ಕಡಿಮೆ ದಿನಗಳಲ್ಲೇ ನೂರಾರು ಕೋಟಿ ಲಾಭ ತಂದುಕೊಟ್ಟ ಕಾಂತಾರ (Kantara) ಸಿನಿಮಾದ ಒಟ್ಟು ಬಜೆಟ್ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆದಿದೆ. ಈ ಸಿನಿಮಾಗೆ ಒಟ್ಟು ಎಷ್ಟು ಖರ್ಚಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಒಬ್ಬೊಬ್ಬರದ್ದು ಒಂದು ಲೆಕ್ಕ. ಆದರೆ, ಈವರೆಗೂ ಹೊಂಬಾಳೆ ಫಿಲ್ಮ್ಸ್ ಆಗಲಿ, ನಿರ್ದೇಶಕ ರಿಷಬ್ ಶೆಟ್ಟಿ ಆಗಲಿ ಬಜೆಟ್ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ (Rishabh Shetty) ಅವರ ತಂದೆ ಈ ಕುರಿತು ಮಾತನಾಡಿದ್ದಾರೆ.
Advertisement
ರಿಷಬ್ ಅವರ ತಂದೆಯೇ (Father) ಹೇಳಿದಂತೆ, ಮೊದಲು ಈ ಸಿನಿಮಾಗೆ ಅಂದುಕೊಂಡ ಬಜೆಟ್ (Budget) 7 ಕೋಟಿ ರೂಪಾಯಿ. ಸಿನಿಮಾ ಮುಗಿದಾಗ ಆದ ಒಟ್ಟು ಬಜೆಟ್ 16 ಕೋಟಿ ರೂಪಾಯಿ. ಈ ಕುರಿತು ಖಾಸಗಿ ವಾಹಿನಿಯ ಜೊತೆ ಮಾತನಾಡುತ್ತಾ, ‘ಮೊದಲು ಈ ಸಿನಿಮಾಗೆ ಅಂದುಕೊಂಡಿದ್ದು ಏಳು ಕೋಟಿ ರೂಪಾಯಿ. ಆನಂತರ ಆಗಿದ್ದು 15 ರಿಂದ 16 ಕೋಟಿ. ಯಾಕೆಂದರೆ, ಮಳೆ ಬಂದು ಮಣ್ಣೇ ಕರಗಿ ಹೋಯಿತು. ರಸ್ತೆ ಕೆಸರಾಗಿ ರಸ್ತೆಯೇ ಮುಚ್ಚಿ ಹೋಯಿತು. ರಸ್ತೆ ನಿರ್ಮಾಣಕ್ಕೆ ಜಲ್ಲಿ ತರಬೇಕಾಯಿತು. ಐದಾರು ತಿಂಗಳು ಮಳೆ ಬಂತು. ಹೀಗೆ ನಾನಾ ರೀತಿಯ ತೊಂದರೆಗಳಿಂದಾಗಿ ಬಜೆಟ್ ಜಾಸ್ತಿ ಆಯಿತು’ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್
Advertisement
Advertisement
ಕಾಂತಾರ ಸಿನಿಮಾ ಇದೀಗ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡವೂ ಸೇರಿದಂತೆ ಬಹುತೇಕ ಕಡೆ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದೆ. ಕೇವಲ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತ ಆಗಿದ್ದ ರಿಷಬ್, ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿದ್ದಾರೆ. ಹಾಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಿರ್ದೇಶಕನಿಗೆ ಹೊಸದೊಂದು ಬಿರುದು ಕೊಡಲು ಮುಂದಾಗಿದ್ದಾರೆ.
Advertisement
ರಿಯಲ್ ಸ್ಟಾರ್, ಪವರ್ ಸ್ಟಾರ್, ರಾಕಿಂಗ್ ಸ್ಟಾರ್, ಸೂಪರ್ ಸ್ಟಾರ್ ಹೀಗೆ ತಮ್ಮ ನೆಚ್ಚಿನ ಕಲಾವಿದರಿಗೆ ಅಭಿಮಾನಿಗಳು ಬಿರುದು ಕೊಟ್ಟು ಅಭಿಮಾನ ತೋರಿದ್ದಾರೆ. ರಿಷಬ್ ಶೆಟ್ಟಿ ಅವರಿಗೂ ಕೂಡ ಸದ್ಯ ‘ಡಿವೈನ್ ಸ್ಟಾರ್’ ಎಂದು ಬಿರುದು ಕೊಟ್ಟಿದ್ದು, ಅನೇಕರು ಇದೇ ಹೆಸರಿನಿಂದಲೇ ಕರೆಯುತ್ತಿದ್ದಾರೆ. ಈ ಹಿಂದೆ ಕಾಂತಾರ ಸಿನಿಮಾ ನೋಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ‘ಡಿವೈನ್’ ಶಬ್ದವನ್ನು ಬಳಸಿಯೇ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಹೀಗಾಗಿ ಅಭಿಮಾನಿಗಳು ಇನ್ಮುಂದೆ ‘ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ’ ಎಂದು ಕರೆಯಲು ನಿರ್ಧರಿಸಿರುವ ಕುರಿತು ಚರ್ಚೆ ಆಗುತ್ತಿದೆ.