ಬೆಂಗಳೂರು: ಮೈತ್ರಿಗೆ ಒಂದು ವರ್ಷವಾದ ಬಳಿಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಗ್ರಾಮ ವಾಸ್ತವ್ಯ ನೆನಪಾಗಿದೆ. ಈ ಮೂಲಕ ಕೇವಲ ಲೋಕಸಭೆ ಸೋಲಿನ ಡ್ಯಾಮೇಜ್ ಕಂಟ್ರೋಲ್‍ಗೆ ಮಾತ್ರ ಗ್ರಾಮವಾಸ್ತವ್ಯದ ಮೊರೆ ಹೋದ್ರಾ ಅಥವಾ ಇದರ ಹಿಂದೆ ಎಲೆಕ್ಷನ್ ತಯಾರಿ ಪ್ಲಾನ್ ಇದೆಯಾ ಅನ್ನೋ ಪ್ರಶ್ನೆಯೊಂದು ಇದೀಗ ಜನಸಾಮಾನ್ಯರನ್ನು ಕಾಡಿದೆ.
ಸಿಎಂ ಕುಮಾರಸ್ವಾಮಿಗೆ ಮಧ್ಯಂತರ ಚುನಾವಣೆಯ ಸುಳಿವು ಸಿಕ್ಕಿದ್ದು, ಮಧ್ಯಂತರ ಚುನಾವಣೆ ಯಾವಾಗ ಬೇಕಾದ್ರೂ ಬರಬಹುದಾ ಎಂಬ ಪ್ರಶ್ನೆ ಅವರನ್ನು ಕಾಡಿದೆ. ಅದಕ್ಕಾಗಿಯೇ ಸಿಎಂ ಮತ್ತೆ ಗ್ರಾಮವಾಸ್ತವ್ಯದ ಮೊರೆ ಹೋಗಿದ್ದಾರೆ ಎಂಬ ಚರ್ಚೆಗಳು ಆರಂಭಗೊಂಡಿವೆ.
Advertisement
Advertisement
ಮಧ್ಯಂತರ ಚುನಾವಣೆ ಬಂದು ಬಿಟ್ರೆ ಪಕ್ಷ, ಸಂಘಟನೆ, ಅಸ್ತಿತ್ವ ಎಲ್ಲವೂ ಕಷ್ಟವಾಗಲಿದೆ. ಲೋಕಸಭೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಜೊತೆ ಜೆಡಿಎಸ್ ಅನ್ನೂ ತಿರಸ್ಕರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ಬಂದ್ರೆ ಎದುರಿಸೋದು ಕಷ್ಟ. ಹೀಗಾಗಿ ಮಧ್ಯಂತರ ಚುನಾವಣೆ ಎದುರಿಸಲು ತಮ್ಮ ಹಳೇ ವರ್ಚಸ್ಸು ಬೇಕೇಬೇಕು ಎಂದು ಸಿಎಂ ಅಂದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಹಳೆಯ ವರ್ಚಸ್ಸು ಬೇಕು ಅಂದರೆ ಗ್ರಾಮವಾಸ್ತವ್ಯವೇ ಮಾಡಬೇಕು ಅನ್ನೋ ನಿರ್ಧಾರಕ್ಕೆ ಸಿಎಂ ಬಂದಿದ್ದು, ಗ್ರಾಮವಾಸ್ತವ್ಯದಿಂದ ಕುಮಾರಸ್ವಾಮಿ ಮತ್ತೆ ಶೈನ್ ಆಗ್ತಾರಾ ಅಥವಾ ಗ್ರಾಮವಾಸ್ತವ್ಯ ಸಿಎಂಗೆ ಹಳೇ ಇಮೇಜ್ ಮರಳಿ ತಂದು ಕೊಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.