ಕೋಟಿ ಕೋಟಿ ಕಾಸು ಕಂಡರೆ ಸಾಕು ಎಂಥ ಕತೆಗೂ ಪ್ರಭಾಸ್ (Prabhas) ಎದ್ದು ನಿಲ್ಲುತ್ತಾರಾ? ಹಣದ ಮುಂದೆ ಬೇರೇನೂ ನೋಡಲ್ಲವಾ ಡಾರ್ಲಿಂಗ್? ಕಮ್ಮಿ ಡೇಟ್ಸು, ಕೋಟಿ ಡ್ರೈ ಫ್ರೂಟ್ಸು ಸಿಕ್ಕಿದ್ದಕ್ಕೇ ಆದಿಪುರುಷ್ ಒಪ್ಪಿಕೊಂಡು ಇಂದು ಆಕಾಶ ನೋಡುತ್ತಿದ್ದಾರಾ? ಪ್ರಭಾಸ್ ಕಾಸು ಕರಿಮಣಿ ಸ್ಟೋರಿ ಇಲ್ಲಿದೆ.
Advertisement
ಆದಿಪುರುಷ (Adipurush) ಸಿನಿಮಾ ಕೇವಲ ಏಳು ದಿನಕ್ಕೆ ಎರಡು ನೂರಾ ಐವತ್ತು ಕೋಟಿ ಆಸುಪಾಸು ಗಳಿಸಿ ಗುರು ಗೋವಿಂದನ ಪಾದ ಸೇರಿದೆ. ಬೇಕಿತ್ತಾ ಇದೆಲ್ಲ ಪುಣ್ಯಾತ್ಮ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು. ಇನ್ನೊಂದು ಕಡೆ ಮುಖ ಸಪ್ಪಗೆ ಮಾಡಿಕೊಂಡಿರುವ ಫ್ಯಾನ್ಸ್ ಸೈಲೆಂಟ್ ಮೋಡ್ನಲ್ಲಿ ಮತ್ತಿನಲ್ಲಿದ್ದಾರೆ. ನಿರ್ದೇಶಕ ಓಂ ರಾವುತ್ ಕಾಣೆಯಾದವರ ಪಟ್ಟಿಗೆ ಸೇರಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಪ್ರಭಾಸ್ಗಿರುವ ಹಣದ ಮೋಹ ಎನ್ನುತ್ತಿದೆ ಟಾಲಿವುಡ್. ಅರವತ್ತು ದಿನ ಕಾಲ್ಶೀಟ್ಗೆ ನೂರೈವತ್ತು ಕೋಟಿ ಸುಮ್ಮನೆ ಮಾತಾ? ಇದನ್ನೂ ಓದಿ:ನಾದಬ್ರಹ್ಮ ಹಂಸಲೇಖಗೆ ಪದ್ಮಶ್ರೀ ಕೊಡಿ : ನಿರ್ದೇಶಕ ಶಶಾಂಕ್ ಮನವಿ
Advertisement
Advertisement
ಬಾಹುಬಲಿ ಸಿನಿಮಾಗಾಗಿ ಐದು ವರ್ಷ ಮುಡುಪಾಗಿಟ್ಟಿದ್ದರು ಪ್ರಭಾಸ್. ಯಾವಾಗ ಅದರಿಂದ ಪ್ಯಾನ್ ಇಂಡಿಯಾ ಪಟ್ಟ ದಕ್ಕಿತೋ ಮೆದುಳಿನಲ್ಲಿ ಮದರಂಗಿ ಕಿಸಿಯಿತು. ನೂರೈವತ್ತು ಕೋಟಿ ಕೊಟ್ಟರೆ ಸಾಕು. ಕತೆ, ನಿರ್ದೇಶಕ, ನಿರ್ಮಾಪಕ ಯಾವುದನ್ನೂ ನೋಡಲ್ಲ. ಕಾಲ್ಶೀಟ್ ಕೊಡೋದು, ಬ್ಯಾಂಕ್ ಬ್ಯಾಲೆನ್ಸ್ ದಿಂಬಿನ ಕೆಳಗಿಟ್ಟು ಮಲಗೋದು. ಇದನ್ನು ಮಾಡಿದ್ದಕ್ಕೆ ಆದಿಪುರುಷ ಒಪ್ಪಿಕೊಂಡರು. ಈಗ ಶ್ರೀರಾಮನೂ ನಡಿ ಅತ್ಲಾಗೆ ಎಂದ.
Advertisement
ಆದಿ ಪುರುಷ ಸಿನಿಮಾದ ಬಗ್ಗೆ ಪ್ರಭಾಸ್ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಷ್ಟೇ ಅಲ್ಲ, ವಿಶ್ವದಾದ್ಯಂತ ಸಖತ್ ಗಳಿಕೆ ಮಾಡಲಿದೆ ಎಂದು ಹೇಳಲಾಗಿತ್ತು. ವಿವಾದ, ಬೈಕಾಟ್ ನಡುವೆಯೇ ಮೊದಲೆರಡು ದಿನ ಚೆನ್ನಾಗಿಯೇ ಕಲೆಕ್ಷನ್ (Collection) ಮಾಡಿತು. ನಂತರ ಮಕಾಡೆ ಮಲಗಿಕೊಂಡಿದೆ. ಈ ಕಾರಣಕ್ಕಾಗಿ ಸಹಜವಾಗಿಯೇ ಪ್ರಭಾಸ್ ಅಭಿಮಾನಿಗಳಿಗೆ ಬೇಸರವಾಗಿದೆ.