Russia-Ukraine Crisis: ರಷ್ಯಾಗೆ ಮತ್ತೊಂದು ಶಾಕ್ – SWIFTನಿಂದ ರಷ್ಯಾವನ್ನು ದೂರವಿಡಲು ತೀರ್ಮಾನ

Public TV
2 Min Read
SWIFT

ಕೀವ್: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿರುವ ಮಧ್ಯೆ, ಅಮೆರಿಕಾ, ಕೆನಡಾ, ಬ್ರಿಟನ್ ಮತ್ತು ಪಶ್ಚಿಮ ದೇಶಗಳು ಮತ್ತೊಂದು ಪ್ರಮುಖ ನಿರ್ಣಯ ಕೈಗೊಳ್ಳುವ ಮೂಲಕ ರಷ್ಯಾಗೆ ಭಾರೀ ಶಾಕ್ ನೀಡಿವೆ. ಹಣಕಾಸು ವ್ಯವಹಾರ ವಿನಿಮಯ ಸಂಸ್ಥೆ ಸ್ವಿಫ್ಟ್‌ (Society For Worldwide Interbank Financial Telecommunications) ನಿಂದ ರಷ್ಯಾವನ್ನು ದೂರವಿಡಲು ತೀರ್ಮಾನಿಸಿವೆ.

russia putin

ರಷ್ಯಾದ ಶ್ರೀಮಂತರ ಗುಂಪು – ಒಲಿಗಾರ್ಕ್‍ಗಳ ಆಸ್ತಿ ಬೇಟೆಗೆ ಪ್ರತ್ಯೇಕ ಫೋರ್ಸ್ ರಚಿಸಲು ಅಮೆರಿಕಾ ನಿರ್ಧರಿಸಿದೆ. ಕಳೆದ ನಾಲ್ಕು ದಿನಗಳಿಂದ ರಷ್ಯಾ, ಉಕ್ರೇನ್‍ನಲ್ಲಿ ರಕ್ತಪಾತ ನಡೆಸುತ್ತಿದೆ. ಬಾಂಬ್, ಕ್ಷಿಪಣಿಗಳ ಮೂಲಕ ಉಕ್ರೇನ್‍ಗೆ ನಡುಕ ಹುಟ್ಟಿಸಿದೆ. ಈ ನಡೆಯನ್ನು ಅಮೆರಿಕಾ ಸಹಿತ ಪ್ರಮುಖ ದೇಶಗಳು ಭಾರೀ ವಿರೋಧ ವ್ಯಕ್ತಪಡಿಸಿಸುತ್ತಿದೆ. ಇದರ ಭಾಗವಾಗಿ ರಷ್ಯಾವನ್ನು ಸ್ವಿಫ್ಟ್‌ನಿಂದ ಹೊರಗಿಡಲು ತೀರ್ಮಾನಿಸಿದೆ. ಇದನ್ನೂ ಓದಿ: ರಷ್ಯಾ ಸಂಧಾನ ಆಹ್ವಾನ ತಿರಸ್ಕರಿಸಿದ ಉಕ್ರೇನ್ – ಕೀವ್, ಖಾರ್ಕಿವ್ ಪ್ರದೇಶದಲ್ಲಿ ಗುಂಡಿನ ಸುರಿಮಳೆ

RUSSIA UKRANE WAR

ಏನಿದು ಸ್ವಿಫ್ಟ್ ?
SWIFT ಇದು ಅಂತರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆಯಾಗಿದ್ದು, ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ನಡೆಯಲು ನೆರವಾಗುವಂತಹ ವ್ಯವಸ್ಥೆ ಸ್ವಿಫ್ಟ್‌ನಲ್ಲಿದೆ. 1973ರಲ್ಲಿ ಬೆಲ್ಜಿಯಂನಲ್ಲಿ ಆರಂಭವಾದ ಸ್ವಿಫ್ಟ್ ನೆಟ್‍ವರ್ಕ್‍ನಲ್ಲಿ 200 ದೇಶಗಳ 11 ಸಾವಿರ ಬ್ಯಾಂಕ್‍ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಗಳು, ಸಂಸ್ಥೆಗಳ ಮಧ್ಯೆ ಲಕ್ಷ ಕೋಟಿ ಡಾಲರ್‌ಗಳ ವ್ಯವಹಾರ ನಡೆಯುತ್ತದೆ. ಇದೀಗ ಸ್ವಿಫ್ಟ್‌ನಿಂದ ರಷ್ಯಾವನ್ನು ದೂರ ಇಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

Russia Ukraine War 2 1

SWIFTನಿಂದ ರಷ್ಯಾ ಹೊರಗೆ ನಷ್ಟವೇನು?
ಸ್ವಿಫ್ಟ್‌ನ ಒಟ್ಟು ವ್ಯವಹಾರದಲ್ಲಿ ರಷ್ಯಾ ಪಾಲು ಶೇಕಡಾ 1 ರಷ್ಟಿದ್ದು, ಸ್ವಿಫ್ಟ್ ನೆರವಿಲ್ಲದೇ ಅಂತರಾಷ್ಟ್ರೀಯ ಆರ್ಥಿಕ ವ್ಯವಹಾರ ಕಷ್ಟವಾಗಬಹುದಾಗಿದೆ. ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿ ರಷ್ಯಾ ಒಬ್ಬಂಟಿಯಾಗಲಿದೆ. ದಿಗ್ಬಂಧನ ತಡೆದುಕೊಳ್ಳಲು ರಷ್ಯಾ ಬಳಿ 600 ಬಿಲಿಯನ್ ಡಾಲರಗಳಷ್ಟು ಅಂತರಾಷ್ಟ್ರೀಯ ಮೀಸಲು ನಿಧಿ ಇದೆ. ಈ ಮೀಸಲು ನಿಧಿಯನ್ನು ರಷ್ಯಾದ ಸೆಂಟ್ರಲ್ ಬ್ಯಾಂಕ್ ಬಳಸಿಕೊಳ್ಳದಂತೆ ಬ್ಯಾನ್ ಆಗಲಿದೆ. ಅಲ್ಲದೇ ಸ್ಥಳೀಯ ಕರೆನ್ಸಿಗಾಗಿ ಸೆಂಟ್ರಲ್ ಬ್ಯಾಂಕ್ ಬಳಿಯ ವಿದೇಶಿ ಆಸ್ತಿ ಮಾರಲಾಗುವುದಿಲ್ಲ. ವಿದೇಶಗಳಲ್ಲಿರುವ ರಷ್ಯಾದ ಮೀಸಲು ನಿಧಿ ಫ್ರೀಜ್ ಆಗಲಿದ್ದು, ರೂಬುಲ್ ಕರೆನ್ಸಿ ಮೌಲ್ಯ ಪತನಗೊಳ್ಳಲಿದೆ. ಆಗ ಇದರ ಬಳಕೆ ಕಷ್ಟವಾಗಬಹುದು. ಇದೆಲ್ಲದರ ಜೊತೆಗೆ ತೈಲ, ಅನಿಲ ಮಾರಾಟದಿಂದ ಬರುವ ಆದಾಯ ಗಣನೀಯವಾಗಿ ಕುಸಿಯಲಿದೆ. ರಷ್ಯಾದ ಆದಾಯದಲ್ಲಿ ತೈಲ, ಅನಿಲ ಮಾರಾಟದ ಪಾಲು ಶೇಕಡಾ 40 ರಷ್ಟಿದೆ. 2012ರಲ್ಲಿ ಸ್ವಿಫ್ಟ್‌ನಿಂದ ಇರಾನ್ ದೇಶವನ್ನು ಹೊರಗಿಡಲಾಗಿತ್ತು. ಇದರಿಂದ ಇರಾನ್ ಆರ್ಥಿಕವಾಗಿ ತುಂಬಾ ನಷ್ಟ ಅನುಭವಿಸಿತ್ತು. ಶೇಕಡಾ 50 ರಷ್ಟು ತೈಲಾದಾಯ, ಶೇಕಡಾ 30 ರಷ್ಟು ವಿದೇಶಿ ವ್ಯಾಪಾರ ಕಳೆದುಕೊಂಡಿತ್ತು.  ಇದನ್ನೂ ಓದಿ: ರಷ್ಯಾ ಸೈನಿಕರನ್ನು ಸೆರೆ ಹಿಡಿದು ಅರೆಬೆತ್ತಲೆಗೊಳಿಸಿ ಸಿಗರೇಟ್ ಸೇದಿಸಿದ ಉಕ್ರೇನ್ ಸೇನೆ

Share This Article