ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾಗುತ್ತಿದ್ದಂತೆಯೇ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಅನಾರೋಗ್ಯಕ್ಕೀಡಾಗುತ್ತಿದ್ದಾನೆ. ಶೀತ, ಜ್ವರ ಹಾಗೂ ಕೆಮ್ಮು ಸಾಮಾನ್ಯವಾಗಿರುತ್ತದೆ. ಡೆಂಗ್ಯೂ, ಮಲೇರಿಯಾ, ಟೈಫಾಯ್ಡು, ಹಂದಿ ಜ್ವರ, ಕೊರೊನಾ ವೈರಸ್, ಹಕ್ಕಿ ಜ್ವರ ಕೇಳಿದ್ದೇವೆ. ಸದ್ಯ ಈ ಜ್ವರಗಳ ಜೊತೆ ಅಪರೂಪದಲ್ಲಿ ಅಪರೂಪದ ಗಿಳಿ ಜ್ವರವೂ ಸೇರಿಕೊಂಡಿದೆ.
ಹೌದು. ಗಿಳಿ ಜ್ವರ ನಾವು ಹೊಸದಾಗಿ ಕೇಳಿಸಿಕೊಂಡ ಸೋಂಕಾದರೆ ಯುರೋಪ್‌ನಾದ್ಯಂತ (Europe) ಈ ವರ್ಷ ಐವರ ಸಾವಿಗೆ ಕಾರಣವಾಗಿದೆ. ಈ ಮೂಲಕ ಯೂರೋಪಿಯನ್ನರನ್ನು ಭಾರೀ ಆತಂಕಕ್ಕೆ ದೂಡಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಡೆನ್ಮಾರ್ಕ್‌ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನೆದರ್‌ಲ್ಯಾಂಡ್‌ನಲ್ಲಿ ಓರ್ವ, ಮತ್ತು ಆಸ್ಟ್ರಿಯಾ, ಜರ್ಮನಿ ಮತ್ತು ಸ್ವೀಡನ್‌ನಾದ್ಯಂತ ಡಜನ್‌ಗಟ್ಟಲೆ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಿದ್ರೆ ಏನಿದು ಗಿಳಿ ಜ್ವರ..?, ಇದರ ಲಕ್ಷಣಗಳೇನು..?, ಚಿಕಿತ್ಸೆ ಏನು ಎಂಬುದನ್ನು ನೋಡೋಣ.
Advertisement
ಏನಿದು ಗಿಳಿ ಜ್ವರ?: ಈ ಜ್ವರವನ್ನು ಸಿಟ್ಟಾಕೋಸಿಸ್ ಎಂದೂ ಕರೆಯುತ್ತಾರೆ. ಇದು ಅಪರೂಪದ ಗಂಭೀರ ಸಮಸ್ಯೆ ಉಂಟು ಮಾಡುವ ವೈರಸ್ ಆಗಿದೆ. ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಇದು ಉಂಟಾಗುತ್ತದೆ. ಇದು ಪಕ್ಷಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಗಿಳಿಗಳು, ಪಾರಿವಾಳಗಳು ಹಾಗೂ ಕೋಳಿಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಬ್ಯಾಕ್ಟೀರಿಯಾವು ಗಾಳಿಯಿಂದ ಮನುಷ್ಯರಿಗೂ ಹರಡುತ್ತದೆ ಎಂಬುದಾಗಿ ವೈದ್ಯ ಮೂಲಗಳು ತಿಳಿಸಿವೆ.
Advertisement
ಗಿಳಿ ಜ್ವರವನ್ನು ಅಪರೂಪದ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಕೆನಡಾದಲ್ಲಿ (Canada) ಮನುಷ್ಯರ ಮೇಲೆ ಗಿಳಿ ಜ್ವರ (Parrot Fever) ಅಷ್ಟಾಗಿ ಪರಿಣಾಮ ಬೀರಿಲ್ಲ. ಹೀಗಾಗಿ ರಾಷ್ಟ್ರೀಯವಾಗಿ ಸೂಚಿಸಬಹುದಾದ ರೋಗವಲ್ಲ ಎಂದು ಕೆನಡಾ ಆರೋಗ್ಯ ಸಂಸ್ಥೆ ತಿಳಿಸಿದೆ.
Advertisement
ಗಿಳಿ ಜ್ವರ ಹೇಗೆ ಬರುತ್ತದೆ?: ಗಿಳಿ ಜ್ವರವು ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಬ್ಯಾಕ್ಟೀರಿಯಾದ ಸೋಂಕು. ಇದು ಸೋಂಕಿತ ಪಕ್ಷಿಗಳ ನೇರ ಸಂಪರ್ಕದ ಮೂಲಕ ಅಥವಾ ಅವುಗಳ ಹಿಕ್ಕೆಗಳು, ಗರಿಗಳು ಅಥವಾ ಉಸಿರಾಟದ ಸ್ರವಿಸುವಿಕೆಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಉಸಿರಾಟದ ಪರಿಸ್ಥಿತಿಗಳನ್ನು ಹೊಂದಿರುವ ಜನರು ಈ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ.
Advertisement
ಗಿಳಿ ಜ್ವರವು ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಬಳಿಕ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆನಡಿಯನ್ ಸೆಂಟರ್ ಫಾರ್ ಆಕ್ಯುಪೇಷನಲ್ ಹೆಲ್ತ್ ಅಂಡ್ ಸೇಫ್ಟಿ (CCOHS) ಹೇಳಿದೆ. ಅಪರೂಪದ ಸಂದರ್ಭದಲ್ಲಿ, ಯಕೃತ್ತಿನ ಉರಿಯೂತ, ಪೆರಿಕಾರ್ಡಿಯಮ್ (ಹೃದಯ ಕುಹರದ ಒಳಪದರ), ಮಯೋಕಾರ್ಡಿಯಂ (ಹೃದಯ ಸ್ನಾಯು) ಮತ್ತು ಮೆದುಳಿನ ಉರಿಯೂತ ವರದಿಯಾಗಿದೆ. ಸೋಂಕಿತ ಪ್ರಾಣಿಗಳನ್ನು ತಿನ್ನುವುದರಿಂದ ರೋಗವು ಹರಡುವುದಿಲ್ಲ ಎಂದು CCOHS ಹೇಳಿದೆ.
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಈ ಸೋಂಕು ಧೂಳಿನ ಕಣಗಳು, ನೀರಿನ ಹನಿಗಳ ಮೂಲಕ ಹಾಗೂ ಪಕ್ಷಿಗಳು ಮನುಷ್ಯರನ್ನು ಕಚ್ಚಿದಾಗಲೂ ಹರಡುತ್ತದೆ. ಇದಾದ ಕೆಲವು ದಿನಗಳ ಬಳಿಕ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತಾ ಹೋಗುತ್ತದೆ.ಕ್ರಮೇಣ ಈ ಸೋಂಕಿನಿಂದ ನ್ಯುಮೋನಿಯಾ ಮತ್ತು ಹೃದಯ ರಕ್ತನಾಳಗಳ ಉರಿಯೂತ ಸಂಭವಿಸಬಹುದು. ಹೆಪಟೈಟಿಸ್ ಮತ್ತು ನರಸಂಬಂಧಿ ಸಮಸ್ಯೆ ಕೂಡ ಎದುರಾಗುವ ಸಾಧ್ಯತೆಗಳಿವೆ. ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಸರಿಯಾದ ವೈದ್ಯಕೀಯ ನೆರವು ದೊರೆಯದಿದ್ದರೆ ಸಾವು ಸಂಭವಿಸುವ ಸಾಧ್ಯತೆಗಳಿವೆ.
ಲಕ್ಷಣಗಳೇನು..?: ಸೋಂಕು ತಗುಲಿದ ಕೂಡಲೇ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳಲ್ಲ. 5 ರಿಂದ 14 ದಿನಗಳ ಬಳಿಕ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವ್ಯಕ್ತಿಯು ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬಂದಾಗ ಆತನಿಗೆ ಶೀತ, ಒಣ ಕೆಮ್ಮು, ವಾಂತಿ, ಭೇದಿ, ತಲೆನೋವು, ಸ್ನಾಯು ಸೆಳೆತ ಮತ್ತು ಆಯಾಸ ಹಾಗೂ ಜ್ವರದ ರೀತಿಯ ರೋಗಲಕ್ಷಣಗಳು ಕಂಡುಬರುತ್ತದೆ. ಸೌಮ್ಯವಾದ ಪ್ರಕರಣಗಳಲ್ಲಿ ಜ್ವರವು ಮೂರು ವಾರಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯಬಹುದು. ಇದು ನ್ಯುಮೋನಿಯಾ ಹಾಗೂ ಕೆಲವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಇನ್ನೂ ಕೆಲವರಲ್ಲಿ ಎದೆನೋವು ಕಾಣಿಸಿಕೊಳ್ಳುವ ಸಾಧ್ಯತೆಗಳು ಕೂಡ ಇವೆ.
ಚಿಕಿತ್ಸೆ ಏನು?: ಸಾಮಾನ್ಯವಾಗಿ ಗಿಳಿ ಜ್ವರಕ್ಕೆ ಆಂಟಿಬಯೋಟಿಕ್‌ಗಳನ್ನು ನೀಡಲಾಗುತ್ತದೆ. ರೋಗ ಲಕ್ಷಣಗಳು ಹೆಚ್ಚಾದಂತೆ ಔಷಧಗಳೂ ಬೇರೆ ಬೇರೆಯಾಗುತ್ತಾ ಹೋಗುತ್ತದೆ. ಏಕೆಂದರೆ ರೋಗ ಲಕ್ಷಣಗಳು ತೀವ್ರಗೊಂಡಾಗ ನ್ಯುಮೋನಿಯಾ ಹಾಗೂ ಹೃದಯದ ರಕ್ತನಾಳಗಳ ಉರಿಯೂತ ಕೂಡಾ ಆಗಬಹುದು. ಹೆಪಟೈಟೀಸ್ ಹಾಗೂ ನರಗಳ ಸಮಸ್ಯೆ ಕೂಡ ಎದುರಾಗಬಹುದು. ಸೂಕ್ತ ಸಮಯದಲ್ಲಿ ವೈದ್ಯಕೀಯ ನೆರವು ಸಿಗದಿದ್ದರೆ ಸಾವನ್ನಪ್ಪುವ ಸಾಧ್ಯತೆಯೂ ಇದೆ.
ಪಾರಾಗುವುದು ಹೇಗೆ?: ಗಿಳಿ ಜ್ವರವನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಪಕ್ಷಿಗಳನ್ನು ನಿರ್ವಹಿಸುವಾಗ ಅಥವಾ ಪಕ್ಷಿಗಳು ಇರುವ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು. ನೀವು ಪಕ್ಷಿಗಳು ಅಥವಾ ಅವುಗಳ ಪಂಜರಗಳನ್ನು ನಿರ್ವಹಿಸುವಾಗ, ನಿಮ್ಮ ಕೈಗಳನ್ನು ತೊಳೆದುಕೊಳ್ಳಿ ಮತ್ತು ಪಕ್ಷಿ ಪಂಜರಗಳನ್ನು ಸ್ವಚ್ಛಗೊಳಿಸುವಾಗ ಕೈಗೆ ಗ್ಲೌಸ್‌ಗಳು ಮತ್ತು ಮಖಕ್ಕೆ ಮಾಸ್ಕ್ ಧರಿಸುವುದು ಅತ್ಯಗತ್ಯ. ಅಲ್ಲದೆ ಅದರ ಅಪಾಯಗಳ ಬಗ್ಗೆ ನಿಮಗೆ ಮತ್ತು ಇತರರಿಗೆ ಶಿಕ್ಷಣ ನೀಡುವುದು ಮತ್ತು ಅಗತ್ಯವಿದ್ದರೆ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಅತ್ಯಗತ್ಯ.
ಯುರೋಪಿನಲ್ಲಿ ಏಕಾಏಕಿ ಸಂಭವಿಸುವ ಬಗ್ಗೆ ಹೇಳುವುದಾದರೆ WHO ಪ್ರಕಾರ, ಆಸ್ಟ್ರಿಯಾದಲ್ಲಿ ಹಿಂದಿನ 8 ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ ಎರಡು ಪ್ರಕರಣಗಳಿಗೆ ಹೋಲಿಸಿದರೆ, 2023 ರಲ್ಲಿ 14 ಗಿಳಿ ಜ್ವರದ ಪ್ರಕರಣಗಳು ವರದಿಯಾಗಿವೆ. 2024 ರ ಮಾರ್ಚ್ 4 ರ ಹೊತ್ತಿಗೆ ದೇಶವು ನಾಲ್ಕು ಪ್ರಕರಣಗಳನ್ನು ವರದಿ ಮಾಡಿದೆ. ಡೆನ್ಮಾರ್ಕ್ 2023 ರ ಅಂತ್ಯದಿಂದ 2024 ರ ಜನವರಿ ಮಧ್ಯದವರೆಗೆ ಗಿಳಿ ಜ್ವರ ಪ್ರಕರಣಗಳಲ್ಲಿ ಹೆಚ್ಚಳವನ್ನು ವರದಿ ಮಾಡಿದೆ ಎಂದು WHO ಹೇಳಿದೆ. ಫೆಬ್ರವರಿ 27 ರ ಹೊತ್ತಿಗೆ 23 ವ್ಯಕ್ತಿಗಳು ರೋಗಕ್ಕೆ ತುತ್ತಾದರು. 17 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ 15 ಮಂದಿಗೆ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಇದೆ. ಇನ್ನು ನಾಲ್ವರು ಸಾವನ್ನಪ್ಪಿದ್ದಾರೆ.
2023ರ ಡಿಸೆಂಬರ್‌ನಲ್ಲಿ ಜರ್ಮನಿಯಲ್ಲಿ ಐವರಲ್ಲಿ ಗಿಳಿ ಜ್ವರ ದೃಢಪಟ್ಟಿತ್ತು. ಈ ಮೂಲಕ ಇದೇ ವರ್ಷ ಒಟ್ಟು 14 ಮಂದಿಯಲ್ಲಿ ಈ ಜ್ವರ ಕಾಣಿಸಿಕೊಂಡಿತ್ತು. 2024 ರ ಈ ಅವಧಿಯಲ್ಲಿ ಫೆಬ್ರವರಿ 20ರೊಳಗೆ ಮತ್ತೆ 5 ಪ್ರಕರಣಗಳು ವರದಿಯಾಗಿವೆ. 2023 ರ ನವೆಂಬರ್ ಕೊನೆಯಲ್ಲಿ ಮತ್ತು ಡಿಸೆಂಬರ್ ತಿಂಗಳ ಆರಂಭದಲ್ಲಿ ಸ್ವೀಡನ್ ನಲ್ಲಿಯೂ ಒಂದಷ್ಟು ಪ್ರಕರಣಗಳು ವರದಿಯಾಗಿವೆ. ನವೆಂಬರ್ ನಲ್ಲಿ 7 ಪ್ರಕರಣಗಳು ಮತ್ತು ಡಿಸೆಂಬರ್ ನಲ್ಲಿ 19 ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ತಿಂಗಳುಗಳಲ್ಲಿ ಆಯಾ ತಿಂಗಳುಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ. ಒಟ್ಟಿನಲ್ಲಿ ಯುರೋಪ್‌ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು WHO ಹೇಳಿದೆ.