– ತಮಿಳುನಾಡು ಏನಾದ್ರೂ ಪತ್ರ ಬರೆದುಕೊಳ್ಳಲಿ
ಬೆಂಗಳೂರು: ಏನಿದು ಅನ್ಯಾಯ? ಏನು ಕ್ರೈಂ ಮಾಡಿದ್ದಾರೆ? ಅದು ರಾಷ್ಟ್ರದ ಆಸ್ತಿ, ಸ್ವಂತದ್ದಲ್ಲ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹೊಸ ಸಂಪ್ರದಾಯ ಶುರು ಮಾಡಿದ್ದಾರೆ. ಪ್ರತಿಭಟನೆ ಮಾಡೋದು ನಮ್ಮ ಹಕ್ಕು. ನನ್ನನ್ನು ಇಡಿಗೆ ಕರೆದುಕೊಂಡು ಹೋಗಿದ್ದಾಗ ನ್ಯಾಷನಲ್ ಕಾಲೇಜಿನಿಂದ ಫ್ರೀಡಂ ಪಾರ್ಕ್‍ವರೆಗೂ ರ‍್ಯಾಲಿ ಮಾಡಲಾಗಿತ್ತು. ಯಾರಾದರೂ ಗಲಾಟೆ ಮಾಡಿದ್ರಾ? ಅವರು ನೋವು, ದುಃಖ ದುಮ್ಮಾನ ಹೇಳಿಕೊಂಡ್ರು ಎಂದು ಆಕ್ರೋಶ ಹೊರಹಾಕಿದರು.
Advertisement
Advertisement
ಪ್ರತಿಭಟನೆಗೆ ಹೋಗದಂತೆ ಎಲ್ಲ ಗಾಡಿಗಳನ್ನು ತಡೆ ಹಿಡಿದ್ದರು. ಬೆಳಗ್ಗೆ ಎಐಸಿಸಿ ಕಚೇರಿಗೆ ಹೆಚ್.ಕೆ.ಪಾಟೀಲ್, ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್ ಹೋದ್ರೆ ಬಂಧನ ಮಾಡಿದ್ದಾರೆ. ಏನಿದು ಅನ್ಯಾಯ, ಏನು ಕ್ರೈಂ ಮಾಡಿದ್ದಾರೆ. ಏನು ಮಾಡಬಾರದು ಮಾಡಿದ್ದಾರೆ? ನಮ್ಮ ಕಚೇರಿಗೆ ಹೋದ್ರೆ ಅರೆಸ್ಟ್ ಮಾಡುತ್ತಿದ್ದಾರೆ. ಇವರು ನೀಚ ರಾಜಕಾರಣ ಮಾಡುತ್ತಿದ್ದಾರೆ. ಅದಕ್ಕೆ ನಾವು ಹೋರಾಟ ಮಾಡ್ತೇವೆ. ನಮ್ಮ ನಾಯಕರು ಯಾವ ತಪ್ಪು ಮಾಡಿಲ್ಲ ಎಂದು ವಾದಿಸಿದರು.
Advertisement
ಸಂವಿಧಾನದಲ್ಲಿರುವ ಹಕ್ಕು ಬಗ್ಗೆ ನಿನ್ನೆ ಗಲಾಟೆ ಆಯಿತು. ಶ್ರೀನಿವಾಸ್ ಅವರು ಮನೆಯಿಂದ ಹೊರಬರುವ ಮುಂಚೆ ಅರೆಸ್ಟ್ ಮಾಡಲು ಹೋಗಿದ್ದರು. ಆತ ಪ್ರತಿಭಟನೆಗೆ ಹೋಗಬೇಕು. ಅರೆಸ್ಟ್ ಮುಖ್ಯನಾ, ಪ್ರತಿಭಟನೆ ಮುಖ್ಯನಾ. ಜವಾಬ್ದಾರಿನಾ? ಹೋಗಲೆ ಬಾರದು ಎಂದರೇ ಹೇಗೆ ಎಂದು ಪ್ರಶ್ನೆ ಕೇಳಿದರು. ಇದನ್ನೂ ಓದಿ: ರಾಯಚೂರಿಗೆ ಕೊನೆಗೂ ಭೇಟಿ ನೀಡಿದ ಉಸ್ತುವಾರಿ ಸಚಿವ: ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ
Advertisement
ನೋಟಿಸ್ ನೀಡಿದ್ರೆ ಭಯ ಯಾಕೆ ಎಂಬ ಬಿಜೆಪಿ ಹೇಳಕೆಗೆ ಪ್ರತಿಕ್ರಿಯೆ ಕೊಟ್ಟ ಅವರು, ಹತ್ತು ಗಂಟೆ ವಿಚಾರಣೆ ಯಾಕೆ? ಚುನಾವಣೆ ಅಫಿಡವಿತ್‌ನಲ್ಲಿ ಕೊಟ್ಟಿಲ್ಲವಾ? ಹತ್ತು ದಿನ ನನ್ನನ್ನು ವಿಚಾರಣೆ ಮಾಡಬೇಕಾ. ಯಾವ ಯಾವ ರೀತಿಯಲ್ಲಿ ಕಿರುಕುಳ ಕೊಟ್ಟಿದ್ದಾರೆ ಅಂತ ಹೇಳಿಲ್ಲ. ಇನ್ನೂ ಕೆಲ ವಿಚಾರ ಮಾತಾಡಿಲ್ಲ. ಬಿಜೆಪಿಯವರನ್ನು ರೆಡ್ ಮಾಡಿದಾಗ ಎಷ್ಟೆಷ್ಟು ಹಣ ಸಿಕ್ತು? ಯಾಕೆ ಇಡಿಗೆ ಕೇಸ್ ಹೋಗಿಲ್ಲ? ಅದು ರಾಷ್ಟ್ರದ ಆಸ್ತಿ, ಸ್ವಂತದ್ದಲ್ಲ. ಅವ್ರನ್ನ ಏನಾದ್ರೂ ಮಾಡಿ ಮನೆಗೆ ಸೇರಿಸಬೇಕು ಎಂದು ಕಿಡಿಕಾರಿದರು.
ಪಾದಯಾತ್ರೆ ತಿಹಾರ್ ಜೈಲಿಗೆ ಹೋಗುತ್ತದೆ ಎಂಬ ಅಶ್ವಥ್ ನಾರಾಯಣ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಈ ರಾಜ್ಯದ ಭ್ರಷ್ಟ ಶಿಕ್ಷಣ ಸಚಿವ. ಪ್ರತಿಯೊಂದು ಪೋಸ್ಟ್‌ಗೂ ದುಡ್ಡು. ಎರಡು ಸಾವಿರ, ಮೂರು ಸಾವಿರ, ಲಕ್ಷ ಸಂಗ್ರಹಿಸುವುದು ಮಾಡುತ್ತಿದ್ದರು. ಪಿಎಸ್‍ಐ ಪ್ರಕರಣ ಹೊರಗಡೆ ಬಂದ ತಕ್ಷಣ ಸುಮ್ಮನಾಗಿದ್ದಾರೆ. ಹಣ ಪಡೆದಿದ್ದು ಹೊರಗಡೆ ಬಂದಿದೆ. ನಾನು ಮುಂದೆ ಎಲ್ಲ ಮಾತಾಡುತ್ತೇನೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ತಡರಾತ್ರಿ ಬಸವಕಲ್ಯಾಣದಲ್ಲಿ ಮುಸ್ಲಿಮರಿಂದ ದಿಢೀರ್ ಪ್ರತಿಭಟನೆ – ವ್ಯಕ್ತಿ ಅರೆಸ್ಟ್
ಮೇಕೆದಾಟು ಯೋಜನೆ ವಿರೋಧಿಸಿ ತ.ನಾಡು ಸಿಎಂ ಪತ್ರ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರು, ತಮಿಳುನಾಡು ಏನಾದ್ರೂ ಪತ್ರ ಬರೆದುಕೊಳ್ಳಲಿ. ನಮ್ಮ ಜಾಗದಲ್ಲಿ ನಮ್ಮ ನೀರು. ನಿಮಗೆ ಮಾತನಾಡಲು ಧೈರ್ಯ ಇಲ್ಲಾ ಅಂದ್ರೆ ನಮ್ಮನ್ನ ದೆಹಲಿಗೆ ಕರೆದುಕೊಂಡು ನಡೀರಿ. ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ನಾವು ಮಾತನಾಡುತ್ತೇವೆ. ಮೇಕೆದಾಟು ನಮ್ಮ ಯೋಜನೆ, ನಮ್ಮ ನೀರು ನಮ್ಮ ಹಕ್ಕು ಎಂದು ತಿಳಿಸಿದರು.