Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರತಕ್ಕೆ ಬರಲಿದೆ ರಷ್ಯಾ ನೌಕಾಪಡೆ – ಏನಿದು ರಿಲೋಸ್‌ ಒಪ್ಪಂದ? ಭಾರತಕ್ಕೆ ಏನು ಲಾಭ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭಾರತಕ್ಕೆ ಬರಲಿದೆ ರಷ್ಯಾ ನೌಕಾಪಡೆ – ಏನಿದು ರಿಲೋಸ್‌ ಒಪ್ಪಂದ? ಭಾರತಕ್ಕೆ ಏನು ಲಾಭ?

Latest

ಭಾರತಕ್ಕೆ ಬರಲಿದೆ ರಷ್ಯಾ ನೌಕಾಪಡೆ – ಏನಿದು ರಿಲೋಸ್‌ ಒಪ್ಪಂದ? ಭಾರತಕ್ಕೆ ಏನು ಲಾಭ?

Public TV
Last updated: April 28, 2026 1:21 pm
Public TV
Share
4 Min Read
India Russia RELOS Agreement
SHARE

ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ಕೇವಲ ತಂತ್ರಜ್ಞಾನದಷ್ಟೇ ಅಲ್ಲ, ಐತಿಹಾಸಿಕವಾಗಿಯೂ ಮಹತ್ವದ್ದಾಗಿವೆ. ಈ ಎರಡು ದೇಶಗಳು ಹಲವು ದಶಕಗಳಿಂದ ಪರಸ್ಪರ ಸಹಕಾರ ಮತ್ತು ಸ್ನೇಹ ಬೆಳೆಸಿಕೊಂಡಿವೆ. ಭಾರತ ಮತ್ತು ರಷ್ಯಾ ನಡುವಿನ ದೀರ್ಘಕಾಲದ ಸ್ನೇಹಕ್ಕೆ ಈಗ ಮತ್ತೊಂದು ಆನೆ ಬಲ ಬಂದಂತಾಗಿದೆ. ಇರಾನ್‌, ಇಸ್ರೇಲ್‌, ಅಮೆರಿಕದ ಸಂಘರ್ಷದ ನಡುವೆ ಅಮೆರಿಕ ಪಾಕಿಸ್ತಾನಕ್ಕೆ ಹೆಚ್ಚು ಮಣೆ ಹಾಕಿದೆ. ಇದೇ ವೇಳೆ ಭಾರತ ರಷ್ಯಾದ ಜೊತೆ ರಿಲೋಸ್ ಒಪ್ಪಂದ ಜಾರಿ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದೆ.

ಇನ್ಮುಂದೆ ಭಾರತ ಮತ್ತು ರಷ್ಯಾದ ಮಿಲಿಟರಿ ಪಡೆಗಳು ಪರಸ್ಪರರ ಮಿಲಿಟರಿ ಬೇಸ್‌ಗಳನ್ನು ಇಂಧನ, ದುರಸ್ತಿ ಮತ್ತು ವಿಶ್ರಾಂತಿಗಾಗಿ ಬಳಸಿಕೊಳ್ಳಬಹುದು. ಇದು ಕೇವಲ ಸೈನಿಕ ಲಾಜಿಸ್ಟಿಕ್ಸ್ ವಿಷಯವಷ್ಟೇ ಅಲ್ಲ, ಭಾರತೀಯ ನೌಕಾಪಡೆಗೆ ಆರ್ಕ್ಟಿಕ್ ಪ್ರದೇಶದಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಸಿಕ್ಕಿರುವ ಅವಕಾಶ. ಹಾಗಾದ್ರೆ ಏನಿದು ರಿಲೋಸ್ ಒಪ್ಪಂದ? ಇದರಿಂದ ಭಾರತಕ್ಕೆ ಆಗುವ ಲಾಭಗಳೇನು? ರಷ್ಯಾಗೆ ಇದರಿಂದ ಆಗುವ ಅನುಕೂಲಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

Narendra Modi Putin

ಏನಿದು ರಿಲೋಸ್‌ ಒಪ್ಪಂದ?
ಕಳೆದ ವರ್ಷ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ಬಾರಿ ಭೇಟಿಯಾಗಿದ್ದರು. ಮೊದಲ ಬಾರಿ ಅವರು 2025ರ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ಭೇಟಿಯಾಗಿದ್ದು, ನಂತರ 2025ರ ಡಿಸೆಂಬರ್ ನಲ್ಲಿ ನವದೆಹಲಿಯಲ್ಲಿ ಮತ್ತೊಮ್ಮೆ ಸಭೆ ನಡೆಸಿದ್ದರು.

ಈ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಮಹತ್ವದ ಭೇಟಿಗೆ ಮುನ್ನ, ಭಾರತ ಮತ್ತು ರಷ್ಯಾ ಜಂಟಿಯಾಗಿ ಮಹತ್ವದ‌ ರಿಲೋಸ್ ಒಪ್ಪಂದವನ್ನು ಜಾರಿಗೆ ತಂದಿವೆ ಎಂದು ವರದಿಯಾಗಿದೆ.

ಭಾರತ ಮತ್ತು ರಷ್ಯಾ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಒಪ್ಪಂದ ಎಂದು ಪರಿಗಣಿಸಲ್ಪಡುವ Reciprocal Exchange of Logistics Support (RELOS) ಒಪ್ಪಂದಕ್ಕೆ ಉಭಯ ದೇಶಗಳು 2025ರ ಫೆಬ್ರವರಿಯಲ್ಲಿ ಸಹಿ ಹಾಕಿದ್ದು, ಅದು ಈಗ ಅಧಿಕೃತವಾಗಿ ಜಾರಿಯಾಗಿರುವುದಾಗಿ ವರದಿಯಾಗಿದೆ.

ಇತ್ತೀಚೆಗೆ, ಈ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಷ್ಯಾ ಬಿಡುಗಡೆ ಮಾಡಿದ್ದು, ಅದರ ಸ್ವರೂಪ ಮತ್ತು ಉದ್ದೇಶಗಳ ಬಗ್ಗೆ ಇನ್ನಷ್ಟು ಸ್ಪಷ್ಟ ಚಿತ್ರಣ ಒದಗಿಸಿದೆ. ಈ ಮಾಹಿತಿಯು ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಲಾಜಿಸ್ಟಿಕ್ಸ್ ಬೆಂಬಲವನ್ನು ವಿಸ್ತರಿಸುವಲ್ಲಿ ಮಹತ್ವದ್ದಾಗಿದೆ.

India Russia

ರಿಲೋಸ್‌ ಒಪ್ಪಂದ ಏನು ಹೇಳುತ್ತೆ?
ಈ ಒಪ್ಪಂದದ ಪ್ರಕಾರ, ಯಾವುದೇ ಸಂದರ್ಭದಲ್ಲೂ ಉಭಯ ದೇಶಗಳ ಭೂಭಾಗದಲ್ಲಿ ಗರಿಷ್ಠ 3,000 ಸೈನಿಕರನ್ನು, ಜೊತೆಗೆ 10 ವಿಮಾನಗಳು ಮತ್ತು 5 ಯುದ್ಧನೌಕೆಗಳನ್ನು ನಿಯೋಜಿಸಲು ಅವಕಾಶ ಕಲ್ಪಿಸಿದೆ. ಇದರಲ್ಲಿಯೂ ಪ್ರಮುಖವಾಗಿ, ಈ ಒಪ್ಪಂದವು ಪರಸ್ಪರ ಸೇನಾ ನೆಲೆಯ ಮೂಲಸೌಕರ್ಯಗಳನ್ನು ಅಧಿಕೃತವಾಗಿ ಬಳಸಲು ಅವಕಾಶವಿದೆ. ಇದರಲ್ಲಿ ಭೂಸೇನೆ ನೆಲೆ, ನೌಕಾಪಡೆ ಬಂದರುಗಳು ಮತ್ತು ವಾಯುನೆಲೆಗಳು ಸೇರಿದಂತೆ ವಿವಿಧ ರಕ್ಷಣಾ ಸೌಲಭ್ಯಗಳು ಸೇರಿವೆ.

ಜಾಗತಿಕ ರಕ್ಷಣಾ ಸಹಭಾಗಿತ್ವಗಳಲ್ಲಿ ಇಂತಹ ಲಾಜಿಸ್ಟಿಕ್ಸ್ ಒಪ್ಪಂದಗಳು ಹೊಸದೇನಲ್ಲ. ಆದರೆ ರಿಲೋಸ್ ಒಪ್ಪಂದದ ವ್ಯಾಪ್ತಿ ಮತ್ತು ಅದರಲ್ಲಿರುವ ವಿಧಿವಿಧಾನಗಳು ದ್ವಿಪಕ್ಷೀಯವಾಗಿ ಉಭಯ ದೇಶಗಳಿಗೂ ಹೆಚ್ಚಿನ ಅನುಕೂಲ ಒದಗಿಸಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.‌

ಭಾರತಕ್ಕೇನು ಲಾಭ?
ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಮೈಲಿಗಲ್ಲಾಗಿರುವ ಈ ಒಪ್ಪಂದವು ಪ್ರಮುಖವಾಗಿ ಹಿಂದೂ ಮಹಾಸಾಗರ ಮತ್ತು ಆರ್ಕ್ಟಿಕ್ ಪ್ರದೇಶದಲ್ಲಿ ಭಾರತದ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಈ ಒಪ್ಪಂದವು ಉಭಯ ದೇಶಗಳ ಸಶಸ್ತ್ರ ಪಡೆಗಳ ನಡುವಿನ ಕಾರ್ಯತಂತ್ರದ ಸಹಕಾರವನ್ನು ಮತ್ತಷ್ಟು ಬಲಪಡಿಸುವುದಲ್ಲದೆ, ಸಮುದ್ರದಲ್ಲಿ ಜಂಟಿ ಸಮರಭ್ಯಾಸಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

India Russia RELOS Agreement 2

ಭಾರತಕ್ಕೆ ತಂತ್ರಜ್ಞಾನದ ಬಲ:
ಭಾರತದ ದೃಷ್ಟಿಯಿಂದ, ಈ ಒಪ್ಪಂದವು ಜಾಗತಿಕ ಭೌಗೋಳಿಕ ರಾಜಕೀಯದಲ್ಲಿ ಹೆಚ್ಚುತ್ತಿರುವ ಮಹತ್ವವನ್ನು ಹೊಂದಿರುವ ಪ್ರದೇಶಗಳಲ್ಲಿ ತನ್ನ ತಂತ್ರಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸುವ ಅವಕಾಶವನ್ನು ಒದಗಿಸುತ್ತದೆ.

ವಿಶೇಷವಾಗಿ, ಆರ್ಕ್ಟಿಕ್ ಪ್ರದೇಶದಲ್ಲಿರುವ ರಷ್ಯಾದ ನೆಲೆಗಳಿಗೆ, ಮುಖ್ಯವಾಗಿ ಮುರ್ಮನ್ಸ್ಕ್ ಮತ್ತು ಉತ್ತರ ನೌಕಾಪಡೆಯ ಕೇಂದ್ರವಾದ ಸೇವೆರೋಮೋರ್ಸ್ಕ್ ಗೆ ಸುಗಮ ಪ್ರವೇಶ ಸಾಧ್ಯವಾಗಲಿದೆ. ಇದರಿಂದ ಭಾರತಕ್ಕೆ ಸಮುದ್ರ ಹಾಗೂ ಇಂಧನ ಗಡಿಭಾಗದಲ್ಲಿ ತನ್ನ ಸೇನಾ ಬಲವನ್ನು ಬಲಪಡಿಸಲು ಸಹಾಯಕವಾಗುತ್ತದೆ.

ಎರಡನೆಯದಾಗಿ, ಯುದ್ಧನೌಕೆಗಳಿಗೆ ಇಂಧನ ಮರುಪೂರಣ ಮತ್ತು ದುರಸ್ತಿ ಸೌಲಭ್ಯಗಳು ಪರಸ್ಪರ ದೇಶಗಳಲ್ಲಿ ಲಭ್ಯವಾಗುವುದರಿಂದ ಕಾರ್ಯಾಚರಣೆಯ ವೆಚ್ಚ ಕಡಿಮೆಯಾಗುತ್ತದೆ ಮತ್ತು ತುರ್ತು ಸಂದರ್ಭಗಳಲ್ಲಿ ಸಮಯದ ಉಳಿತಾಯವಾಗುತ್ತದೆ.

ಮೂರನೆಯದಾಗಿ, ಇದು ಉಭಯ ದೇಶಗಳ ನಡುವೆ ಜಂಟಿ ಮಿಲಿಟರಿ ಸಮರಭ್ಯಾಸಗಳು ಸುಗಮಗೊಳಿಸುತ್ತದೆ ಮತ್ತು ರಕ್ಷಣಾ ತಂತ್ರಜ್ಞಾನ ಹಾಗೂ ಮಾಹಿತಿಯ ವಿನಿಮಯಕ್ಕೆ ವೇದಿಕೆಯನ್ನು ಕಲ್ಪಿಸುತ್ತದೆ. ಒಟ್ಟಾರೆಯಾಗಿ, ಈ ಒಪ್ಪಂದವು ಜಾಗತಿಕ ಮಟ್ಟದಲ್ಲಿ ಭಾರತದ ಕಾರ್ಯತಂತ್ರದ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಪ್ರಮುಖ ಕಡಲ ಮಾರ್ಗಗಳಲ್ಲಿ ಭದ್ರತೆಯನ್ನು ಕಾಪಾಡಲು ಪೂರಕವಾಗಿ ನಿಲ್ಲುತ್ತದೆ ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯ.

India Russia RELOS Agreement 1

ರಷ್ಯಾಕ್ಕಾಗುವ ಲಾಭವೇನು?
ಮಾಸ್ಕೋವಿನ ದೃಷ್ಟಿಯಲ್ಲಿ,ಈ ಒಪ್ಪಂದವು ವಿಭಿನ್ನವಾಗಿದ್ದರೂ ಸಮಾನವಾಗಿ ಮಹತ್ವದ ಲಾಭವನ್ನು ಒದಗಿಸುತ್ತದೆ. ಈ ಒಪ್ಪಂದದ ಮೂಲಕ ರಷ್ಯಾಗೆ ಭಾರತೀಯ ಮಹಾಸಾಗರ ಪ್ರದೇಶದಲ್ಲಿ (IOR) ಇರುವ ಸೌಲಭ್ಯಗಳಿಗೆ ಕಡಿಮೆ ವೆಚ್ಚದಲ್ಲಿ ಲಾಜಿಸ್ಟಿಕ್ಸ್ ಪ್ರವೇಶ ಸಾಧ್ಯವಾಗಲಿದೆ. ಇದರಲ್ಲಿ ರಷ್ಯಾದ ನೌಕಾಪಡೆಯ ನಿಯೋಜನೆಗಳಿಗೆ ಅಗತ್ಯವಿರುವ ಇಂಧನ ಮರುಪೂರಣ, ದುರಸ್ತಿ ಮತ್ತು ಪೂರೈಕೆ ಸೌಲಭ್ಯಗಳು ಸೇರಿವೆ.

ಈ ವ್ಯವಸ್ಥೆಯಿಂದ ವಿದೇಶಿ ನೆಲೆಗಳನ್ನು ಸ್ಥಾಪಿಸಲು ಅಗತ್ಯವಿರುವ ಭಾರಿ ಹೂಡಿಕೆಯನ್ನು ತಪ್ಪಿಸಲು ರಷ್ಯಾಕ್ಕೆ ಸಾಧ್ಯವಾಗುತ್ತದೆ. ಇದಲ್ಲದೆ, ವಿದೇಶಗಳಲ್ಲಿ ಶಾಶ್ವತ ಸೈನಿಕ ನೆಲೆಗಳನ್ನು ನಿರ್ಮಿಸುವುದು ಸಾಮಾನ್ಯವಾಗಿ ಜಾಗತಿಕ ರಾಜಕೀಯ ವಿರೋಧಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಈ ಒಪ್ಪಂದವು ರಷ್ಯಾಗೆ ಆರ್ಥಿಕ ಹಾಗೂ ರಾಜಕೀಯವಾಗಿ ಸಹ ಸೂಕ್ತವಾದ ಪರ್ಯಾಯ ನೆಲೆಯನ್ನು ಒದಗಿಸುತ್ತದೆ.

ರಷ್ಯಾ-ಭಾರತ ರಿಲೋಸ್‌ ಒಪ್ಪಂದ ಹಲವು ವರ್ಷಗಳಿಂದ ಪ್ರಗತಿಯಲ್ಲಿತ್ತು. 2019ರಲ್ಲಿ ರಷ್ಯಾದ ವ್ಲಾಡಿವೊಸ್ತೋಕ್‌ನಲ್ಲಿ ನಡೆದ ಈಸ್ಟರ್ನ್‌ ಎಕನಾಮಿಕ್‌ ಫೋರಂನಲ್ಲಿ ಪ್ರಧಾನಿ ಮೋದಿ ಭಾಗವಹಿಸಲು ತೆರಳಿದ್ದ ವೇಳೆ ಈ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಆದರೆ ಹಲವು ವಿಳಂಬಗಳ ಪರಿಣಾಮವಾಗಿ ನವದೆಹಲಿ ಮತ್ತು ಮಾಸ್ಕೋ ಒಪ್ಪಂದದ ಕರಡಿಗೆ 2025ರ ಜೂನ್‌ ತಿಂಗಳಲ್ಲಿ ಅನುಮೋದನೆ ನೀಡಿತ್ತು. 2025ರ ಡಿಸೆಂಬರ್‌ 3ರಂದು ರಷ್ಯಾ ಈ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕಿತು. ಭಾರತ ಹಿಂದೆಯೂ ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌, ಜಪಾನ್‌, ಆಸ್ಟ್ರೇಲಿಯಾ, ಫ್ರಾನ್ಸ್‌ ಸಿಂಗಾಪುರ ದಕ್ಷಿಣ ಕೊರಿಯಾ ಸೇರಿದಂತೆ ಹಲವು ದೇಶಗಳೊಡನೆ ಈ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದೆ.

TAGGED:indiaMilitarynarendra modiRELOS AgreementrussiaVladimir putin
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

soraba bjp worker
Crime

ಶಿವಮೊಗ್ಗದ ಸೊರಬದಲ್ಲಿ ಬಿಜೆಪಿ ಮುಖಂಡನ ಪತ್ನಿ ನೇಣಿಗೆ ಶರಣು – ಪತಿ ಬಂಧನ

Public TV
By Public TV
7 hours ago
Donovan Ferreira
Cricket

ಪಂಜಾಬ್‌ ಗೆಲುವಿನ ಓಟಕ್ಕೆ ಬ್ರೇಕ್‌ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ

Public TV
By Public TV
8 hours ago
Apekshaben Sonis victory
Latest

100% ಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಗೆ ಗೆಲುವು

Public TV
By Public TV
8 hours ago
Dharwad Suicide
Dharwad

ಧಾರವಾಡ | ಮರ್ಯಾದೆಗೆ ಅಂಜಿ ವಿದ್ಯಾರ್ಥಿ ನೇಣಿಗೆ ಶರಣು

Public TV
By Public TV
9 hours ago
gundlupet inspector safari
Chamarajanagar

ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ

Public TV
By Public TV
10 hours ago
supreme Court 1
Court

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿಯಮಗಳಿರಬೇಕು, ಅರಾಜಕತೆ ಇರಬಾರದು – ಶಬರಿಮಲೆ ಕೇಸ್‌ನಲ್ಲಿ ಸುಪ್ರೀಂ ಅಭಿಪ್ರಾಯ

Public TV
By Public TV
11 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?