ಕೊರೊನಾ ವೈರಸ್, ಎಂಪಾಕ್ಸ್ ಸೇರಿದಂತೆ ವಿವಿಧ ವೈರಸ್‌ಗಳು ಜಗತ್ತಿನಾದ್ಯಂತ ಹೆಚ್ಚಾಗುತ್ತಿವೆ. ದಿನ ಕಳೆದಂತೆ ಜನರು ಹೊಸ ಹೊಸ ಕಾಯಿಲೆಗೆ ತುತ್ತಾಗುತ್ತಲೇ ಇದ್ದಾರೆ. ಆ ಪಟ್ಟಿಗೆ ಈಗ ಅಪಾಯಕಾರಿ ಮಾರ್ಬರ್ಗ್ ವೈರಸ್ (Marburg Virus) ಕೂಡ ಸೇರಿದೆ. ಆಫ್ರಿಕಾದ (Africa) ರುವಾಂಡದಲ್ಲಿ (Rwanda) ಸೆಪ್ಟೆಂಬರ್ ಅಂತ್ಯದಲ್ಲಿ ಮಾರ್ಬರ್ಗ್ ವೈರಸ್‌ಗೆ 11 ಮಂದಿ ಸಾವನ್ನಪ್ಪಿದ್ದು, 49 ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ರುವಾಂಡದ ಆರೋಗ್ಯ ಸಚಿವರು ತಿಳಿಸಿದ್ದಾರೆ. ಹಾಗಿದ್ರೆ ಏನಿದು ಮಾರ್ಬರ್ಗ್ ವೈರಸ್? ರೋಗಲಕ್ಷಣಗಳೇನು ಎಂಬುದನ್ನು ನೋಡೋಣ.
ಮಾರ್ಬರ್ಗ್ ವೈರಸ್ ಎಂದರೇನು?
ಮಾರ್ಬರ್ಗ್ ವೈರಸ್ ಅನ್ನು ಹೆಮರಾಜಿಕ್ ಜ್ವರ (Haemorrhagic Fever) ಅಂತಲೂ ಕರೆಯಲಾಗುತ್ತದೆ. ಈ ಸಾಂಕ್ರಾಮಿಕ ರೋಗವು ಬಾವಲಿಗಳಿಗೆ ಮೊದಲು ಹರಡಿ ನಂತರ ಮನುಷ್ಯರಿಗೂ ಹರಡುತ್ತದೆ. ನಂತರ ರೋಗಿಯ ಸಂಪರ್ಕದಲ್ಲಿರುವ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ರೋಗ ಇದಾಗಿದೆ. ಇದರಿಂದ ಶೇಕಡಾ 88ರಷ್ಟು ಸಾಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
Advertisement
ಮಾರ್ಬರ್ಗ್ ರೋಗ ಹೆಚ್ಚಿನ ಸೋಂಕುಕಾರಕ ಕಾಯಿಲೆಯಾಗಿದ್ದು, ಸದ್ಯ ಆಫ್ರಿಕಾ ದೇಶದ ಜನರನ್ನು ಅಲ್ಲಿನ ಸರ್ಕಾರ ಎಚ್ಚರವಾಗಿರುವಂತೆ ಹೇಳಿದೆ ಮತ್ತು ಇದಕ್ಕೆ ತಕ್ಕಂತಹ ತ್ವರಿತ ಕಾರ್ಯವಿಧಾನಗಳನ್ನು ಅನುಸರಿಸಿದೆ.
Advertisement
Advertisement
ಮಾರ್ಬರ್ಗ್ ರೋಗ ಹೇಗೆ ಹರಡುತ್ತದೆ?
ಎಬೋಲಾದಂತೆ, ಮಾರ್ಬರ್ಗ್ ವೈರಸ್ ಬಾವಲಿಗಳಲ್ಲಿ ಹುಟ್ಟುತ್ತದೆ ಮತ್ತು ಸೋಂಕಿತ ಜನರೊಂದಿಗೆ ಯಾರು ಸಂಪರ್ಕದಲ್ಲಿರುತ್ತಾರೆ ಅವರ ಆರೈಕೆಯಲ್ಲಿರುವವರಿಗೆ ಹರಡುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ.
Advertisement
ಮಾರ್ಬರ್ಗ್ ಅನ್ನು ಮೊದಲ ಬಾರಿಗೆ 1967 ರಲ್ಲಿ ಗುರುತಿಸಲಾಯಿತು. ಜರ್ಮನಿಯ ಮಾರ್ಬರ್ಗ್ ಮತ್ತು ಫ್ರಾಂಕ್‌ಫರ್ಟ್ ಮತ್ತು ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ಏಕಕಾಲದಲ್ಲಿ ಕಾಣಿಸಿಕೊಂಡ ಈ ವೈರಸ್ ಆಫ್ರಿಕನ್ ಹಸಿರು ಉಗಾಂಡಾ ಕೋತಿಗಳಿಗೆ ಸಂಬಂಧಿಸಿದೆ. ಆ ಸಮಯದಲ್ಲಿ 31 ಪ್ರಕರಣಗಳು ಮತ್ತು ಏಳು ಸಾವುಗಳು ವರದಿಯಾಗಿದೆ.
ಅಂಗೋಲಾ, ಕಾಂಗೋ, ಕೀನ್ಯಾ, ದಕ್ಷಿಣ ಆಫ್ರಿಕಾ ಮತ್ತು ಉಗಾಂಡಾ ಸೇರಿ ಹಲವು ಆಫ್ರಿಕನ್ ದೇಶಗಳಲ್ಲಿ ಇದನ್ನು 1967ರಲ್ಲಿ ಗುರುತಿಸಲಾಯಿತು. ಮಾರ್ಬರ್ಗ್ ವೈರಸ್ ಇರುವ ವ್ಯಕ್ತಿಯು ಹೆಮರಾಜಿಕ್ ಜ್ವರಕ್ಕೆ ತುತ್ತಾಗುತ್ತಾನೆ.
ಎಬೋಲಾದಂತೆ ಮಾರ್ಬರ್ಗ್ ವೈರಸ್ ಸಹ ಬಾವಲಿಗಳಿಂದ ಮೂಲಸ್ಥಾನ ಪಡೆದಿದ್ದು, ಜನರ ನಡುವೆ ಹರಡಲು, ಅವರ ದೇಹದ ದ್ರವ, ಯಾವುದಾದರೂ ಮೇಲ್ಮೈ ಪ್ರದೇಶ ಅಥವಾ ಸೋಂಕು ಈಗಾಗಲೇ ಹರಡಿಕೊಂಡಿರುವ ಬೆಡ್ ಶೀಟ್ ಈ ತರಹದ ವಸ್ತುಗಳನ್ನು ಉಪಯೋಗಿಸಿ ಕೊಳ್ಳುತ್ತದೆ.
ಮಾರ್ಬರ್ಗ್ ಕಾಯಿಲೆಯ ಲಕ್ಷಣಗಳು:
ತೀವ್ರ ಜ್ವರದಿಂದ ಬಳಲುವುದು ಮಾರ್ಬರ್ಗ್ ವೈರಸ್ನ ಮೊದಲ ಲಕ್ಷಣ. ಜೊತೆಗೆ ತಲೆನೋವು, ಸುಸ್ತು ಮುಂತಾದ ಲಕ್ಷಣಗಳನ್ನು ಕಾಣಬಹುದು. ಅನೇಕ ರೋಗಿಗಳಲ್ಲಿ ಏಳು ದಿನಗಳಲ್ಲಿ ತೀವ್ರವಾದ ರಕ್ತಸ್ರಾವದ ಲಕ್ಷಣಗಳನ್ನು ಕೂಡ ಕಾಣಬಹುದು.
ಈ ವೈರಸ್ ಬಾವಲಿಗಳ ಮೂಲಕ ಮನುಷ್ಯರಿಗೆ ತಗುಲುತ್ತದೆ ಹಾಗೂ ಮನುಷ್ಯರಿಂದ ಮನುಷ್ಯರಿಗೆ ರಕ್ತ, ಸಲೈವಾ ಸೇರಿದಂತೆ ದೇಹದ ದ್ರವಗಳಿಂದ ಹರಡುತ್ತದೆ. ಸೋಂಕಿತ ವ್ಯಕ್ತಿಗೆ ಅತಿಯಾದ ತಲೆ ನೋವು, ಜ್ವರ, ಮಾಂಸ ಖಂಡಗಳಲ್ಲಿ ನೋವಿನ ಜೊತೆಗೆ ರಕ್ತ ವಾಂತಿ ಆಗುತ್ತದೆ. ರೋಗ ಲಕ್ಷಣಗಳು ತೀವ್ರವಾದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಎಬೋಲಾ ಸೋಂಕಿತರಲ್ಲಿ ಕಾಣಿಸುವ ರೀತಿಯಲ್ಲೇ ಜ್ವರ ಮತ್ತು ರಕ್ತಸ್ರಾವವು ಉಂಟಾಗುತ್ತದೆ. ಆದರೆ, ಎಬೋಲಾಗೂ ಮಾರ್ಬರ್ಗ್ ವೈರಸ್‌ಗೂ ವ್ಯತ್ಯಾಸವಿದೆ. ಸೋಂಕಿತ ವ್ಯಕ್ತಿ ಅಥವಾ ಪ್ರಾಣಿ ದೇಹದ ದ್ರವಗಳ ಮೂಲಕ ಮತ್ತೊಬ್ಬರಿಗೆ ಈ ವೈರಸ್ ಸುಲಭವಾಗಿ ಹರಡುತ್ತದೆ. ಸೋಂಕು ತಗುಲಿದ ಎರಡರಿಂದ 21 ದಿನಗಳಲ್ಲಿ ದೇಹದಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
ಮಾರ್ಬರ್ಗ್ ಕಾಯಿಲೆಗೆ ಚಿಕಿತ್ಸೆ ಏನು?
ಮಾರ್ಬರ್ಗ್ ಕಾಯಿಲೆಗೆ ಸದ್ಯಕ್ಕೆ ಯಾವುದೇ ಅನುಮೋದಿತ ಚಿಕಿತ್ಸೆಗಳಿಲ್ಲ. CDCಯ ಪ್ರಕಾರ ಚಿಕಿತ್ಸೆಯ ಆಯ್ಕೆಗಳನ್ನು ಬೆಂಬಲ ಆರೈಕೆಗೆ ನಿರ್ಬಂಧಿಸಲಾಗಿದೆ. ಇದು ಸಾಕಷ್ಟು ನಿದ್ರೆ ಪಡೆಯುವುದು, ರಕ್ತದೊತ್ತಡ ಮತ್ತು ಆಮ್ಲಜನಕದ ಮಟ್ಟವನ್ನು ನಿಯಂತ್ರಿಸುವುದು ಮತ್ತು ಯಾವುದೇ ದ್ವಿತೀಯಕ ಸೋಂಕುಗಳಿಗೆ ಚಿಕಿತ್ಸೆ ನೀಡುವುದನ್ನು ಒಳಗೊಂಡಿರುತ್ತದೆ.
ಮಾರ್ಬರ್ಗ್ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಈವರೆಗೂ ಅಭಿವೃದ್ಧಿ ಪಡಿಸಲಾಗಿಲ್ಲ. ಆದರೆ, ಸಾಕಷ್ಟು ನೀರು ಕುಡಿಯುವುದು ಹಾಗೂ ನಿರ್ದಿಷ್ಟ ಲಕ್ಷಣಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ.
ಬಾವಲಿಗಳು ಹೆಚ್ಚಾಗಿ ಸಂಚರಿಸುವ, ಬದುಕುವ ಗುಹೆಗಳ ಬಳಿಗೆ ಹೋಗದಂತೆ ರುವಾಂಡನ್ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಎಲ್ಲ ಮಾಂಸ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿ ಸೇವಿಸುವಂತೆ ತಿಳಿಸಲಾಗಿದೆ. 2005ರಲ್ಲಿ ಅಂಗೋಲಾದಲ್ಲಿ ಮಾರ್ಬರ್ಗ್‌ನಿಂದಾಗಿ 200 ಜನರು ಸಾವಿಗೀಡಾಗಿದ್ದರು.