ನವದೆಹಲಿ: ಭಾರತವು ಹಿಂದೂ ಬೆಳವಣಿಗೆ ದರದ (Hindu Rate of Growth) ಅಪಾಯಕ್ಕೆ ಹತ್ತಿರದಲ್ಲಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ (Former RBI Governor Raghuram Rajan) ಹೇಳಿದ್ದು ಈಗ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕತೆ (Indian Economy) ಹಿಂದೂ ಬೆಳವಣಿಗೆ ದರದ ಅಪಾಯದಲ್ಲಿದೆ. ಇದೊಂದು ಎಚ್ಚರಿಕೆಯ ಗಂಟೆಯಾಗಿದ್ದು ಕ್ರಮಕ್ಕೆ ಮುಂದಾಗಬೇಕು ಎಂದಿದ್ದಾರೆ.
Advertisement
2022ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ (GDP) ಶೇ.4.4 ಬೆಳವಣಿಗೆ ಸಾಧಿಸಿತ್ತು. ಈ ಮಂದಗತಿಯನ್ನು “ಹಿಂದೂ ಬೆಳವಣಿಗೆ ದರ” ಎಂಬ ಹಳೆಯ ಪರಿಕಲ್ಪನೆಯೊಂದಕ್ಕೆ ಹೋಲಿಸಿ ರಘುರಾಮ್ ರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಆಯುರ್ವೇದ ಪಥ್ಯ; 22 ಕೆಜಿ ತೂಕ ಕಡಿಮೆ ಮಾಡಿಕೊಂಡ ಕೇಂದ್ರ ಸಚಿವ
Advertisement
Advertisement
ಖಾಸಗಿ ವಲಯದಲ್ಲಿ ಹೂಡಿಕೆ ಮುಗ್ಗರಿಸಿದ್ದು ಆರ್ಥಿಕ ಬೆಳವಣಿಗೆ (Economy Growth) ನಿರಂತರ ಕುಸಿಯುತ್ತಿದೆ. ಆರ್‌ಬಿಐ (RBI) ಈಗಲೂ ಬಡ್ಡಿ ದರ ಏರಿಸುತ್ತಿದೆ. ಜಾಗತಿಕ ಬೆಳವಣಿಗೆ ಈ ವರ್ಷವೂ ಮಂದಗತಿಯಲ್ಲಿ ಮುಂದುವರಿಯುವ ಲಕ್ಷಣ ಇದೆ. ಇದು ಹೆಚ್ಚಿನ ವೇಗ ಪಡೆಯಲಿದೆ ಎಂಬ ಬಗ್ಗೆ ನನಗೆ ಯಾವುದೇ ಖಚಿತತೆ ಕಾಣುತ್ತಿಲ್ಲ. ಇದು ನನ್ನ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
Advertisement
ಏನಿದು ಹಿಂದೂ ಬೆಳವಣಿಗೆ ದರ?
ದೆಹಲಿ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಪಾಠ ಮಾಡುತ್ತಿದ್ದ ಆರ್ಥಿಕ ತಜ್ಞ ರಾಜ್ ಕೃಷ್ಣ 1978ರಲ್ಲಿ ಹಿಂದೂ ರೇಟ್ ಆಫ್ ಗ್ರೋಥ್ ಪದವನ್ನು ಮೊದಲ ಬಾರಿಗೆ ಪರಿಚಯಿಸಿದ್ದರು. ಭಾರತವು 1950-1980ರ 30 ವರ್ಷಗಳಲ್ಲಿ ಕಡಿಮೆ ಆರ್ಥಿಕ ಬೆಳವಣಿಗೆ ದರವನ್ನು ದಾಖಲಿಸಿತ್ತು. ಸರಾಸರಿ ಶೇ.4 ಕ್ಕಿಂತ ಕಡಿಮೆ ಜಿಡಿಪಿ ಬೆಳವಣಿಗೆಯಾಗಿತ್ತು. ದೀರ್ಘಕಾಲ ಶೇ.3.5 ಕ್ಕಿಂತ ಕಡಿಮೆ ಜಿಡಿಪಿ ಬೆಳವಣಿಗೆ ದಾಖಲಾದರೆ ಅದನ್ನು ಹಿಂದೂ ಗ್ರೂಪ್ ರೇಟ್ ಎಂದು ಕರೆಯುವ ಪರಿಪಾಠ ಆರಂಭವಾಗಿತ್ತು.