡಿಕೊಡಬೇಕು ಎಂಬ ರಂಭಾಪುರಿ ಶ್ರೀಗಳ (Rambhapuri Shree) ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ರಂಭಾಪುರಿ ಶ್ರೀಗಳಿಗೂ ಅದಕ್ಕೂ ಏನು ಸಂಬಂಧ? ಅದು ಪಾರ್ಟಿಗೆ ಸಂಬಂಧಪಟ್ಟ ವಿಚಾರ. ಸ್ವಾಮೀಜಿಗಳಿಗೂ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧ ಇರುವುದಿಲ್ಲ. ಅವರ ಕಾರ್ಯವ್ಯಾಪ್ತಿ ಬೇರೆ ನಮ್ಮ ಕಾರ್ಯ ವ್ಯಾಪ್ತಿ ಬೇರೆ ಎಂದು ಟಾಂಗ್ ಕೊಟ್ಟರು.ಇದನ್ನೂ ಓದಿ: ಖಾಸಗಿ ಮೆಡಿಕಲ್ ಲಾಬಿಗೆ ಮಣಿದ ಸರ್ಕಾರ, ಹೈಕೋರ್ಟ್ ಆದೇಶ ಸ್ವಾಗತಾರ್ಹ: ಆರ್ ಅಶೋಕ್
ಸಿಎಂ ಆಯ್ಕೆ ಮಾಡುವುದು ಶಾಸಕರು ಮತ್ತು ಹೈಕಮಾಂಡ್. ಸ್ವಾಮೀಜಿಗಳು ಅವರ ಪರ ಹೇಳಿದರೆ, ಇವರೇ ಮುಂದುವರಿಯಬೇಕೆಂದು ಈ ಕಡೆ ಹತ್ತು ಜನ ಹೇಳುತ್ತಾರೆ. ಸಮಾಜ ಕಟ್ಟುವುದು, ಆಶೀರ್ವಾದ ಮಾಡುವುದು ಸ್ವಾಮೀಜಿಯವರ ಕೆಲಸ. ಈ ರೀತಿಯಾದ ಹೇಳಿಕೆಗಳನ್ನು ಸ್ವಾಮೀಜಿಗಳು ಕೊಡಬಾರದು. ಅವರಿಗೆ ಸಂಬಂಧಪಟ್ಟಿದ್ದಲ್ಲ ಎಂದರು.
ಇದೇ ವೇಳೆ ಗ್ಯಾರಂಟಿಗಳಿಂದ ಜನ ಸೋಮಾರಿ ಆಗುತ್ತಿದ್ದಾರೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಸರಿಯಾದ ಉತ್ತರ ಸಿಗಬೇಕಾದರೆ ಜನರನ್ನು ಕೇಳಬೇಕು. ನಮ್ಮ ಪಕ್ಷದ ಕಾರ್ಯಕ್ರಮವನ್ನು ನಾವು ಸಮರ್ಥನೆ ಮಾಡಿಕೊಳ್ಳುತ್ತೇವೆ. ಪಕ್ಷದವರು ತಮ್ಮ ಕಾರ್ಯಕ್ರಮಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಒಂದು ಸಾವಿರ ಜನರನ್ನು ಸಂದರ್ಶನ ಮಾಡಿದ್ರೆ ಉತ್ತರ ಸಿಗಲಿದೆ. ಪಕ್ಷ ನಿರ್ಧಾರ ನಾವು ಸಮರ್ಥನೆ ಮಾಡುತ್ತೇವೆ. ಆದರೆ ಜನರ ಉತ್ತರವೇ ಫೈನಲ್ ಎಂದು ಹೇಳಿದರು.ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರದಲ್ಲಿ ಗೊಂದಲ ಏಕೆ? ಹೈಕಮಾಂಡ್ ಏನೂ ಇಲ್ಲ ಅಂದಿದೆ: ಸತೀಶ್ ಜಾರಕಿಹೊಳಿ