ಹಾಲಿಡೇ ಹಾರ್ಟ್ ಸಿಂಡ್ರೋಮ್ (Holiday Heart Syndrome) ಎನ್ನುವುದು ಕೆಲವರಿಗೆ ಹೊಸ ಕಾಯಿಲೆ ಎನಿಸಬಹುದು. ಅತಿಯಾದ ಆಲ್ಕೋಹಾಲ್ (alcohol) ಸೇವನೆಯು ಹೃದಯ ಸಂಬಂಧಿ ಕಾಯಿಲೆಗೆ ಪ್ರಮುಖ ಕಾರಣವಾಗುತ್ತೆ. ಹೃದಯಾಘಾತವು (Heart Attack) ಯಾವುದೇ ಸೂಚನೆ ನೀಡದೆಯೂ ಸಂಭವಿಸಿ ಬಿಡಬಹುದು. ಅಮೆರಿಕಾದಲ್ಲಿ ಹೃದಯರಕ್ತನಾಳದ ಕಾಯಿಲೆಯು ಸಾಮಾನ್ಯ ಎನ್ನುವಂತಾಗಿದೆ.
ಹಾಗಾದ್ರೆ ಏನಿದು ಹಾಲಿಡೇ ಹಾರ್ಟ್ ಸಿಂಡ್ರೋಮ್? ಇದು ಹೇಗೆ ಸಂಭವಿಸುತ್ತೆ? ಅದರ ಲಕ್ಷಣಗಳನ್ನು ತಿಳಿದುಕೊಳ್ಳುವುದಾದರೂ ಹೇಗೆ ಎಂಬ ಅನೇಕ ಪ್ರಶ್ನೆಗಳು ಕಾಡಬಹುದು. ಅದಕ್ಕೆಲ್ಲ ಉತ್ತರ ಇಲ್ಲಿದೆ. ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?
Advertisement
ಹಾಲಿಡೇ ಹಾರ್ಟ್ ಸಿಂಡ್ರೋಮ್ ಅಂದ್ರೇನು?
ವರ್ಷದ ಯಾವುದೇ ಕಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಆದರೆ ರಜಾದಿನಗಳ ಸಂದರ್ಭದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ಹಾಲಿಡೇ ಹಾರ್ಟ್ ಸಿಂಡ್ರೋಮ್ ಎನ್ನುತ್ತಾರೆ. ಏಕೆಂದರೆ ಈ ಸಮಯದಲ್ಲಿ ಜನರು ಪಾರ್ಟಿ, ಮೋಜು-ಮಸ್ತಿ ಮಾಡುತ್ತಾರೆ. ಆಲ್ಕೋಹಾಲ್‌ಯುಕ್ತ ಪಾನಿಯಾಗಳು ಮತ್ತು ಕ್ಯಾಲರಿ ತಿಂಡಿಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
Advertisement
ಹಾಲಿಡೇ ಹಾರ್ಟ್ ಸಿಂಡ್ರೋಮ್‌ನ ಲಕ್ಷಣ ಯಾವುವು?
ಹೃದಯ ಬಡಿತ ಹೆಚ್ಚಾಗುವುದು, ಆಯಾಸ, ಹಗುರವಾದ ಭಾವನೆ, ಎದೆಯಲ್ಲಿ ಅಸ್ವಸ್ಥತೆ, ಉಸಿರಾಟದ ತೊಂದರೆ. ಇದನ್ನೂ ಓದಿ: ಹೃದಯಾಘಾತ – ಒಂದು ತಿಂಗಳ ಮುಂಚೆ ಈ 12 ರೋಗಲಕ್ಷಣಗಳು ಕಂಡುಬಂದ್ರೆ ಇರಲಿ ಎಚ್ಚರ!
Advertisement
Advertisement
ಹಾಲಿಡೇ ಹಾರ್ಟ್ ಸಿಂಡ್ರೋಮ್‌ನಿಂದ ಏನಾಗಬಹುದು?
ಇದರಿಂದ ಜೀವಕ್ಕೆ ಮುಂದೆ ಅಪಾಯ ಸಂಭವಿಸಬಹುದು. ಹೃದಯರಕ್ತನಾಳ ಸಂಬಂಧಿ ಸಮಸ್ಯೆಗೂ ಕಾರಣವಾಗುತ್ತೆ. ಇದನ್ನು ನಿರ್ಲಕ್ಷಿಸಿದರೆ ಪ್ರಾಣಕ್ಕೆ ಅಪಾಯ. ಅಷ್ಟೇ ಅಲ್ಲದೇ ನ್ಯುಮೋನಿಯಾಗೂ ಕಾರಣವಾಗಬಹುದು. ರಕ್ತ ಹೆಪ್ಪುಗಟ್ಟಿ ರಕ್ತನಾಳದಲ್ಲಿ ಅಡಚಣೆ ಉಂಟಾಗಬಹುದು.
ಕ್ರಿಸ್‌ಮಸ್, ನ್ಯೂ ಇಯರ್ ಹಾಲಿಡೇ ಅವಧಿಯಲ್ಲಿ ಶೇ.15 ಕೇಸ್ ಹೆಚ್ಚಳ
ಸ್ವೀಡಿಷ್ ಅಧ್ಯಯನದ ಪ್ರಕಾರ, ಕ್ರಿಸ್‌ಮಸ್ ಮತ್ತು ಹೊಸವರ್ಷದ ರಜಾದಿನಗಳ ಸಂದರ್ಭದಲ್ಲಿ ಹಾಲಿಡೇ ಹಾರ್ಟ್ ಸಿಂಡ್ರೋಮ್ ಸಮಸ್ಯೆ ಶೇ.15ರಷ್ಟು ಹೆಚ್ಚಿರುತ್ತದೆ. 75 ವರ್ಷ ಮೇಲ್ಪಟ್ಟವರು, ಮಧುಮೇಹ ಇರುವವರಿಗೆ ಹೆಚ್ಚು ಅಪಾಯ. ಇದನ್ನೂ ಓದಿ: ಮಧುಮೇಹಿಗಳು ಆಲೂಗಡ್ಡೆ ತಿನ್ನುವುದನ್ನು ನಿಲ್ಲಿಸಬೇಕೆ?
ಇದನ್ನು ತಡೆಗಟ್ಟುವುದು ಹೇಗೆ?
ರಜಾದಿನಗಳಲ್ಲಿ ಪಾರ್ಟಿ, ಮೋಜು-ಮಸ್ತಿ ಅಗತ್ಯವಿದ್ದರೂ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಜಂಕ್ ಫುಡ್‌ಗಳು ಮತ್ತು ಮದ್ಯಪಾನ ಸೇವನೆಯನ್ನು ಮಿತಗೊಳಿಸಿ. ಅಂತಹ ದಿನಗಳಲ್ಲಿ ಹೆಚ್ಚು ಶಾಂತ ರೀತಿಯಲ್ಲಿ ಇರಿ. ಇಂತಹ ಸಂದರ್ಭದಲ್ಲಿ ವ್ಯಾಯಾಮ ಮಾಡುವುದನ್ನು ನಿಲ್ಲಿಸಬೇಡಿ.