ಏನಿದು ಕೊರಿಯನ್ ಫ್ಲಡ್‌ಗೇಟ್ ತಂತ್ರಜ್ಞಾನ? ಮುಂಬೈನ ಮಿಥಿ ನದಿಗೇಕೆ ಪ್ರವಾಹ ದ್ವಾರ?

Public TV
3 Min Read
Mumbai Mithi River

ಮುಂಬೈನ (Mumbai) ಪಶ್ಚಿಮ ಉಪನಗರಗಳ ತಗ್ಗು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟಲು, ಬೃಹನ್ಮುಂಬೈ ನಗರಸಭೆ ಕಾರ್ಪೊರೇಷನ್ 2,300 ಕೋಟಿ ರೂ.ಗಳಲ್ಲಿ ಮಿಥಿ ನದಿಯ ಉಬ್ಬರವಿಳಿತದ ವಲಯಗಳಲ್ಲಿ ಕನಿಷ್ಠ 25 ಪ್ರವಾಹ ದ್ವಾರಗಳನ್ನು ಸ್ಥಾಪಿಸುವ ಯೋಜನೆಗೆ ಮಣೆ ಹಾಕಿದೆ. ಈ ಯೋಜನೆಯು ಕೊರಿಯನ್ ಫ್ಲಡ್‌ಗೇಟ್ ತಂತ್ರಜ್ಞಾನದಿಂದ (Korean Flood Gate Technology) ಪ್ರೇರಿತವಾಗಿದೆ. ವಿಶೇಷವಾಗಿ ಅಪಾರ ಪ್ರವಾಹ ಮತ್ತು ಸುನಾಮಿಗಳಿಗೆ ಗುರಿಯಾಗುವ ಪ್ರದೇಶಗಳಲ್ಲಿ ಪ್ರವಾಹ ದ್ವಾರಗಳನ್ನು ನಿರ್ಮಿಸಲಾಗುತ್ತದೆ. 

ಮಿಥಿ ನಗರದಲ್ಲೇಕೆ ಈ ಪ್ರವಾಹ ದ್ವಾರವನ್ನು ನಿರ್ಮಿಸಲಾಗುವುದು?

ಮಿಥಿ ನದಿಯು (Mithi River) ಮುಂಬೈ ನಗರದ ಮೂಲಕ ಹರಿಯುವ 17.8 ಕಿಮೀ ಉದ್ದದ ನದಿಯಾಗಿದೆ. ಪೊವಾಯಿ ಸರೋವರ ಮತ್ತು ವಿಹಾರ್ ಸರೋವರದದಿಂದ ಈ ನದಿ ಹುಟ್ಟುತ್ತದ. ಇದು ಚಕಲಾ, ಕಲಿನಾ, ಸಾಕಿ ನಾಕಾ ಮತ್ತು ಬಾಂದ್ರಾ-ಕುರ್ಲಾ ಸೇರಿದಂತೆ ಮುಂಬೈನ ಕೆಲವು ಪ್ರವಾಹ ಪೀಡಿತ ವಲಯಗಳ ಮೂಲಕ ಹಾದುಹೋಗುತ್ತದೆ.

Mithi River ಮಿಥಿ ನದಿಯು ಪ್ರವಾಹಕ್ಕೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಭಾರೀ ಮಳೆಯ ಸಮಯದಲ್ಲಿ ಅದರ ಸಾಗಿಸುವ ಸಾಮರ್ಥ್ಯವು ಮಳೆನೀರು ಮತ್ತು ನಗರ ಘನ ತ್ಯಾಜ್ಯಗಳು ಈ ನದಿಯನ್ನು ಬಂದು ಸೇರುತ್ತದೆ. ಘನತ್ಯಾಜ್ಯವು ನದಿಯನ್ನು ಸೇರಿರುವುದರಿಂದ ನದಿ ಆಳ ಕಡಿಮೆಯಾಗಿದ್ದು, ಹೆಚ್ಚುವರಿ ನೀರನ್ನು ಸಂಗ್ರಹವಾಗುವ ಸಾಮರ್ಥ್ಯ ಕಡೆಮೆಯಾಗಿದೆ.

2005ರ ಪ್ರವಾಹಕ್ಕೆ ತತ್ತರಿಸಿದ್ದ ಮುಂಬೈ

ಜುಲೈ 26, 2005 ರಂದು ಮುಂಬೈನಲ್ಲಿ ಒಂದೇ ದಿನದಲ್ಲಿ ದಾಖಲೆಯ 944 ಮಿ.ಮೀ ಮಳೆಯಾಗಿ ತೀವ್ರ ಪ್ರವಾಹ ಉಂಟಾಗಿತ್ತು. ಮಿಥಿ ನದಿ ಉಕ್ಕಿ ಹರಿದಿದ್ದರಿಂದ ಕುರ್ಲಾ, ಸಿಯಾನ್ ಮತ್ತು ಕಲಿನಾದಂತಹ ತಗ್ಗು ಪ್ರದೇಶಗಳು ಸೇರಿ ನಗರದ ಜಲಾವೃತವಾಗಿತ್ತು. ಇದರಿಂದಾಗಿ 400 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ವ್ಯಾಪಕ ಹಾನಿ ಉಂಟಾಗಿತ್ತು.

Mithi Flood

ನದಿಯ ಉದ್ದಕ್ಕೂ ತಡೆಗೋಡೆಗಳನ್ನು ನಿರ್ಮಿಸಲಾಯಿತು. ಆದರೂ ತೀವ್ರವಾದ ಮಳೆಯಿಂದಾಗಿ ವಾಪಾಸ್‌ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಧಾರಾವಿ, ಕುರ್ಲಾ ಮತ್ತು ಮಿಲನ್ ಸಬ್‌ವೇ ಪ್ರದೇಶಗಳಲ್ಲಿ ನೀರು ನಿಂತು ಜನರು ಪರದಾಟ ನಡೆಸುತ್ತಿದ್ದರು.

ಏನಿದು ಕೊರಿಯನ್ ಫ್ಲಡ್‌ಗೇಟ್ ತಂತ್ರಜ್ಞಾನ?

ಮುಂಬೈನಂತೆಯೇ, ದಕ್ಷಿಣ ಕೊರಿಯಾ ಕೂಡ ಮಳೆಗಾಲದಲ್ಲಿ ಭಾರೀ ಮಳೆ ಮತ್ತು ಹಠಾತ್ ಪ್ರವಾಹ ಹಾಗೂ ಸುನಾಮಿ ಎದುರಾಗುತ್ತಿತ್ತು. ನೀರು ಎತ್ತರದ ಪ್ರದೇಶಗಳಿಂದ ತಗ್ಗು ಪ್ರದೇಶಗಳಿಗೆ ರಭಸದಿಂದ ಹರಿಯುವುದರಿಂದ ತಗ್ಗು ಪ್ರದೇಶಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತದೆ. ಆದ್ದರಿಂದ ತಗ್ಗು ಪ್ರದೇಶಗಳಲ್ಲಿ ಮತ್ತು ಉಬ್ಬರವಿಳಿತದ ವಲಯಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಪ್ರವಾಹ ದ್ವಾರಗಳನ್ನು ನಿರ್ಮಿಸಲಾಗಿದೆ.

Korean Flood Gate ಈ ಪ್ರವಾಹ ದ್ವಾರಗಳು ಅಡ್ಡಲಾಗಿ ತೆರೆದುಕೊಳ್ಳುತ್ತದೆ. ಪ್ರವಾಹ ದ್ವಾರಗಳಿಗಿಂತ ಅಂದರೆ ಲಂಬವಾಗಿ ಕಾರ್ಯನಿರ್ವಹಿಸುತ್ತವೆ. ಈ ದ್ವಾರವು ಹೆಚ್ಚುವರಿ ನೀರನ್ನು ಹೊರಹಾಕುವ ಪಂಪ್‌ಗಳನ್ನು ಹೊಂದಿದೆ. ಇದು ನೀರಿನ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಪ್ರವಾಹ ದ್ವಾರಗಳ ಒಂದು ವಿಶಿಷ್ಟ ಅಂಶವೆಂದರೆ ಲಂಬ ದ್ವಾರಗಳು ನೀರಿನ ಹರಿವನ್ನು ನಿಯಂತ್ರಣ ಮಾಡುತ್ತದೆ. ಇದು ನೀರಿನ ಹರಿವಿಗೆ ತಡೆಯಾಗುವುದಲ್ಲದೇ ಮತ್ತು ನಿಯಂತ್ರಿತ ನೀರಿನ ಬಿಡುಗಡೆಯನ್ನು ಮಾಡುತ್ತದೆ.

ಮುಂಬೈ ಈ ಕೊರಿಯನ್ ತಂತ್ರಜ್ಞಾನ ಏಕೆ?

ಮಿಥಿ ನದಿಯು ಕಿರಿದಾಗಿದ್ದು, ಅಡ್ಡ ದ್ವಾರಗಳನ್ನು ಅನುಮತಿಸುವುದಿಲ್ಲ. ಆದ್ದರಿಂದ, ಪ್ರವಾಹ ನೀರನ್ನು ತಡೆಯಲು ಲಂಬ ದ್ವಾರಗಳು ಸಹಾಯ ಮಾಡುತ್ತದೆ. ಅಧಿಕಾರಿಗಳು ಈ ದ್ವಾರಗಳನ್ನು ಆದ್ಯತೆ ನೀಡಲು ಮತ್ತೊಂದು ಕಾರಣವೆಂದರೆ ಅವು ನೀರಿನ ಹರಿವನ್ನು ನಿಯಂತ್ರಿಸುವುದಲ್ಲದೇ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. 

ಮುಂಬೈನಲ್ಲಿ ಈ ದ್ವಾರಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಮಹಿಮ್ ಕ್ರೀಕ್‌ನಿಂದ ಪ್ರಾರಂಭವಾಗಿ ಮುಂಬೈ ಉಪನಗರದ ಕಡೆಗೆ 8 ಕಿ.ಮೀ ವರೆಗೆ ವಿಸ್ತರಿಸುವ ಉಬ್ಬರವಿಳಿತದ ವಲಯಗಳಲ್ಲಿ ಗೇಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಗಾಲದ ಸಮಯದಲ್ಲಿ, ಈ ದ್ವಾರಗಳನ್ನು ನಿಯೋಜಿಸಲಾಗುತ್ತದೆ ಮತ್ತು ನೀರಿನ ಒಳಹರಿವು ನಿರ್ಬಂಧಿಸುತ್ತದೆ. ಅಲ್ಲದೇ ನಿರ್ದಿಷ್ಟ ಪ್ರಮಾಣದ ನೀರನ್ನು ಸಮುದ್ರಕ್ಕೆ ಪಂಪ್ ಮಾಡುತ್ತದೆ. ಹಾಗೆಯೇ ನೀರುಗಳನ್ನು ಮರುಬಳಕೆಗಾಗಿ ಹೋಲ್ಡಿಂಗ್ ಟ್ಯಾಂಕ್‌ಗಳಿಗೆ ವರ್ಗಾಯಿಸುತ್ತದೆ.

Mithi River 1

ಈ ತಂತ್ರಜ್ಞಾನ ಯಾವ ಪ್ರದೇಶಗಳಿಗೆ ಪ್ರವಾಹದಿಂದ ಮುಕ್ತಿ ಸಿಗುತ್ತೆ?

ವಿಮಾನ ನಿಲ್ದಾಣ ಪ್ರದೇಶದಿಂದ ಮಾಹಿಮ್ ಕಾಸ್‌ವೇವರೆಗಿನ ಪ್ರವಾಹ ಗೇಟ್‌ಗಳ ಅಳವಡಿಕೆಯು ಸಿಯಾನ್, ಚುನಾಭಟ್ಟಿ, ಎಲ್‌ಬಿಎಸ್ ಮಾರ್ಗ ಮತ್ತು ಕುರ್ಲಾ ಪ್ರದೇಶಗಳು ಪ್ರವಾಹದಿಂದ ಮುಕ್ತಿ ಸಿಗುತ್ತದೆ.

ಕೊರಿಯನ್ ಫ್ಲಡ್‌ಗೇಟ್ ತಂತ್ರಜ್ಞಾನದ ಪ್ರಮುಖ ಅಂಶಗಳು:

ಲಂಬ ಪ್ರವಾಹ ದ್ವಾರಗಳು: ಸಾಂಪ್ರದಾಯಿಕ ಸಮತಲ ದ್ವಾರಗಳಿಗಿಂತ ಭಿನ್ನವಾಗಿ, ಲಂಬ ದ್ವಾರಗಳಿಗೆ ಕಡಿಮೆ ಸ್ಥಳಾವಕಾಶ ಬೇಕಾಗುತ್ತದೆ. ನೀರಿನ ಹರಿವಿನ ನಿಯಂತ್ರಣವನ್ನು ಮಾಡುತ್ತದೆ. ನೀರಿಗೆ ಅಡಚಣೆ ಮತ್ತು ಹೆಚ್ಚುವರಿ ನಿಯಂತ್ರಿತ ನೀರನ್ನು ಬಿಡುಗಡೆ ಎರಡನ್ನೂ ಸಕ್ರಿಯವಾಗಿ ಮಾಡುತ್ತದೆ.

ನೀರು ತೆಗೆಯುವ ಪಂಪ್‌ಗಳು: ಈ ಪಂಪ್‌ಗಳು ಹೆಚ್ಚುವರಿ ನೀರನ್ನು ಹೊರಹಾಕುವ ಮೂಲಕ ನೀರಿನ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ನಗರ ಪ್ರದೇಶಗಳಿಗೆ ನೀರಿನ ಹಿಮ್ಮುಖ ಹರಿವನ್ನು ತಡೆಯುತ್ತದೆ.

ಪ್ರವಾಹ ಎಚ್ಚರಿಕೆ: AI-ಚಾಲಿತ ಮುನ್ಸೂಚನೆ, ಮಾರ್ಗದರ್ಶನ ಮತ್ತು ಎಚ್ಚರಿಕೆಗಳೊಂದಿಗೆ, ನಾಗರಿಕರಿಗೆ ಪ್ರವಾಹ ಅಪಾಯಗಳ ಬಗ್ಗೆ ಸಕಾಲಿಕ ಮಾಹಿತಿಯನ್ನು ಒದಗಿಸುತ್ತದೆ.

ಈ ರೀತಿಯಾಗಿ ಕೊರಿಯನ್‌ ಫ್ಲಡ್‌ಗೇಟ್‌ ತಂತ್ರಜ್ಞಾನವನ್ನು ಮುಂಬೈ ಮಿಥಿಯ ನದಿಯಲ್ಲಿ ಸಂಭವಿಸುವ ಪ್ರವಾಹ ಪರಿಸ್ಥಿಯನ್ನು ನಿಯಂತ್ರಿಸಲು ಬಳಸಲಾಗುತ್ತದೆ.

Share This Article