ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ (Contractor Sachin Suicide Case) ಪ್ರಿಯಾಂಕ್ ಖರ್ಗೆ (Priyank Kharge) ಅವರದ್ದು ಏನು ತಪ್ಪಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿನ್ ಕಾಂಟ್ರಾಕ್ಟರ್ ಅಲ್ಲ ಅನ್ನೋದು ಇದೆ, ಅವರು ಏನು ಬರೆದಿಟ್ಟಿದ್ದಾರೆ? ಪ್ರಿಯಾಂಕ್ ಖರ್ಗೆ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಸ್ವಾಭಾವಿಕವಾಗಿ ಅವರ ಮೇಲೆ ವಿಪಕ್ಷಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯಿಂದ ವರದಿ ಬರಲಿ. ಪ್ರಿಯಾಂಕ್ ಖರ್ಗೆ ಅವರದ್ದು ಆ ಪ್ರಕರಣದಲ್ಲಿ ಏನು ತಪ್ಪಿದೆ? ಪ್ರಿಯಾಂಕ್ ಖರ್ಗೆ ಸ್ವಲ್ಪ ಆ್ಯಕ್ಟಿವ್ ಇದ್ದಾರೆ. ಹಾಗಾಗಿ ಟಾರ್ಗೆಟ್ ಮಾಡಲಾಗ್ತಿದೆ ಅಷ್ಟೇ ಎಂದು ಕಿಡಿಕಾರಿದರು. ಇದನ್ನೂ ಓದಿ: ಎಸ್‌ಸಿ, ಎಸ್ಟಿ ಶಾಸಕರು, ಸಚಿವರು ಊಟಕ್ಕೆ ಕರೆದಿದ್ದಾರೆ, ಸಿಎಂ ಹೋಗಿದ್ದಾರೆ, ತಪ್ಪೇನು? – ಎಂ.ಬಿ ಪಾಟೀಲ್
Advertisement
Advertisement
ಕುಮಾರಸ್ವಾಮಿ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಚುನಾವಣೆ ಸೋಲಿನ ಬಳಿಕ ಸ್ವಲ್ಪ ನರ್ವಸ್ ಆಗಿದ್ದಾರೆ. ಉಪ ಚುನಾವಣೆ ಸೋತ ಮೇಲೆ ಅವರಲ್ಲಿ ಏನೇನೋ ಆಗಿದೆ. ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಸರ್ಕಾರ ಚೆನ್ನಾಗಿತ್ತು ಎಂಬ ಕುಮಾರಸ್ವಾಮಿ ಹೇಳಿಕೆ ಯಾವಾಗ ಬದಲಾಗುತ್ತೋ ಕಾದು ನೋಡಿ. ಸದ್ಯದಲ್ಲೇ ಅವರ ಹೇಳಿಕೆ ಬದಲಾಗಬಹುದು. ಉಪಚುನಾವಣೆ ಆದಮೇಲೆ ಪರಿಸ್ಥಿತಿ ಬದಲಾಗಿದೆ. ಸದ್ಯದಲ್ಲೇ ಅವರ ಹೇಳಿಕೆ ಬದಲಾಗಬಹುದು ಎಂದರು. ಇದನ್ನೂ ಓದಿ: ಪುರಿಯ ಜಗನ್ನಾಥ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ – ದೇವಾಲಯದ ಸುತ್ತ ಪೊಲೀಸ್ ಬಿಗಿಭದ್ರತೆ
Advertisement