ಕರ್ನಾಟಕಕ್ಕೆ ಹೆಚ್‌ಡಿಕೆ, ಜೋಶಿ ಕೊಡುಗೆ ಏನು? ಚರ್ಚೆಗೆ ಬರಲಿ: ಪ್ರದೀಪ್ ಈಶ್ವರ್ ಪಂಥಾಹ್ವಾನ

Public TV
2 Min Read
Pradeep Eshwar

– 1 ವರ್ಷದಿಂದ ಏನ್ ಕಡಿದು ಕಟ್ಟೆ ಹಾಕಿದ್ದೀರಾ ಅಂತ ಲೇವಡಿ

ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹಾಗೂ ಹೆಚ್.ಡಿ ಕುಮಾರಸ್ವಾಮಿಯವರ (HD Kumarswamy) ಕೊಡುಗೆ ಏನು? ಇಬ್ಬರಿಗೂ ಆತ್ಮಸಾಕ್ಷಿಯಿದ್ದರೆ ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಕೇಂದ್ರ ಸಚಿವರಿಗೆ ಪಂಥಾಹ್ವಾನ ನೀಡಿದ್ದಾರೆ.

1 ವರ್ಷದಿಂದ ಏನ್ ಕಡೆದು ಕಟ್ಟೆ ಹಾಕಿದ್ದೀರಾ?
ವಿಧಾನಸೌಧದಲ್ಲಿ ಮಾತನಾಡಿದ ಅವರು, NDA ಎಂದರೆ ನೇಷನ್ ಡೆಸ್ಟ್ರಾಯ್ ಅಲಾಯನ್ಸ್. ಕೇಂದ್ರ ಸಚಿವ ಜೋಶಿ ಮತ್ತು ಕುಮಾರಸ್ವಾಮಿಗೆ ರಾಜ್ಯದ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಕಳೆದ 1 ವರ್ಷದಿಂದ ನೀವು ಇಬ್ಬರು ಕೇಂದ್ರದಲ್ಲಿ ಏನ್ ಕಡಿದು ಕಟ್ಟೆ ಹಾಕಿದ್ದೀರಾ? ಉತ್ತರ ಕೊಡಿ. ಆತ್ಮಸಾಕ್ಷಿ ಇದ್ದರೆ ಬಹಿರಂಗ ಚರ್ಚೆ ಇಬ್ಬರು ಬರಲಿ ಎಂದರು.ಇದನ್ನೂ ಓದಿ: ಬೆಂಗಳೂರು | ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಅಕ್ಷಯ್ ಸಾವು

ಕೇಂದ್ರ ಸರ್ಕಾರ (Central Government) ಏನು ಮಾಡಿದೆ ಎಂದು ತಿಳಿಯುವ ಕುತೂಹಲವಿದೆ. ನಮ್ಮ ರಾಜ್ಯ ಸರ್ಕಾರ 2 ವರ್ಷ ಏನು ಮಾಡಿದೆ ಎಂದು ನಾನು ಹೇಳುತ್ತೇನೆ. ಮೊದಲು ನೀವು ರಾಜ್ಯಕ್ಕೆ ಏನು ಮಾಡಿದ್ದೀರಾ ಹೇಳಿ? ನಮ್ಮ ಸರ್ಕಾರದ ಎಲ್ಲಾ ಸಚಿವರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ನಾವು ಪ್ರತಿಭಟನೆ ಮಾಡಿದ್ದೇವೆ. ಆದರೂ ಕೇಂದ್ರ ನಮಗೆ ಏನ್ ಕೊಡ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿದ್ದಾರೆ ಎಂದ ಮೇಲೆ ಅವರಿಗೆ ಜವಾಬ್ದಾರಿ ಇದೆ. ಏನಾದ್ರು ಮಾತಾಡಿದ್ರೆ ಆಪರೇಷನ್ ಸಿಂಧೂರ ಅಂತಾರೆ. ಮೋದಿ ಅಂತಾರೆ. ನಿಮ್ಮ ರಿಪೋರ್ಟ್ ಏನು? ರಾಜ್ಯಕ್ಕೆ ಕೊಡುಗೆ ಏನು? ಬಹಿರಂಗಪಡಿಸಿ ಎಂದು ಆಗ್ರಹಿಸಿದರು.

ರಾಜ್ಯದಿಂದ ಭದ್ರಾ ಮೇಲ್ಡಂಡೆ, ಕೃಷ್ಡ ಮೇಲ್ಡಂಡೆ ಮಾಡಿ, ಬೇಡಿಕೆ ಈಡೇರಿಸಿದ್ದೇವೆ. ಯಾಕೆ ಹಣ ಕೊಡಲಿಲ್ಲ? ಕೇಂದ್ರದ ಎಲ್ಲಾ ಅನುದಾನ ರಾಜ್ಯಕ್ಕೆ ಕಡಿಮೆಯಾಗಿದೆ. ತೆರಿಗೆ ಪಾಲು ಸರಿಯಾಗಿ ಕೊಡ್ತಿಲ್ಲ. ಜಾಸ್ತಿ ಪಾಲು ಕೊಡಬೇಕು. ಕುಮಾರಸ್ವಾಮಿ, ಜೋಶಿ ಚರ್ಚೆಗೆ ಬರಲಿ. ನಾನು ಚರ್ಚೆಗೆ ಸಿದ್ಧ. ಕುಮಾರಸ್ವಾಮಿ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ಕೊಡ್ತೀನಿ. ಒಂದು ವರ್ಷದಿಂದ ರಾಜ್ಯಕ್ಕೆ ಏನ್ ಕೊಟ್ಟಿದ್ದೀರಾ ಹೇಳಿ. ಬಹಿರಂಗ ಚರ್ಚೆಗೆ ಜೋಶಿ, ಕುಮಾರಸ್ವಾಮಿ ಬರಲಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಡಾಲಿ, ಶಿವಣ್ಣ

Share This Article