ಇದು ಆಟೊಮ್ಯಾಟಿಕ್ ಕಾಲ. ನೀರಿನ ತೊಟ್ಟಿಯ ನೀರು ನಿಯಂತ್ರಣದಿಂದ ಹಿಡಿದು ವಿಮಾನ, ಮೆಟ್ರೋ ರೈಲು ವರೆಗೂ ಎಲ್ಲವೂ ಆಟೊಮ್ಯಾಟಿಕ್ ಆಗುತ್ತಿದೆ. ಆದರೆ ಈಗ ಸೆಲ್ಫ್ ಡ್ರೈವಿಂಗ್ ವಾಹನ ತಂತ್ರಜ್ಞಾನ ಹೆಚ್ಚು ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಎಲೋನ್ ಮಸ್ಕ್ (Elon Musk) ಚೀನಾಕ್ಕೆ ಭೇಟಿ ನೀಡಿರುವುದು. ಚೀನಾಗೆ ಅಚ್ಚರಿಯ ಭೇಟಿ ಕೊಟ್ಟಿರುವ ಮಸ್ಕ್, ಅಲ್ಲಿನ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ವಯಂಚಾಲಿತ ವಾಹನ ತಂತ್ರಜ್ಞಾನದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಚೀನಾವು ಜಾಗತಿಕ ಮಟ್ಟದಲ್ಲಿ 2ನೇ ಸ್ಥಾನದಲ್ಲಿದೆ. ಇಲ್ಲಿ ಟೆಸ್ಲಾ ಕಂಪನಿಯು ತನ್ನ ಸಂಪೂರ್ಣ ಸ್ವಯಂಚಾಲಿತ ವಾಹನ (Full Self-Driving) ತಂತ್ರಜ್ಞಾನ ಪರಿಚಯಿಸುವ ಸಾಧ್ಯತೆ ಇದೆ. ಅದಕ್ಕಾಗಿ ಮಸ್ಕ್ ಇಲ್ಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ತನ್ನ ಕಂಪನಿ ಮಾರುಕಟ್ಟೆ ವಿಸ್ತರಣೆಗಾಗಿ ಮಸ್ಕ್, ಚೀನಾದ ಪ್ರಧಾನಿ ಲೀ ಕಿಯಾಂಗ್ ಜೊತೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್!
Advertisement
Advertisement
ಸ್ವಯಂಚಾಲಿತ ವಾಹನ ತಂತ್ರಜ್ಞಾನ ಇಂದು ನಿನ್ನೆಯ ಮಾತಲ್ಲ. ಹತ್ತಾರು ವರ್ಷಗಳಿಂದ ತಂತ್ರಜ್ಞಾನದ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ದೈತ್ಯ ಕಂಪನಿಗಳು ಸಾಕಷ್ಟು ಪ್ರಯೋಗಗಳನ್ನೂ ನಡೆಸಿವೆ, ನಡೆಸುತ್ತಿವೆ. ಆ ಸಾಲಿನಲ್ಲಿ ಟೆಸ್ಲಾ ಕಂಪನಿ ಕೂಡ ಇದೆ. ಹಾಗಾದ್ರೆ ಸೆಲ್ಫ್ ಡ್ರೈವಿಂಗ್ ತಂತ್ರಜ್ಞಾನ ಹಿನ್ನೆಲೆ, ಅಭಿವೃದ್ಧಿ ಮತ್ತು ಸಾಧಕ-ಬಾಧಕಗಳೇನು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.
Advertisement
ಗೂಗಲ್ ಪ್ರಯೋಗ ವಿಫಲ
ಇದು 12 ವರ್ಷಗಳಷ್ಟು ಹಿಂದಿನ ಮಾತು. ಸ್ಟೀರಿಂಗ್ ಮತ್ತು ಪೆಡಲ್‌ಗಳೇ ಇಲ್ಲದ ಸೆಲ್ಫ್ ಡ್ರೈವಿಂಗ್ ವ್ಯವಸ್ಥೆಯನ್ನು ಗೂಗಲ್ ಅಭಿವೃದ್ಧಿಪಡಿಸಿತ್ತು. ಕಾರೊಂದಕ್ಕೆ ಅದನ್ನು ಅಳವಡಿಸಿ ಅಮೆರಿಕದಲ್ಲಿ ಪ್ರಾಯೋಗಿಕ ಚಾಲನೆ ನಡೆಸಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಸೆಲ್ಫ್ ಡ್ರೈವಿಂಗ್ ಕಾರು ಬಸ್‌ವೊಂದಕ್ಕೆ ತಾಗಿ ಮುಂದೆ ಸಾಗಿತ್ತು. ಹೀಗಾಗಿ ಪ್ರಯೋಗ ವಿಫಲವಾಯಿತು. ಇದನ್ನೂ ಓದಿ: ಮಸ್ಕ್‌ಗೆ ಭಾರತದ ಮಾರುಕಟ್ಟೆ ಮೇಲೇಕೆ ಕಣ್ಣು?
Advertisement
ವಿಮಾನ ಅಪಘಾತ
ಆಟೊಪೈಲಟ್‌ಗೆ ಮಿತಿ ಇದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದಿದೆ. ಬ್ರೆಜಿಲ್‌ನಿಂದ ಫ್ರಾನ್ಸ್‌ಗೆ ಹೊರಟಿದ್ದ ವಿಮಾನ ಅಟ್ಲಾಂಟಿಕ್ ಸಾಗರದಲ್ಲಿ ಪತನಗೊಂಡಿತ್ತು. ಪತನಕ್ಕೂ ಮುನ್ನ ಆಟೊಪೈಲಟ್ ಮೋಡ್‌ನಲ್ಲಿತ್ತು. ವಿಮಾನ ಆಟೊಪೈಲಟ್ ಮೋಡ್‌ನಲ್ಲಿದ್ದಾಗ ಸಂವೇದಕಗಳು ವೇಗದ ಪ್ರಮಾಣವನ್ನು ತಪ್ಪಾಗಿ ಗ್ರಹಿಸಿದ್ದವು. ವೇಗ ಹೆಚ್ಚಾದಾಗ ಆಟೋ ಪೈಲಟ್ ವ್ಯವಸ್ಥೆ ತಕ್ಷಣವೇ ಬಂದ್ ಆಗುತ್ತದೆ.
ಟೆಲ್ಸಾ ಕಾರಿಗೆ ಅಪಘಾತ!
ಇದೇ ಹೊತ್ತಿನಲ್ಲಿ ಅರೆ ಸ್ವಯಂಚಾಲಿತ ಟೆಕ್ನಾಲಜಿ ಇರುವ ಕಾರನ್ನು ಟೆಲ್ಸಾ ಬಿಡುಗಡೆ ಮಾಡಿತ್ತು. ಆಟೊಪೈಲಟ್ ಮೋಡ್‌ನಲ್ಲಿ ಚಲಿಸುತ್ತಿದ್ದ ಟೆಲ್ಸಾ ಕಾರಿನಲ್ಲಿದ್ದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದ. ಇಂತಹ ಕೆಲ ಘಟನೆಗಳು ಸೆಲ್ಫ್ ಡ್ರೈವಿಂಗ್ ತಂತ್ರಜ್ಞಾನಕ್ಕೆ ಸವಾಲಾಗಿವೆ. ಆದರೂ ಸುಧಾರಿತ ತಂತ್ರಜ್ಞಾನದ ಪ್ರಯೋಗಗಳು ನಡೆಯುತ್ತಲೇ ಇವೆ.
ಎಫ್‌ಎಸ್‌ಡಿ ಎಂದರೇನು?
ಡ್ರೈವರ್ ಅಸಿಸ್ಟೆಂಟ್ ವೈಶಿಷ್ಟ್ಯಗಳನ್ನು ಆಟೋಪೈಲಟ್ ಅಥವಾ ಎಫ್‌ಎಸ್‌ಡಿ ಎಂದು ಟೆಸ್ಲಾ ಕರೆಯುತ್ತದೆ. ಆದರೆ ವಾಹನ ಚಲನೆಯಲ್ಲಿ ಸಂಪೂರ್ಣ ಸ್ವಾಯತ್ತವಾಗಿರುವುದಿಲ್ಲ. ಸಕ್ರಿಯ ಚಾಲಕ ಮೇಲ್ವಿಚಾರಣೆಯ ಅಗ್ಯವಿದೆ. ಎಫ್‌ಎಸ್‌ಡಿ ಆಟೋಪೈಲಟ್ ಸಾಫ್ಟ್‌ವೇರ್‌ನ ಅತ್ಯಂತ ಸ್ವಾಯತ್ತ ಆವೃತ್ತಿಯಾಗಿದೆ. ಸ್ವಯಂ ಪಾರ್ಕಿಂಗ್, ಸ್ವಯಂ ಪಥ ಬದಲಾವಣೆ, ಟ್ರಾಫಿಕ್ ನ್ಯಾವಿಗೇಷನ್ ಸೇರಿ ಹಲವು ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಇದನ್ನೂ ಓದಿ: ಎಲೋನ್ ಮಸ್ಕ್ ಭಾರತ ಭೇಟಿ ಮುಂದಕ್ಕೆ – ಸದ್ಯಕ್ಕಿಲ್ಲ ಮೋದಿ ಜೊತೆಗೆ ಮಾತುಕತೆ
2020 ರಲ್ಲೇ ಚೀನಾದಲ್ಲಿ ಟೆಸ್ಲಾ ಘಟಕ
ಟೆಸ್ಲಾವು (Tesla) 2020 ರಲ್ಲೇ ಶಾಂಘೈನಲ್ಲಿ 58 ಸಾವಿರ ಕೋಟಿ ವೆಚ್ಚದಲ್ಲಿ ತನ್ನ ಘಟಕ ಸ್ಥಾಪಿಸಿತು. ಬಳಿಕ ಚೀನಾದಲ್ಲಿ ಟೆಸ್ಲಾ ಕಂಪನಿ ಕಾರುಗಳು ಜನಪ್ರಿಯವಾದವು. ಆದರೂ ಸ್ವಯಂಚಾಲಿತ ಪಥ ಬದಲಾವಣೆಯಂತಹ ಕಾರ್ಯಾಚರಣೆಗಳಿಗೆ ಸಿಸ್ಟಮ್ ಅನ್ನು ಟೆಸ್ಲಾ ಸೀಮಿತಗೊಳಿಸಿದೆ.
ಚೀನಾದಲ್ಲಿ ಎಫ್‌ಎಸ್‌ಡಿ ಲಭ್ಯತೆಯು ಟೆಸ್ಲಾಗೆ ವಿಶ್ವದ ಅತಿದೊಡ್ಡ ಆಟೋ ಮಾರುಕಟ್ಟೆಯಲ್ಲಿ ಸ್ಥಳೀಯ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಲು ಅನುವು ಮಾಡಿಕೊಡುತ್ತದೆ. ಟೆಸ್ಲಾ ಇಲ್ಲಿಯವರೆಗೆ ಚೀನಾದಲ್ಲಿ 17 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.
ಟೆಸ್ಲಾ ವಾಹನ ಮಾರಾಟವು ಸುಮಾರು 4 ವರ್ಷಗಳಲ್ಲಿ ಮೊದಲ ಬಾರಿಗೆ ಕುಸಿತ ಕಂಡಿತು. ಕಂಪನಿಯು ಎರಡನೇ ತ್ರೈಮಾಸಿಕದಲ್ಲಿ ತನ್ನ ಜಾಗತಿಕ ಉದ್ಯೋಗಿಗಳ ಪೈಕಿ ಶೇ.10 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತು. ಅಮೆರಿಕ, ಚೀನಾ ಮತ್ತು ಯೂರೋಪ್ ಸೇರಿದಂತೆ ಪ್ರಮುಖ ಮಾರುಕಟ್ಟೆಯಲ್ಲಿ ವಾಹನಗಳ ಬೆಲೆ ಕಡಿತಗೊಳಿಸಿತು. ಇದನ್ನೂ ಓದಿ: ಮಸ್ಕ್‌ನ ಸ್ಪೇಸ್‍ಎಕ್ಸ್ ರಾಕೆಟ್‍ನಲ್ಲಿ ಶೀಘ್ರ ಇಸ್ರೋ ಉಪಗ್ರಹ ಉಡಾವಣೆ
ಬೀಜಿಂಗ್‌ನಲ್ಲಿ ಆಟೊ ಶೋ ಪ್ರಾರಂಭವಾಗಿದೆ. ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚೀನಾದ ಆಹ್ವಾನದ ಮೇರೆಗೆ ಮಸ್ಕ್ ಚೀನಾಗೆ ಭೇಟಿ ನೀಡಿದ್ದಾರೆ.
ಚೀನಾ ಆಯ್ಕೆ ಏಕೆ?
ಟೆಸ್ಲಾ ಕಂಪನಿಯು ನಾಲ್ಕು ವರ್ಷಗಳ ಹಿಂದೆಯೇ ಸಂಪೂರ್ಣ ಸ್ವಯಂ ಚಾಲಿತ (ಎಫ್‌ಎಸ್‌ಡಿ) ಆಟೋಪೈಲಟ್ ಸಾಫ್ಟ್‌ವೇರನ್ನು ಹೊರ ತಂದಿದೆ. ಆದರೂ ಚೀನಾದಲ್ಲಿ (China) ಅದನ್ನು ಬಳಕೆಗೆ ಬಿಡುಗಡೆ ಮಾಡಿಲ್ಲ. ಎಫ್‌ಎಸ್‌ಡಿ ಬಿಡುಗಡೆಗೆ ಗ್ರಾಹಕರು ಮಸ್ಕ್ ಅವರಲ್ಲಿ ಆಗ್ರಹಿಸಿದ್ದಾರೆ. ಅದಕ್ಕೆ ಮಸ್ಕ್ ಸಕಾರಾತ್ಮವಾಗಿಯೇ ಸ್ಪಂದಿಸಿದ್ದರು. ಶಾಂಘೈ ಘಟಕದಲ್ಲಿ ಟೆಸ್ಲಾ ಮಾಡೆಲ್ 3 ಮತ್ತು ಮಾಡೆಲ್ ವೈ ಸೇರಿ ವರ್ಷಕ್ಕೆ ಒಟ್ಟು 10 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತಿದೆ. ಸ್ವಯಂ ಚಾಲಿತ ತಂತ್ರಾಂಶಕ್ಕೆ ರಸ್ತೆ, ನಿಯಮಗಳ ಬಗ್ಗೆ ತರಬೇತಿ ನೀಡುವ ನಿಟ್ಟಿನಲ್ಲಿ ಟೆಸ್ಲಾ ಚೀನಾದಲ್ಲಿ 2021ರಿಂದ ಮಾಹಿತಿ ಕಲೆ ಹಾಕಿದೆ. ಅಲ್ಗಾರಿದಮ್‌ನ ತರಬೇತಿಗಾಗಿ ಆ ಮಾಹಿತಿಯನ್ನು ವರ್ಗಾಯಿಸಲು ಸರ್ಕಾರದ ಅನುಮೋದನೆಗಾಗಿ ಮಸ್ಕ್ ಕೋರಿದ್ದಾರೆ.