ಕನ್ನಡದ ಅಭಿಮಾನಿಗಳು ಶಿವರಾಜ್ ಕುಮಾರ್ ಅವರನ್ನು ಸೆಂಚ್ಯುರಿ ಸ್ಟಾರ್, ಶಿವಣ್ಣ ಅಂತ ಅಭಿಮಾನದಿಂದ ಕರೆಯುತ್ತಾರೆ. ಸಿನಿಮಾ ರಂಗದಲ್ಲಿ ಶಿವರಾಜ್ ಕುಮಾರ್ ಎಂದೇ ಫೇಮಸ್. ಆದರೆ, ಶಿವರಾಜ್ ಕುಮಾರ್ ನಿಜವಾದ ಹೆಸರು ಬೇರೆಯದ್ದೇ ಇದೆ ಅಂತೆ. ಪಾಸ್ ಪೋರ್ಟ್, ಬ್ಯಾಂಕ್ ಅಕೌಂಟ್, ಸರಕಾರಿ ದಾಖಲಾತಿಗಳಲ್ಲಿ ಅವರು ಹೆಸರು ಬೇರೆಯಾಗಿದ್ದು, ಸಿನಿಮಾ ರಂಗದಲ್ಲಿ ಮಾತ್ರ ಶಿವರಾಜ್ ಕುಮಾರ್ ಎಂದಿದೆಯಂತೆ.
ಈ ವಿಷಯವನ್ನು ಅವರೇ ಬಹಿರಂಗ ಪಡಿಸಿದ್ದಾರೆ. ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನನ್ನ ನಿಜವಾದ ಹೆಸರು ಶಿವರಾಜ್ ಕುಮಾರ್ ಅಲ್ಲ, ಬೇರೆಯದ್ದೇ ಇದೆ’ ಎಂದು ಹೇಳುವ ಮೂಲಕ ಅನೇಕರನ್ನು ಅಚ್ಚರಿಗೆ ದೂಡಿದ್ದಾರೆ. ಹಾಗಂತ ಅವರು ಹೆಸರು ಬದಲಾಯಿಸಿಕೊಂಡಿದ್ದು, ಸಿನಿಮಾ ರಂಗದ ಕೆಲವರಿಗೆ ಗೊತ್ತಿರುವ ವಿಚಾರ. ಆದರೆ, ಸಾರ್ವಜನಿಕರಿಗೆ ಈ ವಿಷಯವೇ ಗೊತ್ತಿರಲಿಲ್ಲ. ಇದನ್ನೂ ಓದಿ: ಎನ್.ಎಫ್.ಟಿ (NFT) ಮಾರುಕಟ್ಟೆಗೆ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿವಣ್ಣ, ‘ನನ್ನ ಹೆಸರು ನಾಗರಾಜು ಶಿವಪುಟ್ಟಸ್ವಾಮಿ’ ಎಂದು ಹೇಳಿದ್ದಾರೆ. ಈ ಹಿಂದೆ ಡಾ.ರಾಜ್ ಕುಮಾರ್ ಅವರು ಅದೆಷ್ಟು ಬಾರಿ ಶಿವರಾಜ್ ಕುಮಾರ್ ಕುರಿತು ಮಾತನಾಡುವಾಗ ತಮ್ಮ ತಂದೆಯ ಹೆಸರನ್ನೇ ಶಿವಣ್ಣನಿಗೆ ಇಟ್ಟಿದ್ದು ಎಂದು ಹೇಳಿದ್ದಾರೆ. ಶಿವಪುಟ್ಟಸ್ವಾಮಿ ನಿಜವಾದ ಹೆಸರು ಎಂದೂ ಹೇಳಿದ್ದಾರೆ. ಇಂದು ಬಹಿರಂಗವಾಗಿಯೇ ಶಿವರಾಜ್ ಕುಮಾರ್ ತಮ್ಮ ನಿಜವಾದ ಹೆಸರನ್ನು ಹೇಳಿದ್ದಾರೆ.