ಬೆಂಗಳೂರು: ಕನ್ನಡ ನಾಡು, ನುಡಿ, ಜಲ, ಭಾಷೆ ವಿಚಾರದಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಕೊಡುಗೆ ರಾಜ್ಯಕ್ಕೆ ಏನು ಅಂತ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಪ್ರಶ್ನೆ ಮಾಡಿದ್ದಾರೆ.
ನೀರಾವರಿ ವಿಚಾರದಲ್ಲಿ ದೇವೇಗೌಡರು (Devegowda) ಮೋದಿಯವರ (Narendra Modi) ಚಿಯರ್ ಲೀಡರ್ ಆಗೋದು ಬೇಡ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಸಿದ್ದರಾಮಯ್ಯರಿಂದ ದೇವೇಗೌಡರು ನೀರಾವರಿ, ರಾಜ್ಯದ ಜನತೆಯ ರಕ್ಷಣೆ ಮಾಡೋಕೆ ಇವರಿಂದ ಹೇಳಿಸಿಕೊಳ್ಳಬೇಕಿಲ್ಲ.ಸಿದ್ದರಾಮಯ್ಯ ಅವರೇ ಈ ರಾಜ್ಯದ ನೆಲ, ಜಲ,ಭಾಷೆ ವಿಚಾರದಲ್ಲಿ ನಿಮ್ಮ ಕೊಡುಗೆ ಏನು?ನೀರಾವರಿಗೆ ಸಿದ್ದರಾಮಯ್ಯ ಕೊಡುಗೆ ಏನು?ಯಾವತ್ತಾದ್ರು ಒಂದು ದಿನ ನೀರಿನ ಬಗ್ಗೆ ವಿಧಾನಸಭೆಯಲ್ಲಿ ಮಾತಾಡಿದ್ದಾರಾ? ಅಂತ ಪ್ರಶ್ನೆ ಮಾಡಿದ್ರು.
Advertisement
Advertisement
ದೇವೇಗೌಡರು ಮೊನ್ನೆ 102 ಡಿಗ್ರಿ ಜ್ವರ ಇದ್ದರೂ IV ಹಾಕಿಸಿಕೊಂಡಿದ್ದರು. ಗೋದಾವರಿ-ಕೃಷ್ಣ-ಕಾವೇರಿ ನೀರಿನ ಬಗ್ಗೆ ಸಂಸತ್‌ನಲ್ಲಿ ಮಾತಾಡಿದ್ದಾರೆ. ರಾಜ್ಯದ ನೀರಾವರಿ ಬಗ್ಗೆ ಇವರಿಂದ ದೇವೇಗೌಡರು ಹೇಳಿಸಿಕೊಳ್ಳಬೇಕಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನನ್ನ ಟಾರ್ಗೆಟ್ ಮಾಡೋದಕ್ಕೆ ಕೇತಗಾನಹಳ್ಳಿ ಜಮೀನು ಸರ್ವೆ – ಕುಮಾರಸ್ವಾಮಿ ಕಿಡಿ
Advertisement
ಡಿಕೆಶಿವಕುಮಾರ್ ವಿರುದ್ದವೂ ವಾಗ್ದಾಳಿ ನಡೆಸಿದ ಹೆಚ್‌ಡಿಕೆ ರಾಜ್ಯಕ್ಕೆ ಡಿಕೆಶಿವಕುಮಾರ್ ಕೊಡುಗೆ ಏನು? ದುಡ್ಡು ಹೊಡೆದಿರೋದೆ ಡಿಕೆ ಶಿವಕುಮಾರ್ ಕೊಡುಗೆ. ಇವೆಲ್ಲದ್ರ ಬಗ್ಗೆ ಮಾತಾಡೋಣ. ಇನ್ನೊಂದು ವಾರ ನೋಡೋಣ. ಈ ಸರ್ಕಾರ ಏನೇನು ಮಾಡುತ್ತೆ. ರಾಜ್ಯದಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚೆಯೇ ಇಲ್ಲದಂತೆ ಆಗಿದೆ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
Advertisement